ನೆಲ್ಯಾಡಿ: ಇಚಿಲಂಪಾಡಿ ನೇರ್ಲದ ಸರ್ಕಾರಿ ಶಾಲೆ – ಪ್ರತಿಭಾ ಕಾರಂಜಿ

ನೆಲ್ಯಾಡಿ: ನೂಜಿಬಾಳ್ತಿಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ಇಚಿಲಂಪಾಡಿ ನೇರ್ಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಕೌಕ್ರಡಿ ಪಂಚಾಯತ್ ಅಧ್ಯಕ್ಷರಾದ ಲೋಕೇಶ್ ಬಾಣಜಲು ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಸಂತ ಬಿಜೇರು ರವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಕಡಬ ಸರಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಂಗಳೂರು ಇದರ ಕಾರ್ಯದರ್ಶಿಗಳಾದ ವಿಮಲ್, ಕಡಬ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾಮಕೃಷ್ಣ ಮಲ್ಲಾರ, ಅಲಂಕಾರ್ ಕ್ಲಸ್ಟರ್ ಪ್ರಕಾಶ್, ನೂಜಿಬಾಳ್ತಿಲ ಕ್ಲಸ್ಟರ್ ಗೋವಿಂದ ನಾಯ್ಕ್, ಕೌಕ್ರಾಡಿ ಗ್ರಾ.ಪಂ.ಸದಸ್ಯರುಗಳಾದ ಡೈಸಿ ವರ್ಗಿಸ್, ದಿನೇಶ್ ಬರಮೇಲು, ವಿಶ್ವನಾಥ ಕೊರಮೇರು, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ನಂದಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಗುರುಗಳಾದ ಜಯಶ್ರೀ ಎಸ್ ಸ್ವಾಗತಿಸಿದರು. ಶಿಕ್ಷಕರಾದ ಗಣೇಶ್ ನಡುವಾಳ್ ಕಾರ್ಯಕ್ರಮವನ್ನು ನಿರೂಪಿಸಿ, ನೇರ್ಲ ಶಾಲಾ ಶಿಕ್ಷಕರಾದ ಗಿರೀಶ್ ರವರು ವಂದಿಸಿದರು.

ಹಿರಿಯ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೇರ್ಲ- ಇಚಿಲಂಪಾಡಿ ಮತ್ತು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೆಂಜಿಲಾಡಿ ಪಡೆದುಕೊಂಡಿತು.

ಕಿರಿಯ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯನ್ನು ಸ್ಯಾಂತೊಮ್ ವಿದ್ಯಾನಿಕೇತನ್ ಶಾಲೆ ರೆಂಜಿಲಾಡಿ ಮತ್ತು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ನೇರ್ಲ- ಇಚಿಲಂಪಾಡಿ ಪಡೆದುಕೊಂಡಿತು.

Related Posts

Leave a Reply

Your email address will not be published.