ದೈವ ದೇವಸ್ಥಾನಗಳು ಸುಸ್ಥಿತಿಯಲ್ಲಿದ್ದರೆ ಗ್ರಾಮ ಸುಭಿಕ್ಷೆ: ಶಿಬರೂರು ವೇದವ್ಯಾಸ ತಂತ್ರಿ

ಯಾವ ಗ್ರಾಮದಲ್ಲಿ ದೈವಸ್ಥಾನಗಳು ಜೀರ್ಣಾವಸ್ಥೆಯಲ್ಲಿ ಇರುತೋ ಆ ಗ್ರಾಮ ವಾಸಿಗಳು ಸುಖದಿಂದರಲು ಸಾಧ್ಯವಿಲ್ಲ…ಅದೇ ರೀತಿ ಗ್ರಾಮ ದೇಗುಲಗಳು ಸುಸ್ಥಿತಿಯಲ್ಲಿ ಇದ್ದರೆ ಆ ಗ್ರಾಮ ಸುಭಿಕ್ಷೆಯಿಂದ ಇರುತ್ತೆ ಎಂಬುದಾಗಿ ಶಿಬರೂರು ವೇದವ್ಯಾಸ ತಂತ್ರಿಗಳು ಹೇಳಿದ್ದಾರೆ.


ಅವರು ಪಡುಬಿದ್ರಿ ನಡ್ಸಾಲು ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಪುನಃ ಪ್ರತಿಷ್ಠೆ ಅಷ್ಠಬಂಧ ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶುಭಾಶಂಸನೆ ಮಾಡಿದ್ದಾರೆ. ಈ ಪರಿಸರದಲ್ಲಿ ಪದ್ಮಶಾಲಿ ಸಮಾಜದ ಕುಟುಂಬಗಳು ವಿರಳವಾಗಿದ್ದರೂ ಪರಿಸರದ ಎಲ್ಲಾ ಸಮಾಜದ ಮಂದಿಯೂ ದೇವಳ ಜೀರ್ಣೋದ್ಧಾರಕ್ಕೆ ಕೈ ಜೋಡಿಸಿ ಜೀರ್ಣೋದ್ಧಾರ ಕಾರ್ಯ ಯಶಸ್ವಿಗೊಳಿಸಿರುವುದು ಉತ್ತಮ ಬೆಳವಣಿಗೆ ಎಂದರು. ದೇವಸ್ಥಾನ ನಿರ್ಮಾಣ ದೊಡ್ಡದಲ್ಲ.. ಕಾಲಕಾಲಕ್ಕೆ ನಡೆಯ ಬೇಕಾಗಿದ್ದ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು… ಅದರ ನಿರ್ವಾಹಣೆ ಉತ್ತಮವಾಗಿ ನಡೆಯ ಬೇಕಾಗಿರುವುದು ಅಗತ್ಯ, ನಂಬಿದವರನ್ನು ಈ ಕ್ಷೇತ್ರದ ಆದಿಶಕ್ತಿ ವೀರಭದ್ರ ದೇವರು ಎಂದಿಗೂ ಕೈ ಬಿಡುವುದಿಲ್ಲ ಎಂದರು.
ಅಧ್ಯಕ್ಷತೆಯನ್ನು ಪಡುಬಿದ್ರಿ ಬೀಡಿನ ರತ್ನಾಕರ್ ರಾಜ್ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ವಾದಿರಾಜ ಉಪಾಧ್ಯಾಯ, ಬೈಲೂರು ಮುರಳಿಧರ ತಂತ್ರಿ, ಗುಂಡಿಬೈಲು ಸುಬ್ರಹ್ಮಣ್ಯ ಭಟ್, ಶೀನ ಪೂಜಾರಿ ಕನ್ನಾಂಗಾರು, ಶ್ರೀನಾಥ್ ಹೆಗ್ಡೆ ನಡ್ಸಾಲು ಗುತ್ತು, ಕೃಷ್ಣ ಶೆಟ್ಟಿ ಕಂಕಣ ಗುತ್ತು, ರವಿ ಶೆಟ್ಟಿ ಪಾದೆಬೆಟ್ಟು, ಕಾಂತಣ್ಣ ಗುರಿಕಾರ ಹಳೆಯಂಗಡಿ, ಜಯರಾಮ್ ಶೆಟ್ಟಿಗಾರ್ ಮುಂತಾದವರಿದ್ದರು.