ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಮಂಗಳೂರು “ಹಿರಿಯ ನಾಗರಿಕರ ದಿನಾಚರಣೆ”
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು ಹಾಗೂ ವಕೀಲರ ಸಂಘ (ರಿ.) ಪುತ್ತೂರು
ಇವರ ಸಂಯುಕ್ತ ಆಶ್ರಯದಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಮಂಗಳೂರು
ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಇವರುಗಳ ಸಹಯೋಗದೊಂದಿಗೆ ಹಿರಿಯ ನಾಗರಿಕರ ದಿನಾಚರಣೆ” ಯ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮ ಮನೀಷಾ ಸಭಾಂಗಣ, ಪುತ್ತೂರು, ಇಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಹಿರಿಯ ವಕೀಲರಾದ ಶ್ರೀ ಪಿ ಕೆ ಸತೀಶನ್ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಚಂದ್ರಾವತಿ ಟಿ ಪ್ಯಾನಲ್ ವಕೀಲರು ಮಾತನಾಡಿದರು, ಶ್ರೀ ಮೊಹಮ್ಮದ್ ರಫೀಕ್, ಅಧ್ಯಕ್ಷರು, ಶಿಕ್ಷಣ ಸಂಪನ್ಮೂಲ ಕೇಂದ್ರ, ಪುತ್ತೂರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಶ್ರೀಮತಿ ಕವಿತಾ ಸಹಾಯಕ ಅಭಿಯೋಜಕರು ಪುತ್ತೂರು ಅಧ್ಯಕ್ಷತೆ ವಹಿಸಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು. ರೋಟರಿ ಕ್ಲಬ್ ಪುತ್ತೂರು ಸಿಟಿ. ಅಧ್ಯಕ್ಷರಾದ ಶ್ರೀ ಪಿ. ಉಲ್ಲಾಸ್ ಪೈ ಸ್ವಾಗತಿಸಿ, ಶಿಕ್ಷಣ ಸಂಪನ್ಮೂಲ ಕೇಂದ್ರದ ಸದಸ್ಯರಾದ ರಾಜೇಶ್ವರಿ ವಕೀಲರು ವಂದಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ವತ್ಸಲ ನಾಯಕ್ ಸಹಕರಿಸಿದರು.ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ರಿ, ಮಂಗಳೂರು
ಕಾರ್ಯದರ್ಶಿ ಹಾಗೂ ತಾ.ಕಾ.ಸೇ. ಸಮಿತಿ ಪುತ್ತೂರು ಪ್ಯಾರಾ ಲೀಗಲ್ ವಾಲಂಟಿಯರ್ ಶ್ರೀಮತಿ ನಯನ ರೈ ಕಾರ್ಯಕ್ರಮ ನಿರೂಪಿಸಿದರು.


















