ಏಕರೂಪ ನಾಗರಿಕ ಸಂಹಿತೆ ಕುರಿತು ಮಂಗಳೂರು ಧರ್ಮಕೇಂದ್ರ ಕೈಸ್ತ ಮುಖಂಡರ ಸಭೆ
ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ಬಗ್ಗೆ ಇರುವ ಸಾಧಕ-ಭಾದಕಗಳ ಬಗ್ಗೆ ಮಂಗಳೂರು ಧರ್ಮಕೇಂದ್ರ ಕೈಸ್ತ ಮುಖಂಡರು ಸಭೆ ಸೇರಿ ಚರ್ಚಿಸಿದರು.ಕರ್ನಾಟಕದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಡಿಕುನ್ಹಾ ರವರು ಸವಿಸ್ತಾರವಾಗಿ ವಿಷಯವನ್ನು ಸಭೆಗೆ ಮಂಡಿಸಿದರು. ಹಿರಿಯ ಬರಹಗಾರಾ ಹಾಗೂ ಸೆವಕ್ ವಾಡಿಚಿ ಪತ್ರಿಕೆಯ ಸಂಪಾದಕ ವಂದನೀಯ ಚೇತನ್ ಲೋಬೊ ಪ್ರತಿಕ್ರಿಯೆ ನೀಡಿದರು. ಸಭಾ ಪಾಲಕರಾದ ಖ್ಯಾತ ವಕೀಲರಾದ ಎಂ. ಪಿ. ನೊರೊನ್ಹಾರವರು ವಿವಿಧ ವಿಚಾರಗಳನ್ನು ಪ್ರಸ್ತಾವಿಸಿ ಸದಸ್ಯರ ಆಭಿಪ್ರಾಯಗಳನ್ನು ಸಕ್ರಿಯವಾಗಿ ಚರ್ಚಿಸಲು ಅವಕಾಶವನ್ನು ಮಾಡಿಕೊಟ್ಟರು ಮತ್ತುಮುಕ್ತ ಚರ್ಚೆ ನಡೆಯಿತು. ಸದಸ್ಯರ ಎಲ್ಲಾ ಅಭಿಪ್ರಾಯಗಳನ್ನು ಕ್ರೋಢಿಕರಿಸಿ ಈ ಕೆಳಗಿನ ಐದು ಠಾರವುಗಳನ್ನು ನಿರ್ಣಯಿಸಲಾಯಿತು ಮತ್ತು ಕಾನೂನು ಆಯೋಗಕ್ಕೆ ಸದರಿ ವಿಚಾರಗಳ ಬಗ್ಗೆ ಮನವಿ ನೀಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ಮಂಗಳೂರು ಬಿಷಪ್ ಆತೀ ವಂದನೀಯ ಡಾ| ಪೀತರ್ ಪಾವ್ಲ್ ಸಲ್ಡಾನ್ಹಾ, ಮಾಜಿ ಶಾಸಕರಾದ ಜೆ. ಆರ್ ಲೋಬೋ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮಹಾನಗರ ಪಾಲಿಕೆಯ ಪ್ರತಿಪಕ್ಷ ನಾಯಕ ನವೀನ್ ಡಿಸೋಜ, ಕರ್ನಾಟಕ ಸಿಆರ್‍ಐ ಅಧ್ಯಕ್ಷರಾದ ಭೆಥನಿ ಧರ್ಮಭಗಿನಿ ಸಿಸಿಲಿಯಾ ಮೆಂಡೊನ್ಸಾ, ಸಂಪರ್ಕಾಧಿಕಾರಿ ವಂದನೀಯ ಜೆ ಬಿ ಸಲ್ಡಾನ್ಹಾಹಾಗೂ ರೋಯ್ ಕ್ಯಾಸ್ತೆಲಿನೊ, ಕಥೊಲಿಕ್ ಸಭಾ ಅಧ್ಯಕ್ಷರಾದ ಆಲ್ವಿನ್ ದಿಸೋಜಾ, ಹಲಾವಾರು ಧರ್ಮಗುರುಗಳು, ಧರ್ಮಭಗಿನಿಯರು, ವಕೀಲರು ವೈದ್ಯರು ಮುಖಂಡರು ಮತ್ತು ಶ್ರೀಸಾಮಾನ್ಯರ ಹಾಜರಿದ್ದರು.
ಧರ್ಮ ಪ್ರಾಂತ್ಯದ ಶ್ರೀಸಾಮಾನ್ಯ ಆಯೋಗದ ಕಾರ್ಯದರ್ಶಿ ವಂದನೀಯ ಜೆ.ಬಿ. ಕ್ರಾಸ್ತಾ ಸ್ವಾಗತಿಸಿ, ಕುಟುಂಬ ಆಯೋಗದ ಕಾರ್ಯದರ್ಶಿ ವಂದನೀಯ ಅನಿಲ್ ಡಿಸೋಜಾ ಧನ್ಯವಾದ ಸಮರ್ಪಿಸಿದರು. ಧರ್ಮ ಪ್ರಾಂತ್ಯದ ಪಾಲನಾ ಪರಿಷದ್ ಕಾರ್ಯದರ್ಶಿ ಡಾ| ಜೋನ್ ಎಡ್ವರ್ಡ್ ಡಿಸಿಲ್ವಾ ಕಾರ್ಯಕ್ರಮವನ್ನು ನಿರೂಪಿಸಿದರು.ಪತ್ರಿಕಾ ಪ್ರತಿನಿಧಿ ಕೆನರಾ ಕಮ್ಯುನಿಕೇಷನ್ ಸೆಂಟರ್ ನಿರ್ದೇಶಕ ಅನಿಲ್ ಫೆನಾರ್ಂಡಿಸ್ ಹಾಗೂ ಶ್ರೀ ಎಲ್ಯಾಸ್ ಫೆರ್ನಾಂಡಿಸ್ ಹಾಜರಿದ್ದರು.