ಎಸ್.ಡಿ.ಎಂ ವಿಜ್ಞಾನ ವಿದ್ಯಾರ್ಥಿಗಳು ಐಡಿಇಎ ಪ್ರಯೋಗಾಲಯಕ್ಕೆ ಭೇಟಿ

ಉಜಿರೆ: ಶ್ರೀ ಧ.ಮಂ. ಕಾಲೇಜಿನ ವಿಜ್ಞಾನ ವಿಭಾಗದ ಇಪ್ಪತ್ತಾರು ವಿದ್ಯಾರ್ಥಿಗಳು ವಾಮಂಜೂರು ಸೈಂಟ್ ಜೋಸೆಫ್ ತಾಂತ್ರಿಕ ಕಾಲೇಜಿನ ಐಡಿಇಎ ಪ್ರಯೋಗಾಲಯಕ್ಕೆ ಇತ್ತೀಚಿಗೆ ಭೇಟಿನೀಡಿದರು.
ವಿದ್ಯಾರ್ಥಿಗಳಿಗೆ 3ಡಿ ಪ್ರಿಂಟಿಂಗ್, ಲೇಝರ್ ಡಿಸೈನ್ ಪ್ರಿಂಟಿಂಗ್, ಪಿಸಿಬಿ ಪ್ರಿಂಟಿಂಗ್, ವುಡ್ ಡಿಸೈನ್ ಪ್ರಿಂಟಿಂಗ್ ಮುಂತಾದ ವಿಷಯಗಳ ಬಗ್ಗೆ ವಿವರಣೆ ನೀಡಲಾಯಿತು. ಸ್ವತಃ ವಿದ್ಯಾರ್ಥಿಗಳೇ ಪ್ರಯೋಗಗಳನ್ನು ಮಾಡುವ ಮೂಲಕ ವೃತ್ತಿ ಕೌಶಲ್ಯಗಳನ್ನು ಹೆಚ್ಚಿಸಿಕೊಂಡರು. ಇಂತಹ ವಿನೂತನ ಆವಿಷ್ಕಾರಗಳಿಗೆ ಪೂರಕ ಮಾಹಿತಿಯನ್ನು ನೀಡುವ ಪ್ರಯೋಗಾಲಯಗಳು ಕರ್ನಾಟಕದಲ್ಲಿ ಕೇವಲ ನಾಲ್ಕು ತಾಂತ್ರಿಕ ಕಾಲೇಜುಗಳಲ್ಲಿವೆ.
ಎಸ್.ಡಿ.ಎಂ ಕಾಲೇಜು (ಸ್ವಾಯತ್ತ) ಉಜಿರೆ ಹಾಗೂ ಸೈಂಟ್ ಜೋಸೆಫ್ ತಾಂತ್ರಿಕ ಕಾಲೇಜು (ಸ್ವಾಯತ್ತ) ವಾಮಂಜೂರು ಸಂಸ್ಥೆಗಳ ನಡುವಿನ ಒಡಂಬಡಿಕೆಯ ಪ್ರಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಎನ್ ಕಾಕತ್ಕರ್, ಗಣ ತಶಾಸ್ತ್ರ ವಿಭಾಗದ ಪ್ರೊ. ಗಣೇಶ್ ನಾಯಕ್ ಉಪಸ್ಥಿತಿಯಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ಸೈಂಟ್ ಜೋಸೆಫ್ ತಾಂತ್ರಿಕ ಕಾಲೇಜಿನ ಉಪಪ್ರಾಚಾರ್ಯ ಪ್ರೊ. ಚಿಪ್ಪಾರು ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಎಸ್.ಡಿ.ಎಂ ಕಾಲೇಜಿನ ಗಣ ತಶಾಸ್ತ್ರ ವಿಭಾಗದ ಪ್ರೊ. ಗಣೇಶ್ ನಾಯಕ್ ಧನ್ಯವಾದ ಸಲ್ಲಿಸಿದರು.