ಕರ್ನಾಟಕದ ಪ್ರಯಾಣಿಕರು ಸೇಫ್ : ರೈಲ್ವೆ ಡಿಐಜಿ ಶಶಿಕುಮಾರ್

ಒಡಿಶಾದ ಬಾಲಸೋರ್ ಜಿಲ್ಲೆ ಬಹನಾಗ ಬಳಿ ಸಂಭವಿಸಿದ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಲಿನಲ್ಲಿದ್ದ ಕರ್ನಾಟಕದ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಕರ್ನಾಟಕದಿಂದ ಹೋಗಿರುವ ರೈಲಿಗೂ ಸಹ ಹಾನಿಯಾಗಿದೆ. 23 ರೈಲ್ವೆ ಬೋಗಿಗಳ ಪೈಕಿ 3 ಬೋಗಿಗೆ ಮಾತ್ರ ಹಾನಿಯಾಗಿದೆ. ಹಾನಿಯಾದ ಬೋಗಿಯಲ್ಲಿ ಕರ್ನಾಟಕದವರು ಇದ್ದ ಮಾಹಿತಿ ಇಲ್ಲ. ನಿನ್ನೆಯಿಂದಲೂ ರೈಲ್ವೆ ಇಲಾಖೆ ಅಧಿಕಾರಿಗಳು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ರೈಲ್ವೆ ಡಿಐಜಿ ಶಶಿಕುಮಾರ್ ಹೇಳಿದ್ದಾರೆ.

Related Posts

Leave a Reply

Your email address will not be published.