ಪಡುಬಿದ್ರಿ: ಎರ್ಮಾಳಿನ ಕೋಳಿಯಂಕಕ್ಕೆ ದಾಳಿ ಮೂವರು ವಶಕ್ಕೆ
ತೆಂಕ ಎರ್ಮಾಳು ಎಂಬಲ್ಲಿ ಅಕ್ರಮವಾಗಿ ಅಕ್ರಮವಾಗಿ ನಡೆಸುತ್ತಿದ್ದ ಕೋಳಿಯಂಕಕ್ಕೆ ದಾಳಿ ಮಾಡಿದ ಪೊಲೀಸರು ಮೂವರು ಸಹಿತ ಏಳು ಕೋಳಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪಣಿಯೂರು ನಿವಾಸಿಗಳಾದ ಸುರೇಶ್, ಸುಕೇಶ್ ಹಾಗೂ ಕಾಪು ನಿವಾಸಿ ನಾಗೇಶ್ ಬಂಧಿತರು. ಬಹಳಷ್ಟು ಮಂದಿ ಪೊಲೀಸ್ ದಾಳಿಯ ವಿಷಯ ತಿಳಿದು ಪಲಾಯನ ಮಾಡಿದ್ದು ಅವರ ಗುರುತು ಪತ್ತೆಯಾಗಿದೆ. ಅವರನ್ನು ಶೀಘ್ರವಾಗಿ ವಶಕ್ಕೆ ಪಡೆಯಲಾಗುವುದು ಎಂಬುದಾಗಿ ಪಡುಬಿದ್ರಿ ಪೊಲೀಸರು ತಿಳಿಸಿದ್ದಾರೆ.
ನಿಷೇಧವಿದ್ದರೂ ಎಲ್ಲೆಡೆ ಕೋಳಿಯಂಕಗಳು ನಡೆಯುತ್ತಿದ್ದು, ಎರ್ಮಾಳಿನಲ್ಲಿ ನಡೆಯುತ್ತಿರುವ ಕೋಳಿಯಂಕದ ಖಚಿತ ಮಾಹಿತಿ ಪಡೆದ ಪಡುಬಿದ್ರಿ ಠಾಣಾ ಎಸ್ಸೈ ಪ್ರಸನ್ನ ಎಂ.ಎಸ್. ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಕೆಲವರನ್ನು ವಶಕ್ಕೆ ಪಡೆದಿದ್ದು, ಈ ಕೋಳಿಯಂಕ ನಡೆಸಿದ ರೂವಾರಿಯ ಮಾಹಿತಿ ಲಭ್ಯವಾಗಿದ್ದು ಆತನನ್ನು ತಕ್ಷಣವೇ ವಶಕ್ಕೆ ಪಡೆಯಲಾಗುವುದು ಎಂದರು.