ಭಜನಾ ಮಂದಿರದ ಕಾಮಗಾರಿಗಳ ಮನವಿ ಪತ್ರ ಬಿಡುಗಡೆ

ಶ್ರೀ ಬ್ರಹ್ಮರಾಮೇಶ್ವರ ಭಜನಾ ಮಂಡಳಿ (ರಿ.) ಆರ್ಬಿಕೋಡಿ 80 ಬಡಗುಬೆಟ್ಟು ಇದರ ಭಜನಾ ಮಂದಿರದ ತಗಡು ಚಪ್ಪರ ನಿರ್ಮಾಣ, ನೆಲಹಾಸು, ಆಡಳಿತ ಕಚೇರಿ ಹಾಗೂ ಇತರ ಕಾಮಗಾರಿಗಳ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರಿಂದ ಮನವಿ ಪತ್ರ ಬಿಡುಗಡೆ

ಶ್ರೀ ಬ್ರಹ್ಮರಾಮೇಶ್ವರ ಭಜನಾ ಮಂಡಳಿ (ರಿ.) ಆರ್ಬಿಕೋಡಿ 80 ಬಡಗುಬೆಟ್ಟು ಇದರ ಭಜನಾ ಮಂದಿರದ ವಠಾರದಲ್ಲಿ ಶಾಶ್ವತ ತಗಡು ಚಪ್ಪರ ನಿರ್ಮಾಣ, ನೆಲಹಾಸು, ಆಡಳಿತ ಕಚೇರಿ ಹಾಗೂ ಇತರ ಕಾಮಗಾರಿಗಳ “ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ”ವನ್ನು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಇಂದು ನೆರವೇರಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ 80 ಬಡಗುಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಕೋಟ್ಯಾನ್, ಮಂಗಳೂರು ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರಾದ ಗೋಕುಲ್ ದಾಸ್ ನಾಯಕ್, ಶ್ರೀ ಬ್ರಹ್ಮರಾಮೇಶ್ವರ ಭಜನಾ ಮಂಡಳಿಯ ಅರ್ಚಕರಾದ ವೇದಮೂರ್ತಿ ಶ್ರೀ ರಾಘವೇಂದ್ರ ಭಟ್, ಅರ್ಬಿ ಶ್ರೀ ವೈಷ್ಣವಿದುರ್ಗಾ ದೇವಸ್ಥಾನದ ಆಡಳಿತ ಮೋಕ್ತೇಸರರಾದ ಜಯರಾಜ್ ಹೆಗ್ಡೆ, ಅರ್ಬಿ ಅಯ್ಯಪ್ಪ ಸ್ವಾಮಿ ಭಕ್ತ ವೃಂದದ ಗುರುಸ್ವಾಮಿಗಳಾದ ಗಿರಿಧರ್ ನಾಯಕ್, ಶ್ರೀ ಬ್ರಹ್ಮರಾಮೇಶ್ವರ ಭಜನಾ ಮಂಡಳಿ ಅಧ್ಯಕ್ಷರಾದ ಮುರಳಿ ನಾಯಕ್, ಮಹಿಳಾ ಅಧ್ಯಕ್ಷರಾದ ಜ್ಯೋತಿ ಪೂಜಾರಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.