ಸಮಾನ ಮನಸ್ಕರು ಒಂದಾಗಿ ಬಿಜೆಪಿ ಸೋಲಿಸಬೇಕು : ರಮಾನಾಥ ರೈ
ಬಂಟ್ವಾಳ : ಮತೀಯವಾದಿ, ಫ್ಯಾಸಿಸ್ಟರಿಂದ ದೇಶಕ್ಕೆ ಅಪಾಯವಿದೆ. ಒಂದೇ ದೇಶ, ಒಂದೇ ಪಕ್ಷ, ಒಂದೇ ನಾಯಕತ್ವ ಎಂಬರ್ಥದಲ್ಲಿ ಬಿಜೆಪಿಗರು ಮಾತನಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಮುನ್ಸೂಚನೆಯಾಗಿದೆ. ಹೀಗಾಗಿ ಸಮಾನ ಮನಸ್ಕರು ಒಂದಾಗಿ ಚುನಾವಣೆ ಎದುರಿಸಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು. ಅವರು ಬಂಟ್ವಾಳದಲ್ಲಿ ನಡೆದ ಸಿಪಿಐ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಎಡಪಂಥಿಯ ಚಿಂತನೆಗಳು ಹಾಗೂ ಕಾಂಗ್ರೆಸ್ ಸಿದ್ಧಾಂತಕ್ಕೂ ಸಾಕಷ್ಟು ಸಾಮ್ಯತೆಯಿದೆ. ಕಾಂಗ್ರೆಸ್ ಹಾಗೂ ಎಡಪಂಥಿಯ ಪಕ್ಷಗಳು ಜೊತೆಗೂಡಿ ಸರಕಾರ ನಡೆಸಿದ ಇತಿಹಾಸವೂ ಇದೆ. ರಮಾನಾಥ ರೈ ಅವರು ಬಂಟ್ವಾಳ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಅವರನ್ನು ಗೆಲ್ಲಿಸುವ ಹೊಣೆ ನಮ್ಮ ಮೇಲೂ ಇದೆ. ಹೀಗಾಗಿ, ಈ ಚುನಾವಣೆಯಲ್ಲಿ ಬಂಟ್ವಾಳದಲ್ಲಿ ಸಿಪಿಐ ಕಾಂಗ್ರೆಸ್ ಅನ್ನು ಬೆಂಬಲಿಸಲಿದೆ ಎಂದು ಸಿಪಿಐ ತಾಲೂಕು ಕಾರ್ಯದರ್ಶಿ ಸುರೇಶ್ ಕುಮಾರ್ ಹೇಳಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಎವೈಐಎಫ್ ಅಧ್ಯಕ್ಷ ಪ್ರೇಮನಾಥ ಕೆ., ಮಹಿಳಾ ಒಕ್ಕೂಟದ ಅಧ್ಯಕ್ಷೆ ಭಾರತಿ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.