ಶಾಸಕರಿಂದ ಕೊಡಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನ ಸಂಪರ್ಕ ಸಭೆ – ಗ್ರಾಮಸ್ಥರ ಅಹವಾಲು ಸ್ವೀಕಾರ
ಹಿರಿಯಡ್ಕ: ಕೊಡಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರಿಂದ ಅಹವಾಲು ಸ್ವೀಕಾರ, ಜನಸಂಪರ್ಕ ಸಭೆ ಹಾಗೂ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮ ಇಂದು ದಿನಾಂಕ 19-11-2025 ರಂದು ಕೊಡಿಬೆಟ್ಟು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಮಕ್ಕಳಿಗೆ ಟಿ.ವಿ, ಮಕ್ಕಳ ಆಟಿಕೆ ಕಿಟ್ ಹಾಗೂ ಪಂಚಾಯತ್ ವರ್ಗ ಅನುದಾನ ಹಾಗೂ ಶೇಖರ 25ರ ನಿಧಿ ಮತ್ತು ಶೇಖಡಾ 5 ರ ನಿಧಿಯಡಿ ವಿದ್ಯಾರ್ಥಿ ವೇತನ, ವಿಕಲಚೇತನರಿಗೆ ಸಹಾಧನವನ್ನು ಶಾಸಕರು ವಿತರಿಸಿದರು.
ಈ ಸಂದರ್ಭದಲ್ಲಿ ಕೊಡಿಬೆಟ್ಟು ಗ್ರಾಮ ಅಧ್ಯಕ್ಷರಾದ ಸಂದೀಪ್ ಮಡಿವಾಳ, ಉಪಾಧ್ಯಕ್ಷರಾದ ಇಂದಿರಾ ಕೆ, ಉಡುಪಿ ತಾಲೂಕು ಕಂದಾಯ ನಿರೀಕ್ಷಕರಾದ ಲೀಲಾಧರ, ಕಾಪು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಫರ್ಜಾನ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಉಮೇಶ್ ನಾಯ್ಕ್, ಕೊಡಿಬೆಟ್ಟು ಗ್ರಾಮ ಪಂಚಾಯತ್ ಸರ್ವ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


















