“ಈಶನ ಭಜಿಸಿದರೆ ಜೀವನ ಮುಕ್ತಿ” : ಶಿವಪಾಡಿಯ ಅತಿರುದ್ರ ಮಹಾಯಾಗದಲ್ಲಿ ಗಣೇಶ್ ಪಾಟೀಲ್ ಉಪನ್ಯಾಸ

ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 28, 2023 ರ ಮಂಗಳವಾರದಂದು ನಡೆದ ಅತಿರುದ್ರ ಮಹಾಯಾಗದ ಏಳನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮಾಹೆಯ ಸಹ ಉಪಕುಲಪತಿಗಳಾದ ಡಾ. ಶರತ್ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ನ ವೈದ್ಯರಾದ ಡಾ. ನಿತೇಶ್ ಶೆಟ್ಟಿ, ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ಕೆ. ರಘುಪತಿ ಭಟ್, ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ಮಹೇಶ್ ಠಾಕೂರ್, ಆದಿ ಭಸ್ಮೇಶ್ವರಿ ಭಜನಾ ಮಂಡಳಿ ಮರಾಠಿ ಸಮಾಜದ ಹತ್ತು ಸಮಸ್ತರ ಕೊಡುವಿಕೆಯ ಶ್ರದ್ಧಾ ಕೇಂದ್ರದ ಸೋಮಯ್ಯ ನಾಯ್ಕ, ಭಸ್ಮೇಶ್ವರಿ ಭಜನಾ ಮಂಡಳಿಯ ಕುಶ, ಕೋಡಿ ಭಜನಾ ತಂಡದ ಬಾಬು ನಾಯ್ಕ, ಉಡುಪಿಯ ಶ್ರೀ ಶಾಂಕರ ತತ್ವಪ್ರಸಾರ ಅಭಿಯಾನದ ಟಿ. ವಿಶ್ವನಾಥ ಶಾನುಭೋಗ್, ಮಣಿಪಾಲ ಮಾಹೆಯ ಜೈ ವಿಠಲ, ಸಮಾಜ ಸೇವಕರಾದ ಭುವನ್ ಪ್ರಸಾದ್ ಹೆಗ್ಡೆ, ಉಡುಪಿಯ ರಾಮಕ್ಷತ್ರೀಯ ಸಮಾಜದ ತಾಲೂಕು ಅಧ್ಯಕ್ಷರಾದ ಕೆ. ಟಿ. ನಾಯ್ಕ, ಉಪನ್ಯಾಸ ನೀಡಲಿರುವ ಪಾಟೀಲ್ ಕ್ಲಾತ್ ಸ್ಟೋರ್ಸ್ ನ ಗಣೇಶ್ ಪಾಟೀಲ್, ಶ್ರೀ ಉಮಾಮಹೇಶ್ವರ ದೇವಸ್ಥಾನದ ಟ್ರಸ್ಟಿಗಳಾದ ಸುಭಾಕರ ಸಾಮಂತ್, ದಿನೇಶ್ ಪ್ರಭು, ದಿನೇಶ್ ಶ್ರೀಧರ ಸಾಮಂತ, ಅಶೋಕ್ ಸಾಮಂತ, ಜಿ. ಕೃಷ್ಣರಾಯ ಪಾಟೀಲ್, ಶ್ರೀ ಪ್ರಭು ಉಪಸ್ಥಿತರಿದ್ದರು.

ನಂತರ ನಡೆದ ಧಾರ್ಮಿಕ ಉಪನ್ಯಾಸದಲ್ಲಿ ಗಣೇಶ್ ಪಾಟೀಲ್ ಅವರು, ಜೀವನದಲ್ಲಿ ಮೂರು ವಿಷಯಗಳನ್ನು ನಾವೇ ಮಾಡಬೇಕು. ಮೊದಲನೆಯದ್ದು, ಭವದಿಂದ ಜವದೆಡೆಗೆ ನೆಗೆಯಲಿರುವ ಸಾಧನ ಭಜನೆ. ಭಜನೆ ನಮ್ಮ ವಯಕ್ತಿಕ ಸಾಧನ. ಭಜನೆಯನ್ನು ನಾವೇ ಮಾಡಬೇಕು. ನಮ್ಮ ಆತ್ಮದ ಉದ್ದಾರವನ್ನು ನಾವೇ ಮಾಡಬೇಕಿದೆ. ನಮ್ಮ ಸಂಸಾರದವರು ಮಾಡಿದ ಭಜನೆಯ ಪ್ರಾಪ್ತಿ ನಮಗೆ ಸಿಗುವುದಿಲ್ಲ. ಎರಡನೆಯದ್ದು, ಮೃತ್ಯುವಾಗಿದೆ. ನಾವು ಸಾಯುವ ಹೊತ್ತಿಗೆ ನಾವೇ ಸಾಯಬೇಕು. ಮೃತ್ಯು ದೇವತೆಯ ಕರೆ ಬಂದಾಗ, ಮನುಷ್ಯ ಕ್ಷಣ ಮಾತ್ರದಲ್ಲೇ ಶವವಾಗುತ್ತಾನೆ. ಹಾಗಾಗಿ ಈಶನ ಭಜನೆ ಮಾಡಿದರೆ, ಜೀವನ ಮುಕ್ತಿ ಸಿಗುತ್ತದೆ. ಮೂರನೆಯದ್ದು ಊಟ. ನಮ್ಮ ಊಟವನ್ನು ನಾವೇ ಮಾಡಬೇಕು. ಈ ಮೂರು ವಿಷಯಗಳನ್ನು ನಾವೇ ಮಾಡಬೇಕು. ನಿಂತಾಗ, ಎದ್ದಾಗ, ಕುಳಿತಾಗ, ನಲಿಯುವಾಗ ಭಗವಂತನ ಚಿಂತನೆ ಮಾಡಿದರೆ, ಬದುಕು ಸುಂದರಮಯವಾಗುತ್ತದೆ ಎಂದು ಜೀವನದಲ್ಲಿ ಭಗವಂತನ ಉಪಾಸನೆಯ ಮಹತ್ವವನ್ನು ತಿಳಿಸಿದರು.

ಧಾರ್ಮಿಕ ಉಪನ್ಯಾಸದ ಬಳಿಕ ವಿದುಷಿ ರೂಪಾ ಕಿರಣ್, ಹಾಂಕಾಂಗ್ ಅವರಿಂದ ಭರತನಾಟ್ಯ, ಮಂಗಳೂರಿನ ಸಾಯಿ ಶಕ್ತಿ ಕಲಾ ತಂಡದ ಪ್ರಸ್ತುತಿಯಲ್ಲಿ “ಬೊಳ್ಳಿ ಮಲೆತ ಶಿವ ಶಕ್ತಿಲು” ತುಳು ಪೌರಾಣಿಕ ನಾಟಕ ಜರುಗಿತು.

Related Posts

Leave a Reply

Your email address will not be published.