ಯುವ ವಾಹಿನಿ ಪುತ್ತೂರು ಘಟಕದಿಂದ ಬಿಲ್ಲವ ವಧು-ವರಾನ್ವೇಷಣೆ-2023

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವ ವಾಹಿನಿ (ರಿ) ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬಿಲ್ಲವ ವಧು ವರಾನ್ವೇಷಣೆ-೨೦೨೩  ಪುತ್ತೂರಿನ ಬಪ್ಪಳಿಗೆಯ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ಉದ್ಘಾಟಿಸಿದರು. ಮದುವೆಯಾಗುವ ಯುವಕ ಯುವತಿಯರಿಗೆ ವೇದಿಕೆಯನ್ನು ಕಲ್ಪಿಸುವ ಕೆಲಸವನ್ನು ಯುವವಾಹಿನಿ ಘಟಕ ಮಾಡುತ್ತಿದೆ. ಕಾರ್ಯಕ್ರಮ ನಡೆಸಲು ಕಳೆದ ಒಂದು ತಿಂಗಳಿಂದ ಯುವವಾಹಿನಿ ಘಟಕ ಪ್ರಯತ್ನ ಪಡುತ್ತಿದ್ದಾರೆ. ಅವರ ಪ್ರಯತ್ನಕ್ಕೆ ಯಶಸ್ಸು ಸಿಕ್ಕೆ ಸಿಗುತ್ತದೆ ಎಂದರು.

ಯುವ ವಾಹಿನಿ ಘಟಕದ ಅಧ್ಯಕ್ಷರಾದ ಉಮೇಶ್ ಬಾಯಾರು ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ಕಾರ್ಯಕ್ರಮವು ಸಮಾಜಕ್ಕೆ ಪೂರಕವಾಗಬೇಕು. ನಮ್ಮ ಸಮುದಾಯದ ಎಲ್ಲರಿಗೂ ಒಂದೇ ವೇದಿಕೆಯನ್ನು ಕಲ್ಪಿಸಿದ್ದೇವೆ. ಎಲ್ಲರು ವಧು-ವರಾನ್ವೇಷಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ದಂಡ ನಾಯಕ ಶ್ರೀ ಉಳ್ಳಾಲ್ತಿ ದೈವಸ್ಥಾನ ಬಲ್ನಾಡು ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ನಾರಾಯಣ ಪೂಜಾರಿ ನೆಕ್ಕರೆ ಭಾಗವಹಿಸಿದ್ದರು.

 ಕಾರ್ಯಕ್ರಮದ ಸಮಾರೋಪ ಸಮಾರಂಭ ಮಧ್ಯಾಹ್ನ ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಉಮೇಶ್ ಬಾಯಾರು ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಸತೀಶ್ ಕುಮಾರ್ ಕೆಡಂಜಿ, ರಾಜೇಶ್ ಬಿ, ಶ್ರೀ ಸಂಜೀವ ಪೂಜಾರಿ ನಿಡ್ಯ , ಶ್ರೀ ಬಾಬು ಪೂಜಾರಿ ಇದುಪಾಡಿ  ಡಿ, ಶ್ರೀ ಚಂದ್ರಶೇಖರ ಸನಿಲ್ ಶ್ರೀ ಜಯರಾಮ ಬಿ ಎನ್, ಶ್ರೀ ಮೋಹನ ಶಿಬಿರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಕಾರ್ಯಕ್ರಮದಲ್ಲಿ ವಧು-ವರಾನ್ವೇಷಣೆ 2023 ಸಂಚಾಲಕರಾದ ಜಯರಾಮ ಬಿಎನ್, ಮೋಹನ ಶಿಬಿರ, ಯುವ ವಾಹಿನಿ ಘಟಕ ಪುತ್ತೂರು ಕಾರ್ಯದರ್ಶಿ ಅನ್ನಿ ಪೂಜಾರಿ, ಯುವ ವಾಹಿನಿ ರಿಜಿಸ್ಟರ್ಡ್ ಪುತ್ತೂರು ಘಟಕದ ಪದಾಧಿಕಾರಿಗಳ ಹಾಗೂ ಸರ್ವ ಸದಸ್ಯರು ಹಾಗೂ ಬಿಲ್ಲವ ವಧು ವರಾನ್ವೇಷಣೆ 2023ನೇ ವಧು ವರಕಾಂಕ್ಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 ಹೆಚ್ಚಿನ ಮಾಹಿತಿಗಾಗಿ ಉಮೇಶ್ ಬಾಯರು ಅಧ್ಯಕ್ಷರು ಯುವ ವಾಹಿನಿ ರಿಜಿಸ್ಟರ್ಡ್ ಪುತ್ತೂರು ಘಟಕ  ಮೊಬೈಲ್.  9449332896, 9900654940, ಅಣ್ಣಿ ಪೂಜಾರಿ ಕಾರ್ಯದರ್ಶಿ  ಯುವ ವಾಹಿನಿ ರಿಜಿಸ್ಟರ್ಡ್ ಪುತ್ತೂರು ಘಟಕ ಮೊಬೈಲ್. 9900 383315  ಜಯರಾಮ್ ಬಿ ಎನ್

 ಸಂಚಾಲಕರು. ವಧು ವರ ನ್ವೇಷಣೆ –2023  99017 24973 ಸಂಪರ್ಕಿಸಬಹುದು. ಈ ಕಾರ್ಯಕ್ರಮದಲ್ಲಿ ಸುಮಾರು 250ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

Related Posts

Leave a Reply

Your email address will not be published.