ಇಂದ್ರಾಳಿಯ ಹಯಗ್ರೀವ ನಗರದಲ್ಲಿ ಕಂಪನಿ ಸೆಕ್ರೆಟ್ರಿ ಸಹವರ್ತಿ ಕಛೇರಿ ಉದ್ಘಾಟನೆ

ಉಡುಪಿಯ ಪರಿಸರದಲ್ಲೇ ಕಂಪನಿ ಸೆಕ್ರೆಟರಿ ತರಬೇತಿ ಪಡೆಯಲು ಇಚ್ಛಿಸುವವರಿಗೆ ಮತ್ತು ಉಡುಪಿಯ ಎಲ್ಲಾ ತರಹದ ಉದ್ಯಮಿಗಳಿಗೆ ಸಲಹೆ ಹಾಗೂ ಅತ್ಯುತ್ತಮ ಸೇವೆಯನ್ನು ನೀಡಲು ಚೇತನ್ ನಾಯಕ್ & ಅಸೋಸಿಯೇಟ್ಸ್ ಮತ್ತು ಸಿ ಎಸ್ ಅಪರ್ಣ ಭಟ್ ರವರ ಸಹಭಾಗಿತ್ವದಲ್ಲಿ ಉಡುಪಿಯ ಇಂದ್ರಾಳಿಯಲ್ಲಿರುವ ಹಯಗ್ರೀವ ನಗರದಲ್ಲಿ ನೂತನ ಕಂಪನಿ ಸೆಕ್ರೆಟ್ರಿ ಸಹವರ್ತಿ ಕಛೇರಿಯನ್ನು ಉದ್ಘಾಟಿಸಲಾಯಿತು.

ಈ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರವರು ನೂತನ ಕಛೇರಿಯನ್ನು ಉದ್ಘಾಟಿಸಿದರು. ಈ ಶುಭ ಸಂದರ್ಭದಲ್ಲಿ ಮಾತನಾಡಿದ ಅವರು, ‘ಯಾವುದೇ ಒಂದು ಸಂಸ್ಥೆಗೆ ಸರ್ಕಾರದಿಂದ ಬರುವಂತಹ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಉತ್ತಮ ಜ್ಞಾನವನ್ನು ಹೊಂದಿರುವ ಕನ್ಸಲ್ಟೆಂಟ್ ಅವಶ್ಯಕತೆ ಬಹುಮುಖ್ಯವಾಗಿರುತ್ತದೆ. ಆದ್ದರಿಂದ ಇಂತಹ ಒಂದೊಳ್ಳೆ ಸಹವರ್ತಿ ಕಛೇರಿ ತೆರೆದಿರುವುದು ಉಡುಪಿಯ ಉದ್ಯಮಿಗಳಿಗೆ ವರಧಾನವಾಗಲಿದೆ’ ಎಂದು ಶುಭ ಹಾರೈಸಿದರು.

ಇವರೊಂದಿಗೆ ಉಪಸ್ಥಿತರಿದ್ದ ಉಡುಪಿ ಜಿಲ್ಲಾ ಸಣ್ಣ ಕೈಗಾರಿಕ ಸಂಘದ ಉಪಾಧ್ಯಕ್ಷರಾದ ಹರೀಶ್ ಕುಂದರ್ ಅವರು, ‘ಪ್ರೈವೇಟ್ ಮತ್ತು ಕಾಪೆರ್Çರೇಟ್ ಕಂಪನಿಗಳಿಗೆ ಮಾರ್ಗದರ್ಶನ ಅತ್ಯಗತ್ಯ. ಇಲ್ಲಿರುವುದು ಸಣ್ಣ ಕೈಗಾರಿಕೆಗಳು. ಸಣ್ಣ ಸಮಸ್ಯೆಗಳು ಬಂದೇ ಬರುತ್ತದೆ. ಆದ್ದರಿಂದ ಕನ್ಸಲ್ಟೆಂಟ್ ಸಲಹೆ ಹಾಗೂ ಸೇವೆ ಬೇಕಾಗುತ್ತದೆ. ಇನ್ಮುಂದೆ ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಇವರೊಂದಿಗೆ ಕೂಡುತ್ತೇವೆ’ ಎಂದು ಶುಭ ಕೋರಿದರು. ದಿ ಇನ್‍ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಇದರ ಎಸ್ ಐ ಆರ್ ಸಿ ಉಡುಪಿ ಶಾಖೆಯ ಅಧ್ಯಕ್ಷರಾದ ಸಿಎ ಲೋಕೇಶ್ ಶೆಟ್ಟಿ ರವರು ಈಗಿರುವ ವ್ಯವಹಾರದ ಸ್ಥಿತಿಯನ್ನು ವಿವರಿಸುತ್ತ ಸಹವರ್ತಿ ಕಛೇರಿಯನ್ನು ಉಡುಪಿಯಲ್ಲಿ ಪ್ರಾರಂಭಿಸಿರುವುದು ಒಂದೊಳ್ಳೆ ವಿಚಾರವಾಗಿದೆ ಹಾಗೂ ಉದ್ಯಮಿಗಳಿಗೆ ಸದಾವಕಾಶವಾಗಿದೆ ಎಂದರು. ಚೇತನ್ ನಾಯಕ್ & ಅಸೋಸಿಯೇಟ್ಸ್ ಇದರ ಸಂಸ್ಥಾಪಕರಾದ ಚೇತನ್ ನಾಯಕ್ ಅವರು ಮಾತನಾಡಿ, ಕಛೇರಿಯಲ್ಲಿ ಒದಗಿಸುವ ಸೇವೆಗಳನ್ನು ತಿಳಿಸುತ್ತಾ ಉಡುಪಿಯಲ್ಲಿ ಸಹವರ್ತಿ ಕಛೇರಿಯ ಅವಶ್ಯಕತೆಯನ್ನು ತಿಳಿಸಿದರು. ಈ ಕಛೇರಿಯ ಮೂಲಕ ಯುವಜನತೆಗೆ, ಸ್ಟಾರ್ಟ್ ಅಪ್ ಕಂಪನಿಗಳಿಗೆ, ಉದ್ದಿಮೆದಾರರಿಗೆ ಬಹಳ ಉಪಯುಕ್ತವಾಗಿದೆ ಎಂದು ಅಪರ್ಣ ಭಟ್ ಅವರಿಗೆ ಶುಭ ಹಾರೈಸಿದರು. ಇನ್ನು ಉಡುಪಿ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿಯ ಉಪಾಧ್ಯಕ್ಷರಾದ ನಟರಾಜ್ ಪ್ರಭು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈಗಾಗಲೇ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಕಾರ್ಯಚರಿಸುತ್ತಿರುವ ಚೇತನ್ ನಾಯಕ್ & ಅಸೋಸಿಯೇಟ್ಸ್ ವ್ಯವಹಾರ ಸಂಸ್ಥೆ ಇದೀಗ ಉಡುಪಿಯಲ್ಲಿ ಸಹವರ್ತಿ ಕಛೇರಿಯನ್ನು ರಚಿಸಿ ಕಾರ್ಯಚರಿಸಲು ಮುಂದಾಗಿದೆ. ಇಲ್ಲಿ ಕಾಪೆರ್Çರೇಟ್ ಕಾನೂನು ಸಲಹಾ ಸೇವೆಗಳು, ಫೆಮಾ ಅಡಿಯಲ್ಲಿ ಆಡಳಿತ, ಸಮಾಲೋಚನೆ ಮತ್ತು ಅನುಸರಣೆಗಳ ನಿರ್ವಹಣೆ, ಪ್ರಮುಖ ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳು ಮತ್ತು ನಿಯಮಿತ ಆಧಾರದ ಮೇಲೆ ಜಿ ಎಸ್ ಟಿ ಮರುಪಾವತಿ ವಿಷಯಗಳನ್ನು ನಿರ್ವಹಿಸುವ ಕರ್ಪೂರೇಟ್ ಕ್ಲೈಂಟ್ ಗಳ ಪ್ರಮುಖ ಗುಂಪಿಗೆ ಸೇವೆಯನ್ನು ನೀಡಲಾಗುತ್ತದೆ.

Related Posts

Leave a Reply

Your email address will not be published.