ಪಡುಬಿದ್ರಿ ಸಂತೆಕಟ್ಟೆ ದೈವರಾಜ ಕೋರ್ದಬ್ಬು ದೈವಸ್ಥಾನ ಅಧ್ಯಕ್ಷರಾಗಿ ಶಶಿಕಾಂತ್ ಪಡುಬಿದ್ರಿ ಆಯ್ಕೆ

ಪಡುಬಿದ್ರಿ: ಸಂತೆಕಟ್ಟೆ ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನದ ಕಾರ್ಯಕಾರಿ ಸಮಿತಿಯ ವಾರ್ಷಿಕ ಮಹಾ ಸಭೆಯು ನಡೆಯಿತು.
ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಮಾಜಿ ಜಿ. ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ ಆಯ್ಕೆಯಾದರು.
ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಬಿ. ದಯಾನಂದ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ರವಿರಾಜ್ ಕೋಟ್ಯಾನ್, ಜತೆ ಕಾರ್ಯದರ್ಶಿಯಾಗಿ ಯತೀಶ್ ದೇವಾಡಿಗ, ಕೋಶಾಧಿಕಾರಿಯಾಗಿ ಚಿತ್ರಾಕ್ಷಿ ಕೆ. ಕೋಟ್ಯಾನ್, ಜತೆ ಕೋಶಾಧಿಕಾರಿಯಾಗಿ ರವೀಂದ್ರ ಸಾಲ್ಯಾನ್ ಸರ್ವಾನುಮತದಿಂದ ಆಯ್ಕೆಯಾದರು.
ಕಾರ್ಯಕಾರಿ ಸಮಿತಿಯ ವಾರ್ಷಿಕ ಮಹಾ ಸಭೆಯ ಬಳಿಕ ಸೆ. 5ರಂದು ನಡೆಯುವ ಹೂವಿನ ಪೂಜೆ ಹಾಗೂ ಚೌತಿ ಪೂಜೆಯ ಬಗ್ಗೆ ಚರ್ಚಿಸಲಾಯಿತು.
ದೈವಸ್ಥಾನದ ಹನ್ನೆರಡನೇ ವರ್ಷದ ಸಂಭ್ರಮದ ಕಲಾಶಾಭಿಷೇಕದ ಬಗ್ಗೆ ಚರ್ಚಿಸಲಾಯಿತು.
ಅಧ್ಯಕ್ಷ ಶಶಿಕಾಂತ ಪಡುಬಿದ್ರಿ ಇವರು ಮುಂದಿನ ಅವಧಿಯ ಅಭಿವೃದ್ಧಿ ಕಾರ್ಯಗಳಿಗೆ ಸರ್ವರ ಸಹಕಾರವನ್ನು ಯಾಚಿಸಿದರು.
ಗೌರವಾಧ್ಯಕ್ಷ ದಯಾನಂದ ಬಿ. ಶೆಟ್ಟಿ ಕಾರ್ಯದರ್ಶಿ ರವಿರಾಜ್ ಕೋಟ್ಯಾನ್, ಜತೆ ಕೋಶಾಧಿಕಾರಿ ರವೀಂದ್ರ ಸಾಲ್ಯಾನ್, ದೈವಸ್ಥಾನದ ಅರ್ಚಕ ಸುರೇಶ್ ಪಡುಬಿದ್ರಿ, ಗುರಿಕಾರ ವಾಮನ ಸಾಲ್ಯಾನ್ ಉಪಸ್ಥಿತರಿದ್ದರು.
