ಉಳ್ಳಾಲ ಕ್ಷೇತ್ರದ ಮಳೆ ಹಾನಿ ಪ್ರದೇಶಗಳಿಗೆ ಸ್ಪೀಕರ್ ಖಾದರ್ ಭೇಟಿ, ಪರಿಶೀಲನೆ

ಕರ್ನಾಟಕ ವಿಧಾನಸಭೆ ಅಧಿವೇಶನದ ವಾರಾಂತ್ಯದ ಬಿಡುವಿನ ದಿನ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ ಯು.ಟಿ. ಖಾದರ್ ಅವರು ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ಕರ್ನಾಟಕ ಹದಿನಾರನೇಯ ವಿಧಾನಸಭೆಯ ಅಧಿವೇಶನವು ಜುಲೈ ಮೂರರಂದು ಪ್ರಾರಂಭವಾಗಿದ್ದು, ಯು.ಟಿ ಖಾದರ್ ಸಭಾಧ್ಯಕ್ಷರಾದ ಬಳಿಕ ಪೂರ್ಣ ಪ್ರಮಾಣದ ಮೊದಲ ಅಧಿವೇಶನ ನಡೆಯುತ್ತಾ ಇದೆ. ಮೊದಲ ವಾರದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಬಜೆಟ್ ಮಂಡನೆ ನಡೆಸಿದ್ದು , ವಾರಾಂತ್ಯದ ಬಿಡುವು ನೀಡಲಾಗಿದೆ. ಈ ಮಧ್ಯೆ ಸಭಾಧ್ಯಕ್ಷ ಯು.ಟಿ ಖಾದರ್ ಕ್ಷೇತ್ರಕ್ಕೆ ಆಗಮಿಸಿದ್ದು ಸಾರ್ವಜನಿಕರ ಭೇಟಿಯಲ್ಲಿ ನಿರತರಾಗಿದ್ದಾರೆ.

ಮಂಗಳೂರು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ನಂತರ ಕ್ಷೇತ್ರದ ವಿವಿಧ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಉಳ್ಳಾಲ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಬಳಿಕ ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

Related Posts

Leave a Reply

Your email address will not be published.