ಬಿಗ್‍ಬಾಸ್ ಒಟಿಟಿ ಸೀಸನ್-1, ಕರಾವಳಿಯ ಕುವರ ನಟ ರೂಪೇಶ್ ಶೆಟ್ಟಿ ಎಂಟ್ರಿ

ಕಿರುತೆರೆ ಲೋಕದ ದೊಡ್ಡ ರಿಯಾಲಿಟಿ ಶೋ ಎನಿಸಿಕೊಂಡಿರುವ ಬಿಗ್ ಬಾಸ್ ಒಟಿಟಿ ಸೀಸನ್-1 ಆರಂಭಗೊಂಡಿದೆ. ಈ ಬಾರಿ ಕರಾವಳಿಯ ಕುವರ ನಟ ಹಾಗೂ ನಿರೂಪಕ ರಾಕ್‍ಸ್ಟಾರ್ ರೂಪೇಶ್ ಶೆಟ್ಟಿ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ರೂಪೇಶ್ ಶೆಟ್ಟಿ ಅವರ ತುಳು ಮೂವಿ ಆಗಿರುವ ಗಿರಿಗಿಟ್ ಈಗಾಗಲೇ ಯಶಸ್ವಿ ಪ್ರದರ್ಶನ ಕಂಡಿದೆ. ಸದ್ಯದಲ್ಲೇ ಸರ್ಕಸ್ ತುಳು ಮೂವಿ ಕರಾವಳಿಯಾದ್ಯಂತ ಬಿಡುಗಡೆಗೊಳ್ಳಲು ಸಜ್ಜಾಗಿದೆ..

ಕಲರ್ಸ್ ವಾಹಿನಿಯ ಬಿಗ್ ಬಾಸ್ ಕನ್ನಡದ ಒಟಿಟಿ ಆವೃತ್ತಿವೊಂದರಲ್ಲಿ ನಟ ರೂಪೇಶ್ ಶೆಟ್ಟಿ ಎಂಟ್ರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಬಿಗ್ ಬಾಸ್‍ನಲ್ಲಿ ಯಾವ ರೀತಿ ಪ್ರದರ್ಶನ ನೀಡಿಲಿದ್ದಾರೆ ಎಂಬುವುದು ಕರಾವಳಿಯಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈ ಬಾರಿ ಬಿಗ್ ಬಾಸ್‍ನಲ್ಲಿ ಸಂಪೂರ್ಣ ಸೆಲೆಬ್ರಿಟಿಗಳೇ ಇರಲಿದ್ದಾರೆ. ಪತ್ರಿಕೋದ್ಯಮ, ಸೋಶಿಯಲ್ ಮೀಡಿಯಾ, ಸಿನಿಮಾ, ಕಿರುತೆರೆ, ರೇಡಿಯೋ ಮುಂತಾದ ಕ್ಷೇತ್ರದ ಜನಪ್ರಿಯ ವ್ಯಕ್ತಿಗಳಿಗೆ ಅವಕಾಶ ನೀಡಲಾಗಿದೆ. ಕನ್ನಡದ ವೀಕ್ಷಕರಿಗೆಬಿಗ್ ಬಾಸ್ ಒಟಿಟಿ’ ಹೊಸದು. ಇದರ ನಿಯಮಗಳಲ್ಲಿ ಕೂಡ ಒಂದಷ್ಟು ಬದಲಾವಣೆ ಇರಲಿದೆ. ದಿನ 24 ಗಂಟೆಗಳ ಕಾಲವೂ ಸ್ಪರ್ಧಿಗಳ ಚಟುವಟಿಕೆಗಳನ್ನು ವೀಕ್ಷಕರು ನೋಡಬಹುದು. ವೂಟ್ ಸೆಲೆಕ್ಟ್' ಮೂಲಕ ಈ ಶೋ ಪ್ರಸಾರ ಆಗಲಿದೆ.

Related Posts

Leave a Reply

Your email address will not be published.