ಆಟೋ ರಾಜರಿಂದ ಶಂಕರನ ಸೇವೆ : ಕಾಸು ಕೇಳದೆ ಶಿವಪಾಡಿ ಸನ್ನಿಧಿಗೆ ಡ್ರಾಪ್!

ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಫೆಬ್ರವರಿ 22, 2023 ರಿಂದ ನಡೆಯುತ್ತಿರುವ ಅತಿರುದ್ರ ಮಹಾಯಾಗದ, ಒಂಬತ್ತನೇ ದಿನವಾದ ಮಾರ್ಚ್ 02, 2023 ರ ಗುರುವಾರದಂದು, ಬೆಳಗ್ಗೆ ಅತಿರುದ್ರ ಯಾಗಮಂಟಪದಲ್ಲಿ ಋತ್ವಿಜರಿಂದ ಮಹಾನ್ಯಾಸಪೂರ್ವಕ ಶ್ರೀ ರುದ್ರ ಪುರಶ್ಚರಣ ಮತ್ತು ಶತಚಂಡಿಕಾ ಯಾಗಮಂಟಪದಲ್ಲಿ ಶತಚಂಡಿಕಾ ಯಾಗ ಮತ್ತು ಪೂರ್ಣಾಹುತಿ, ಸುವಾಸಿನಿ ಆರಾಧನೆ, ಕನ್ನಿಕಾ ಆರಾಧನೆ, ದಂಪತಿ ಪೂಜೆ, ಆಚಾರ್ಯ ಪೂಜೆ, ಶ್ರೀ ದೇವರಿಗೆ ಮಹಾಪೂಜೆ, ಮಹಾಸಂತರ್ಪಣೆ ನಡೆಯುತ್ತಿದೆ.


ಶಿವಪಾಡಿಯಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದಲ್ಲಿ ಪ್ರತೀನಿತ್ಯ ಏನಾದರೊಂದು ವಿಶೇಷವಾದ ವಿಚಾರಗಳು ಎಲ್ಲರ ಗಮನ ಸೆಳೆಯುತ್ತಿದೆ. ಜನರು ಅತಿರುದ್ರ ಮಹಾಯಾಗಕ್ಕೆ ತೋರುವ ಆಸಕ್ತಿ ಮತ್ತು ಮಹೇಶ್ವರನಿಗೆ ನೀಡುವ ಸೇವೆಯೇ ಈ ಅಪರೂಪದ ಯಜ್ಞದ ಆಕರ್ಷಣೆಯಾಗಿದೆ. ಅಂತೆಯೇ ಉಡುಪಿ ಸಂತೆಕಟ್ಟೆಯ ಕೆನರಾ ಆಟೋಮೋಟಿವ್ ಶೋರೂಮ್ ಅವರಿಂದ ಶಿವಪಾಡಿಯಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗಕ್ಕೆ ಆಗಮಿಸುವ ಭಕ್ತಾಭಿಮಾನಿಗಳಿಗೆ ಉಚಿತವಾಗಿ ಆಟೋ ಪಯಣವನ್ನು ಕಲ್ಪಿಸಿದ್ದಾರೆ. ಮಾರ್ಚ್ 02, 2023 ರಿಂದ ಪ್ರಾರಂಭಗೊಂಡು 3 ದಿನಗಳ ಕಾಲ ಮಣಿಪಾಲದ ಈಶ್ವರನಗರದಿಂದ ಶಿವಪಾಡಿಯ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಉಚಿತವಾಗಿ ಆಟೋದಲ್ಲಿ ತಲುಪಿಸುವ ಈ ವಿಭಿನ್ನ ಸೇವೆ ನಡೆಯಲಿದೆ. ಪ್ರತಿಕ್ರಮದಲ್ಲಿ ಶಿವಪಾಡಿಯಿಂದ ಈಶ್ವರನಗರಕ್ಕೆ ಭಕ್ತಾಭಿಮಾನಿಗಳನ್ನು ಉಚಿತವಾಗೇ ತಲುಪಿಸಲಾಗುತ್ತದೆ. ಇದು ಸಂತೆಕಟ್ಟೆಯ ಕೆನರಾ ಆಟೋಮೋಟಿವ್ ಶೋರೂಮ್ ಅವರು ಅತಿರುದ್ರ ಮಹಾಯಾಗಕ್ಕೆ ನೀಡುವ ವಿಶಿಷ್ಠವಾದ ಸೇವೆಯಾಗಿದೆ. ಈಶ್ವರನಗರದಿಂದ ಶಿವಪಾಡಿಯ ಅತಿರುದ್ರ ಮಹಾಯಾಗಕ್ಕೆ ಆಗಮಿಸುವ ಎಲ್ಲ ಭಕ್ತಾದಿಗಳು ಈ ಅಪರೂಪದ ಸೇವೆಯನ್ನು ಪಡೆಯಬಹುದಾಗಿದೆ.

Related Posts

Leave a Reply

Your email address will not be published.