ಮಂಗಳೂರು: ಆರ್ ಸಿಬಿ ತಂಡಕ್ಕೆ ಕರಾವಳಿಯ ಹ್ಯಾಂಗ್ಯೋ ಐಸ್ ಕ್ರೀಂ ಸ್ವಾದ..!
![](https://v4news.com/wp-content/uploads/2024/01/54984244-01cf-4312-a989-3225ef1b961b.jpg)
ಮಂಗಳೂರು: ಇನ್ನೇನು ಐಪಿಎಲ್ 2024ನೇ ಆವೃತ್ತಿ ಪ್ರಾರಂಭಗೊಳ್ಳುತ್ತಿದೆ. ಈ ನಡುವೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಅಧಿಕೃತ ಐಸ್ಕ್ರೀಂ ಪಾಲುದಾರನಾಗಿ ಕರಾವಳಿಯ ಹಾಂಗ್ಯೊ ಐಸ್ಕ್ರೀಂ ಸೇರ್ಪಡೆಗೊಂಡಿದೆ.
![](https://v4news.com/wp-content/uploads/2024/01/9596dbf2-ccf0-4e98-be76-42ca41830f7f.jpg)
ಕ್ರಿಕೆಟ್ ಪ್ರೇಮಿಗಳ ಐಪಿಎಲ್ ಕ್ರಿಕೆಟ್ ಹಬ್ಬ ಇನ್ನೇನು ಆರಂಭವಾಗಲಿದೆ. ಈ ಭಾರಿ ಆರ್‌ಸಿಬಿ ತಂಡಕ್ಕೆ ಹಾಂಗ್ಯೊ ಐಸ್ಕ್ರೀಂ ಸಾಥ್ ನೀಡಲಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಎರಡೂ ಸಂಸ್ಥೆಗಳ ಮುಖ್ಯಸ್ಥರು ಒಡಂಬಡಿಕೆಗೆ ಸಹಿ ಹಾಕಿದ್ದು, ಈ ಮೂಲಕ ಕರಾವಳಿಯ ಹಾಂಗ್ಯೊ ಐಸ್ಕ್ರೀಂ ಅಧಿಕೃತವಾಗಿ ಪಾಲುದಾರ ಸಂಸ್ಥೆಯಾಗಿದೆ.
![](https://v4news.com/wp-content/uploads/2024/01/Capture2-4.jpg)
ಆರ್ ಸಿಬಿಯೊಂದಿಗೆ ರೋಮಾಂಚಕ ಪಯಣ ಪ್ರಾರಂಭಿಸುತ್ತಿದ್ದು, ಇದು ಉದ್ಯಮದಲ್ಲಿ ಹೊಸ ಭಾಷ್ಯ ಬರೆಯಲಿದೆ. ಕ್ರಿಕೆಟ್ ಸ್ಫೋಟಕ ಆಟದೊಂದಿಗೆ ಹಾಂಗ್ಯೋ ಐಸ್ಕ್ರೀಂನ ಆಹ್ಲಾದಕರ ಐಸ್ಕ್ರೀಂಗಳು ಸಂಭ್ರಮದ ವಾತಾವರಣಕ್ಕೆ ಕಾರಣವಾಗುತ್ತದೆ ಎಂದು ಹಾಂಗ್ಯೋ ಐಸ್ಕ್ರೀಮ್ಸ್ ಕಂಪೆನಿಯವರು ತಿಳಿಸಿದ್ದಾರೆ.
ಹ್ಯಾಂಗ್ಯೋ ಐಸ್‌ಕ್ರೀಂ ತಯಾರಿಕಾ ಸಂಸ್ಥೆ ಇಂದು ದೇಶದಾದ್ಯಂತ ಬಲಿಷ್ಠವಾಗಿ ಬೆಳೆದಿದೆ. “ಸಂಸ್ಥೆಯ ಗುಣಮಟ್ಟದ ಉತ್ಪನ್ನಗಳು ಗ್ರಾಹಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿವೆ.