ಪೋಕ್ಸೊ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿರುವ ವಿಚಾರ: ವ್ಯಕ್ತಿಗೆ ನಿಟ್ಟೆ ಮೂಲದ ತಂಡದಿಂದ ಹಲ್ಲೆ

ಈ ಹಿಂದೆ ನಡೆದ ಪೋಕ್ಸೊ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ಹೇಳಲು ಕೋರ್ಟಿಗೆ ಬಂದಿದ್ದ ವ್ಯಕ್ತಿಯನ್ನು ಮರಳಿ ಹೋಗುವಾಗ ತಂಡವೊಂದು ತಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿ ಶಿರ್ವ ಠಾಣಾ ವ್ಯಾಪ್ತಿಯ ಪಂಜಿಮಾರ್ ಎಂಬಲ್ಲಿ ಪೊದೆಗೆ ಎಸೆದು ಪರಾರಿಯಾಗಿದ ಬಗ್ಗೆ ಸುಮಾರು ಹತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಮುಖವಾಗಿ ಫಾರೂಕ್ ನಿಟ್ಟೆ, ಅನಿಲ್, ಶಾರೂಕ್, ಇಕ್ಬಾಲ್ ಸಾಣೂರು ಇತರರ ವಿರುದ್ಧ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
ನಿಟ್ಟೆ ನಿವಾಸಿ ಅಬ್ದುಲ್ ಜಬ್ಬಾರ್ ಎಂಬವರು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿ ಉಡುಪಿ ಗುಂಡಿಬೈಲಿನ ಸಂಬಂಧಿಗಳ ಮನೆಗೆ ಅಟೋ ರಿಕ್ಷಾದಲ್ಲಿ ಹೋಗುತ್ತಿರುವ ಸಂದರ್ಭ ಎರಡು ಕಾರು ಹಾಗೂ ಒಂದು ಸ್ಕೂಟಿಯಲ್ಲಿ ಬೆನ್ನಟ್ಟಿಕೊಂಡು ಬಂದ ಗೂಂಡಾ ಪಡೆ ಅಟೋ ತಡೆದು ನಿಲ್ಲಿಸಿ ಅಟೋ ದಿಂದ ಜಬ್ಬಾರ್ ನನ್ನು ಹೊರಗೆ ಎಳೆದು ತೀವ್ರ ರೀತಿಯಲ್ಲಿ ಹಲ್ಲೆ ನಡೆಸಿ ತಾವು ಬಂದಿದ್ದ ಕಾರಿನಲ್ಲಿ ಕಿಡ್ನಾಪ್ ಮಾಡಿ ಯಾವುದೋ ಅಜ್ಞಾತ ಸ್ಥಳದಲ್ಲಿ ಮರಕ್ಕೆ ಕಟ್ಟೆ ಹಾಕಿ ಅನ್ನ ನೀರು ನೀಡದೆ ಹಿಂಸಿಸಿ, ಶಿರ್ವ ವ್ಯಾಪ್ತಿಯಲ್ಲಿ ಪೊದೆಯೊಂದಕ್ಕೆ ಎಸೆದು ಹೋಗಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.