ಪಡುಬಿದ್ರಿ – ಕಡಲು ಕೊರೆತ ಶಾಶ್ವತ ಪರಿಹಾರಕ್ಕೆ ಚಿಂತನೆ : ಸಿಎಂ ಭರವಸೆ
ಕರಾವಳಿ ಭಾಗದಲ್ಲಿ ಸುಮಾರು 98 ಕೀ.ಮೀ. ಕಡಲು ಇದ್ದು, ಮಳೆಗಾಲದಲ್ಲಿ ತೆರೆಗಳ ಅಬ್ಬರಕ್ಕೆ ಕೊರೆತ ಆಗುವುದು ಸರ್ವೇ ಸಾಮಾನ್ಯ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಡಿ ಇಡುವುದಾಗಿ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅವರು ಪಡುಬಿದ್ರಿ ಮುಖ್ಯ ಬೀಚ್ ನಲ್ಲಿ ಕಡಲು ಕೊರೆತ ವೀಕ್ಷಿಸಿ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಖ್ಯ ಮಂತ್ರಿಗಳ ಬಗ್ಗೆ ಹಗುರವಾಗಿ ಮಾತನಾಡುವ ಕುರಿತು ಮಾದ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ…ಆತನೊಬ್ಬ ವಿಧೂಷಕ ಆತನ ಮಾತಿಗೆ ತೂಕವೂ ಇಲ್ಲ ಗಾತ್ರವೂ ಇಲ್ಲ ಅದಕ್ಕೆ ಉತ್ತರಿಸುವ ಅಗತ್ಯವೂ ಇಲ್ಲ ಎಂದರು.
ಉಡುಪಿ ಶೌಚಾಲಯ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೂ ದೂರು ನೀಡದಿದ್ದರೂ, ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಲಾಗಿದ್ದು, ಡಿವೈಎಸ್ ಪಿ ಮಟ್ಟದ ತನಿಖೆ ನಡೆಯುತ್ತಿದೆ ಎಂದರು.
ಈ ಸಂದರ್ಭ ಅವರೊಂದಿಗೆ, ಸಚಿವೆ ಲಕ್ಷ್ಮೀ ಹೆಬಾಳ್ಕರ್, ಮೀನುಗಾರಿಕಾ ಸಚಿವ ಮಂಕಾಳು ವೈದ್ಯ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಗೋಪಾಲ್ ಪೂಜಾರಿ ಉಡುಪಿ ಜಿಲ್ಲಾಧಿಕಾರಿ ಉಪಸ್ಥಿತರಿದ್ದು, ಸಿಎಂ ಭೇಟಿಯ ಸಂಪೂರ್ಣ ಬಂದೋಬಸ್ತ್ ನ್ನು ಐಜಿಪಿ, ಉಡುಪಿ ಎಸ್ಪಿ, ಡಿವೈಎಸ್ ಪಿ, ಸರ್ಕಲ್ ಇನ್ಸ್ ಪೆಕ್ಟರ್ ಗಳು, ಪಡುಬಿದ್ರಿ ಠಾಣೆ ಸಹಿತ ವಿವಿಧ ಠಾಣೆಗಳ ಪಿಎಸ್ ಐ ಗಳು ಸಹಿತ ಪೆÇಲೀಸ್ ಸಿಬ್ಬಂದಿಗಳು ಸಹಕರಿಸಿದ್ದರು.