ಪುತ್ತೂರು: ಅ.22ರಂದು ಪುತ್ತೂರುದ ಪಿಲಿರಂಗ್‍ನ ಸೀಸನ್ -2
ಪುತ್ತೂರು: ಹುಲಿ ಕುಣಿತದಂತಹ ಸಾಂಸ್ಕೃತಿಕ ಕಲೆ ನಮ್ಮ ಊರಿಗೂ ಬರಲಿ ಎಂಬ ಉದ್ದೇಶದಿಂದ ಆರಂಭಗೊಂಡಿರುವ ಪುತ್ತೂರುದ ಪಿಲಿರಂಗ್‍ನ ಸೀಸನ್ -2 ಪುತ್ತೂರು ಕಿಲ್ಲೆ ಮೈದಾನದಲ್ಲಿ ಅ. 22ರಂದು ನಡೆಯಲಿದೆ ಎಂದು ಪಿಲಿರಂಗ್ ಸಾರಥ್ಯ ವಹಿಸಿರುವ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.
ಪುತ್ತೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪುತ್ತೂರಿಗೆ ಹೆಸರು ಬರಬೇಕು ಎಂಬ ನಿಟ್ಟಿನಲ್ಲಿ ಪಿಲಿರಂಗ್ ಆರಂಭ ಮಾಡಿದ್ದೇವೆ. ಜಾತ್ಯಾತೀತ, ಪಕ್ಷಾತೀತ ನೆಲೆಯಲ್ಲಿ ಎಲ್ಲರ ಒಳಗೊಳ್ಳುವಿಕೆಯೊಂದಿಗೆ ಇದು ನಡೆಯಲಿದೆ ಎಂದರು. ಒಟ್ಟು 8 ತಂಡವನ್ನು ಆಹ್ವಾನ ಮಾಡಿದ್ದೆವು. ಉಳಿದೆರಡು ತಂಡಗಳು ಬೇಡಿಕೆ ಮುಂದಿಟ್ಟ ಕಾರಣ 10 ತಂಡಗಳು ಪಿಲಿರಂಗಿನಲ್ಲಿ ಭಾಗವಹಿಸಲಿವೆ.
ಪ್ರತಿ ತಂಡಕ್ಕೆ ಪ್ರದರ್ಶನಕ್ಕೆ 25 ನಿಮಿಷ ಸಮಯ ನೀಡಲಾಗಿದೆ. ಇಬ್ಬರು ತೀರ್ಪುಗಾರರಿದ್ದು, ರಾತ್ರಿವರೆಗೂ ಕಾರ್ಯಕ್ರಮ ನಡೆಯಲಿದೆ ಎಂದರು. ತಂಡದಲ್ಲಿ 15 ಹುಲಿ ಇರಲೇಬೇಕು. ಇದರೊಂದಿಗೆ ಪಟ್ಟೆ ಹುಲಿ, ಕಪ್ಪು ಹುಲಿ, ಮುಡಿ ಎತ್ತುವುದು ಹೀಗೆ ವಿವಿಧ ಆಯಾಮಗಳು ಇರಲಿವೆ. ಗೆದ್ದ ತಂಡಗಳಿಗೆ ಬಹುಮಾನ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಪಿಲಿರಂಗ್ ಕ್ರೀಡಾ ಸಮಿತಿ ಗೌರವಾಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕಾರ್ಯಾಧ್ಯಕ್ಷ ಶಿವರಾಮ್ ಆಳ್ವ, ಕೋಶಾಧಿಕಾರಿ ರಂಜಿತ್ ಬಂಗೇರ, ಉಪಾಧ್ಯಕ್ಷ ರೋಶನ್ ರೈ ಉಪಸ್ಥಿತರಿದ್ದರು.