ಪಡುಬಿದ್ರಿ : “ಪಿಸು ಮಾತು” ಮ್ಯೂಸಿಕ್ ವಿಡಿಯೋ ಬಿಡುಗಡೆ ಕಾರ್ಯಕ್ರಮ

ಶುಭಾ ಶೆಟ್ಟಿ ಪ್ರೋಡಕ್ಷನ್ಸ್ ಬ್ಯಾನರ್‍ನಲ್ಲಿ ತಯಾರಾದ ಉಮೇಶ್ ಶೆಟ್ಟಿ ಮತ್ತು ಧನರಾಜ್ ಶೆಟ್ಟಿ ನಿರ್ಮಾಣದ “ಪಿಸುಮಾತು” ಕನ್ನಡ ಮ್ಯೂಸಿಕ್ ವಿಡಿಯೋದ ಬಿಡುಗಡೆ ಕಾರ್ಯಕ್ರಮವು ಪಡುಬಿದ್ರಿಯ ಭಾರತ್ ಸಿನಿಮಾಸ್ ಚಿತ್ರಮಂದಿರದಲ್ಲಿ ನಡೆಯಿತು.

ಈ ವಿನೂತನ ಕಥಾ ಹಂದರವನ್ನು ಹೊಂದಿರುವ ಮ್ಯೂಸಿಕ್ ವಿಡಿಯೋವನ್ನು ಕಾಪುವಿನ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಭವಾನಿ ಶಂಕರ್ ಹೆಗ್ಡೆ, ಸಂಜಯ್ ಕುಮಾರ್ ಶೆಟ್ಟಿ ಗೋಣಿಬೀಡು, ರತ್ನಾಕರ್, ಪಲ್ಲವಿ ಸಂತೊಷ್ ಶೆಟ್ಟಿ, ವಿಠಲ್ ಶೆಟ್ಟಿ, ಸೀನ ಪೂಜಾರಿ, ಉದಯ ಶೆಟ್ಟಿ, ಅನಂತ ಪಟ್ಟಾಬಿ ರಾವ್,ಯಶೋಧ ಪೂಜಾರಿ, ನಿರ್ಮಾಪಕ ಉಮೇಶ್ ಶೆಟ್ಟಿ, ಧನರಾಜ್ ಶೆಟ್ಟಿ, ನಾಯಕ ನಟ ಶೋಧನ್ ಶೆಟ್ಟಿ, ಶುಭಾ ಶೆಟ್ಟಿ, ತಂತ್ರಜ್ಞರು, ನಟರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
ಈ ಶುಭ ಸಂಧರ್ಭದಲ್ಲಿ ಪ್ರಾಣಿ ಪ್ರಿಯೆ ರಜನಿ ಶೆಟ್ಟಿ ಇವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.

pisumaathu

ಈ ಮ್ಯೂಸಿಕ್ ವಿಡಿಯೋ ಶುಭಾ ಶೆಟ್ಟಿ ಪ್ರೋಡಕ್ಷನ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಂಡಿದೆ

“ಪಿಸುಮಾತು” ಕನ್ನಡ ಮ್ಯೂಸಿಕ್ ವೀಡಿಯೋ 👇👇👇

https://youtu.be/OZ-PoZu6Oiw

ಶುಭಾ ಶೆಟ್ಟಿ ಪ್ರೋಡಕ್ಷನ್ ನಲ್ಲಿ ನಿರ್ಮಾಣವಾಗಿರುವ ಮ್ಯೂಸಿಕ್ ವಿಡಿಯೋದಲ್ಲಿ ಪ್ರಮುಖ ಪಾತ್ರದಲ್ಲಿ ಶೋಧನ್ ಶೆಟ್ಟಿ ಮತ್ತು ನಿರೀಕ್ಷಾ ಶೆಟ್ಟಿ ನಟಿಸಿದ್ದು, ಖ್ಯಾತ ಹಿನ್ನಲೆ ಗಾಯಕ ನಿಹಾಲ್ ತಾವ್ರೋ ಮತ್ತು ಡಿಯಲ್ ಡಿಸೋಜಾ ಧ್ವನಿ ನೀಡಿದ್ದಾರೆ. ಶರತ್ ನಿರ್ದೇಶನ ಮಾಡಿದ್ದು, ಪ್ರಸಾದ್ ಕೆ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಂದೀಪ್ ಸಿನೆಮಾಟೋಗ್ರಾಫಿ, ಪ್ರತಾಪ್ ಭಟ್ ರಚನೆ, ರವಿರಾಜ್ ಗಾಣಿಗ ಸಂಕಲನ ನಿರ್ವಹಿಸಿದ್ದಾರೆ.

pisumaathu

pisumaathu

ಸಾಹಿಲ್ ರೈ ಕಾರ್ಯಕ್ರಮ ನಿರ್ವಹಿಸಿದರು. ನೆರೆದಿದ್ದ ಪ್ರೇಕ್ಷಕರು ಮ್ಯೂಸಿಕ್ ವಿಡಿಯೋ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನು ಆಡಿದರು.

Related Posts

Leave a Reply

Your email address will not be published.