ಪಡುಬಿದ್ರಿ: ಜನತೆಗೆ ಸಮಸ್ಯೆಯೊಡುತ್ತಿರುವ ಜೈಹಿಂದ್ ಸ್ಟೀಲ್ ಕಂಪನಿ ವಿರುದ್ಧ ಸಿಡಿದ್ದೆದ್ದ ಜನತೆ: ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಜನರಿಗೆ ಸಮಸ್ಯೆಯೊಡ್ಡುತ್ತಿರುವ ಸುಜ್ಲಾನ್ ಕಂಪನಿಯ ಸಮೀಪದ ಜೈಹಿಂದ್ ಟ್ಯೂಬ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ವಿರುದ್ಧ ಸಿಡಿದ್ದೇದ್ದ ಜನರು ಕಂಪನಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದು, ಇಪ್ಪತ್ತು ದಿನದೊಳಗೆ ಸಮಸ್ಯೆ ಇತ್ಯರ್ಥ ಮಾಡದೇ ಇದ್ದಲ್ಲಿ ಕಂಪನಿಯ ಮುಂಭಾಗ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಪಡುಬಿದ್ರಿ-ಹೆಜಮಾಡಿ ಗಡಿಭಾಗದಲ್ಲಿ ಇರುವ ಈ ಕಂಪನಿಗೆ ಪರವಾನಿಗೆ ಯಾರು ನೀಡ ಬೇಕೆಂಬ ಸ್ಪಷ್ಟತೆ ಇಲ್ಲ, ಸ್ಥಳೀಯರು ಅವಳಿ ಗ್ರಾಮ ಪಂಚಾಯಿತಿಗಳಿಗೂ ಈ ಕಂಪನಿಯ ವಿರುದ್ಧ ದೂರು ನೀಡಿದ್ದು, ಪಡುಬಿದ್ರಿ ಗ್ರಾ.ಪಂ.ಅಧ್ಯಕ್ಷರು, ಪಿಡಿಒ ಸಹಿತ ಕೆಲ ಗ್ರಾ.ಪಂ. ಸದಸ್ಯರ ನಿಯೋಗ ಕಂಪನಿಗೆ ಬಂದು ಅವರಿಂದ ಪೂರಕ ದಾಖಲೆ ಕೇಳಿದ್ದು, ನೀಡಲು ವಿಫಲವಾದ ಕಂಪನಿ ಮುಖ್ಯಸ್ಥರು, ಒಂದು ತಿಂಗಳ ಗಡುವು ಯಾಚಿಸಿದ್ದಾರೆ. ದಾಖಲೆಗಳನ್ನು ನೀಡುವುದಲ್ಲದೆ ಜನರಿಗೆ ಸಮಸ್ಯೆಯೊಡ್ಡುತ್ತಿರುವ ಕೆಮಿಕಲ್ಸ್ ಹೊಗೆಗೆ ಮುಕ್ತಿ ನೀಡುವ ಭರವಸೆ ವ್ಯಕ್ತ ಪಡಿಸಿ ತಿಂಗಳು ಕಳೆದರೂ ಕಂಪನಿ ಸಹಿತ ಪಡುಬಿದ್ರಿ ಗ್ರಾ.ಪಂ. ನಿಂದಲೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಈ ಕಂಪನಿಯಿಂದ ಸಮಸ್ಯೆ ಅನುಭವಿಸುತ್ತಿರುವ ನಾವು ಕಂಪನಿಗೆ ಮುತ್ತಿಗೆ ಹಾಕುವಂತ್ತಾಯಿತು ಎಂದಿದ್ದಾರೆ.

ಪ್ರತಿಭಟನೆಯ ಮುಂತಾಳತ್ವ ವಹಿಸಿದ್ದ ಸ್ಥಳೀಯರಾದ ವಿಜಯ ಶೆಟ್ಟಿ. ರಾತ್ರಿ ಹಗಲೆನ್ನದೆ ಕಂಪನಿಯಿಂದ ಹೊರ ಸೂಸುತ್ತಿರುವ ದುರ್ನಾತ ಹೊಗೆ ಚರ್ಮ ರೋಗ ಸಹಿತ ಕೆಮ್ಮಿಗೂ ಕಾರಣವಾಗುತ್ತಿದೆ ಹಾಗೂ ಉಕ್ಕಿನ ಶೀಟ್‍ಗಳು ಇದರಿಂದ ತುಕ್ಕು ಹಿಡಿಯುತ್ತಿದೆ, ಪರಿಸರ ಇಲಾಖೆಯ ಯಾವುದೇ ಪರವಾನಿಗೆ ಇಲ್ಲದೆ ನಡೆಸುತ್ತಿರುವ ಈ ಕಂಪನಿಯನ್ನು ಮುಚ್ಚಿ ನಮಗೆ ರಕ್ಷಣೆ ನೀಡುವಂತ್ತೆ ಜನ ಆಗ್ರಹಿಸಿದ್ದಾರೆ. ಒಂದು ಹಂತದಲ್ಲಿ ಜನರ ಬದುಕನ್ನು ಕಸಿಯುತ್ತಿರುವ ಕಂಪನಿಯನ್ನು ಮುಚ್ಚುವಂತೆ ಜನ ಆಗ್ರಹಿಸಿದಾಗ ಇಪ್ಪತ್ತು ದಿನಗಳ ಕಾಲಾವಕಾಶ ಕೋರಿದ್ದು ಆ ದಿನದೊಳಗೆ ಸಮಸ್ಯೆ ಪರಿಹಾರ ನಡೆಸುವಲ್ಲಿ ನಾವು ವಿಫಲವಾದೇವು ಎಂದಾದರೆ ನಿಮ್ಮ ನಿರ್ಧಾರಕ್ಕೆ ನಾವು ಬದ್ಧ ಎಂದಿದ್ದಾರೆ ಕಂಪನಿಯ ಅಧಿಕಾರಿಗಳು. ಈ ಸಂದರ್ಭ ಸ್ಥಳೀಯ ಹತ್ತಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related Posts

Leave a Reply

Your email address will not be published.