KSRTC ಪ್ರಭಾರಿ ವ್ಯವಸ್ಥಾಪಕನ ವಿರುದ್ಧ ಪ್ರತಿಭಟನೆ – ತಲೆ ಕೂದಲು ಇಟ್ಟು ಸವಿತಾ ಸಮಾಜದಿಂದ ಪ್ರತಿಭಟನೆ

ಬಸ್ ಡಿಪೋ ಸಿಬ್ಬಂದಿಗಳಿಗೆ ಬೈಯ್ಯುವ ಬರದಲ್ಲಿ ಜಾತಿ ನಿಂದನೆ ಮಾಡಿರುವ ಕೆ.ಎಸ್.ಆರ್.ಟಿ.ಸಿ ಪ್ರಭಾರಿ ವ್ಯವಸ್ಥಾಪಕ. ಜಗನ್ನಾಥ್ ಅವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸುವಂತೆ ಆಗ್ರಹಿಸಿ ಸವಿತಾ ಸಮಾಜದ ವತಿಯಿಂದ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

ಸಕಲೇಶಪುರದ ಡಿಪೋ ಎದುರು ಮೂಟೆಯಲ್ಲಿ ಕೇಶ ತುಂಬಿಸಿಟ್ಟು ಸವಿತಾ ಸಮಾಜದವರು ಪ್ರತಿಭಟನೆ ನಡೆಸಿದರು. ನಮ್ಮ ಸಮುದಾಯದ ಭಾವನೆಗೆ ಧಕ್ಕೆ ತಂದಿರುವ ತಪ್ಪಿತಸ್ಥ ಅಧಿಕಾರಿಯಾದ ಡಿಪೋ ಪ್ರಭಾರಿ ವ್ಯವಸ್ಥಾಪಕ ಜಗನ್ನಾಥ್ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಸೇವೆಯಿಂದ ವಜಾಗೊಳಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ವ್ಯವಸ್ಥಾಪಕರಿಗೆ ಒತ್ತಾಯಿಸಿದರು. ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಜಗನ್ನಾಥ್ ಸಾರ್ವನಿಕವಾಗಿ ಕ್ಷಮೆ ಯಾಚಿಸಬೇಕು ಆಗ್ರಹಿಸಿದರು.

ತಾಲೂಕು ಅಧ್ಯಕ್ಷ ಸೋಮಶೇಖರ್ ಮಾತನಾಡಿ, ನಾವು ನಮ್ಮ ವೃತ್ತಿ ಜೀವನದಲ್ಲಿ ಜಾತಿ ಜನಾಂಗ ನೋಡದೆ ಪ್ರತಿಯೊಬ್ಬರಿಗೂ ಕೇಶಲಾಂಕಾರ ಮಾಡುತ್ತೇವೆ. ಸಮಾಜ ಇಂದು ನಮ್ಮನ್ನು ಗೌರವಿಸಬೇಕು. ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ಡಿಪೋ ವ್ಯವಸ್ಥಾಪಕ ಜಗನ್ನಾಥ್ ಈ ರೀತಿ ನಮ್ಮ ಜಾತಿಯನ್ನು ಅವಮಾನಿಸಿರುವುದು ಖಂಡನೀಯ ಎಂದರು.

ಇದೇ ವೇಳೆಯಲ್ಲಿ ಎ.ಸಿ ಕಛೇರಿಗೆ ತೆರಳಿ ಅನ್ಮೋಲ್ ಜೈನ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸವಿತಾ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ, ಮಾಜಿ ತಾ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಜಗಣ್ಣ, ವಿನು, ಯೋಗೇಶ್, ಪಳನಿ, ಶಬರೀಶ್ ರಾಮು ಮೊದಲಾದವರು ಹಾಜರಿದ್ದರು.

Related Posts

Leave a Reply

Your email address will not be published.