ಪಡುಬಿದ್ರಿ : ಜೆ.ಪಿ ಟ್ರೋಫಿ-2023 – ಪಡುಬಿದ್ರಿಯ ಆರ್.ಸಿ.ಪಿ ತಂಡಕ್ಕೆ ಗೆಲುವು
ಪಡುಬಿದ್ರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ನಡೆದ ನಿಗದಿತ ಒವರ್ ಗಳ “ಜೆ.ಪಿ. ಟ್ರೋಫಿ- 2023 “ಕ್ರಿಕೆಟ್ ಪಂದ್ಯಾಕೂಟದಲ್ಲಿ ಪಡುಬಿದ್ರಿಯ ಆರ್.ಸಿ.ಪಿ. ತಂಡ ಜೆ.ಪಿ. ಟ್ರೋಫಿ ತನ್ನದಾಗಿಸಿಕೊಂಡಿದೆ.
ಜಸ್ವಿದ್ ಪಡುಬಿದ್ರಿ, ಅಪ್ಪು ಪಡುಬಿದ್ರಿ, ಹಾಗೂ ರಂಜತ್ ಎರ್ಮಾಳ್ ನೇತ್ರತ್ವದಲ್ಲಿ ಎರಡು ದಿನಗಳ ಕಾಲ ನಡೆದ ಈ ಪಂದ್ಯಾಕೂಟದಲ್ಲಿ ಒಟ್ಟು ಹತ್ತು ತಂಡಗಳು ಭಾಗವಹಿಸಿದ್ದವು. ಇಪ್ಪತ್ತೊಂದು ವಯೋಮಿತಿಯವರಿಗೆ ನಡೆದ ಪಂದ್ಯಾಕೂಟದಲ್ಲಿ ಅಪ್ಪು ನೇತ್ರತ್ವದ ಆರ್.ಸಿ.ಪಿ. ತಂಡ ಪೈನಲ್ ಪ್ರವೇಶ ಕಂಡರೆ, ಎರಡನೇ ದಿನ ಎಲ್ಲಾ ವಯೋಮಿತಿಯವರಿಗಾಗಿ ನಡೆದ ಪಂದ್ಯಾವಳಿಯಲ್ಲಿ ಅದೇ ಅಪ್ಪು ನೇತೃತ್ವದ ಸಿನಿಯಾರ್ ಆರ್.ಸಿ.ಪಿ ತಂಡ ಪೈನಲ್ ಪ್ರವೇಶ ಕಂಡು ಅಂತಿಮವಾಗಿ ಸಿನಿಯರ್ ತಂಡವನ್ನು ಸೋಲಿಸಿದ ಜೂನಿಯರ್ ಆರ್.ಸಿ.ಪಿ ತಂಡ ಜಿ.ಪಿ. ಟ್ರೋಫಿಯನ್ನು ಗೆದ್ದುಕೊಂಡಿದೆ.
ಫೈನಲ್ ಪಂದ್ಯದ ಪಂದ್ಯಾ ಶ್ರೇಷ್ಠ ಪ್ರಶಸ್ತಿ ಆರ್.ಸಿ.ಪಿ. ಜೂನಿಯರ್ ತಂಡದ ಶರವನ್ ಪಡೆದುಕೊಂಡಿದ್ದು, ಉತ್ತಮ ಎಸೆತಗಾರ ಪ್ರಶಸ್ತಿ ಅದೇ ತಂಡದ ಪ್ರನೀಲ್ ಪಾಲಾಗಿದೆ. ಉತ್ತಮ ದಾಂಡಿಗ ಪ್ರಶಸ್ತಿ ಸಿನಿಯರ್ ತಂಡದ ಕಲಂದರ್ ಪಡೆದುಕೊಂಡರು. ಸರಣಿಯುದ್ಧಕ್ಕೂ ಬ್ಯಾಟ್ ಹಾಗೂ ಚೆಂಡಿನಲ್ಲಿ ಉತ್ತಮ ನಿರ್ವಹಣೆ ತೋರಿದ ಸ್ಥಳೀಯ ಪ್ರತಿಭೆ ತರುಣ್ ಪಡುಬಿದ್ರಿ ಅರ್ಹವಾಗಿಯೇ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪತ್ರಕರ್ತ ಸುರೇಶ್ ಎರ್ಮಾಳ್, ಶರತ್ ಶೆಟ್ಟಿ ಎರ್ಮಾಳು, ಸೌಜನ್ ಪಡುಬಿದ್ರಿ, ದಿನೇಶ್ ಪಡುಬಿದ್ರಿ, ಚಂದ್ರಶೇಖರ ಬೀಡು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ಯಾಮಸುಂದರ್ ಪಡುಬಿದ್ರಿ ನಿರ್ವಾಹಿಸಿದ್ದರು.