‘ವೈದ್ಯಕೀಯ ರಂಗದ ಬೆಳವಣ ಗೆ ಅರಿಯಲು ಸಂಖ್ಯಾಶಾಸ್ತ್ರವೇ ಅಳತೆಗೋಲು’

ವೈದ್ಯಕೀಯ ರಂಗದಲ್ಲಿ ಸಂಖ್ಯಾಶಾಸ್ತ್ರದ ಬಳಕೆಯು ಹೇರಳವಾಗಿದೆ ಎಂದು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ ಅಭಿಪ್ರಾಯಪಟ್ಟರು.ಉಜಿರೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಸಂಖ್ಯಾಶಾಸ್ತ್ರ ವಿಭಾಗವು ಆಯೋಜಿಸಿದ ‘ಸ್ಟ್ಯಾಟ್‍ಟೆಕ್ -2023′ ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಾಗುವ ಮುಖ್ಯ ಬದಲಾವಣೆಗಳನ್ನು ಗುರುತಿಸುವಲ್ಲಿ ಸಂಖ್ಯಾಶಾಸ್ತ್ರದ ಪಾಲು ದೊಡ್ಡದಿದೆ, ಹೊಸ ಔಷಧಿಗಳ ಪರಿಣಾಮಗಳನ್ನು ತಿಳಿಯುವಲ್ಲಿ ಸಂಖ್ಯಾಶಾಸ್ತ್ರದ ಹಲವು ಮಜಲುಗಳು ಉಪಯೋಗವಾಗುತ್ತಿವೆ ಎಂದರು. ಈ ಸಂದರ್ಭದಲ್ಲಿ ‘ಎನಪೋಯಾ’ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ವಿಜಯ್‍ಕುಮಾರ್ ‘ಝಿರಂ’ ಔಷಧಿ ಕುರಿತಾದ ಕಾರ್ಯಕ್ರಮದಲ್ಲಿ ಸಂಖ್ಯಾಶಾಸ್ತ್ರ ಮಹತ್ವವನ್ನು ತಿಳಿಸಿದ್ದನ್ನು ನೆನಪಿಸಿಕೊಂಡರು.

ಜಗತ್ತು ಜ್ಞಾನ, ವಿಜ್ಞಾನ, ತಂತ್ರಜ್ಞಾನ, ತಂತ್ರಾಂಶಜ್ಞಾನದ ಸಹಾಯಗಳಿಂದ ಮುನ್ನಡೆಯುತ್ತಿರುವ ಈ ಕಾಲದಲ್ಲಿ ಸಂಖ್ಯಾಶಾಸ್ತ್ರ ಅಧ್ಯಯನ ಮಾಡುತ್ತಿರುವವರಿಗೆ ಅವಕಾಶಗಳು ಹೇರಳವಾಗಿವೆ, ಬಹುತೇಕ ಸಂಶೋಧನೆಗಳು ತಂತ್ರಾಂಶ ಆಧಾರಿತವಾಗಿರುವುದರಿಂದ, ಅವೆಲ್ಲದರ ಅಭಿವೃದ್ಧಿಗೆ ಸಂಖ್ಯಾಶಾಸ್ತ್ರದ ಅವಶ್ಯಕತೆಯು ಹೆಚ್ಚಾಗಿದೆ.


ವಿವಿಧ ವೃತ್ತಿಗಳಲ್ಲಿ ಮಾತ್ರವಲ್ಲದೆ ಸಂಶೋಧನಾ ಕ್ಷೇತ್ರದಲ್ಲಿಯೂ ಸಂಖ್ಯಾಶಾಸ್ತ್ರದಲ್ಲಿ ಅವಕಾಶಗಳು ಅಧಿಕವಾಗಿವೆ. ಆದರೆ ಈ ಸಂಖ್ಯಾಶಾಸ್ತ್ರದಲ್ಲಿ ಅಧ್ಯಯನ, ಪರಿಶ್ರಮವಿಲ್ಲದೆ ಯಶಸ್ಸು ಗಳಿಸುವುದು ಕಷ್ಟಸಾಧ್ಯ ಎಂದು ಪುನರ್‍ಜ್ಞಾಪಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಶಶಿಶೇಖರ್ ಎನ್ ಕಾಕತ್ಕರ್ ಮಾತನಾಡಿದರು. ಅಂತರ್ ಕಾಲೇಜು ಸ್ಪರ್ಧೆಗಳು ಸಂಭ್ರಮದ ವಾತಾವರಣವನ್ನು ಸೃಷ್ಟಿಸುತ್ತದೆ. ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ, ನಾಯಕತ್ವ ಗುಣ, ಆಶಾವಾದಗಳನ್ನು ಅಭಿವೃದ್ಧಿ ಪಡಿಸುತ್ತವೆ, ಈ ರೀತಿ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಎಸ್.ಡಿ.ಎಂ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗವು ಮುಂಚೂಣ ಯಲ್ಲಿದೆ ಎಂದು ಅಭಿನಂದಿಸಿದರು.

ಸ್ಪರ್ಧೆಯಲ್ಲಿ 7 ಕಾಲೇಜುಗಳ 92 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಟ್ಟು 6 ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳು ಜರುಗಿದವು. ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು ಸಮಗ್ರ ಪ್ರಶಸ್ತಿ ವಿಜೇತರಾದರೆ, ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ವಿದ್ಯಾರ್ಥಿಗಳು ಎರಡನೇ ಸ್ಥಾನ ಪಡೆದುಕೊಂಡರು.

Related Posts

Leave a Reply

Your email address will not be published.