ಶ್ರೀ ಗುರುಪರಾಶಕ್ತಿ ಮಠ, ಮರಕಡ ಮಡ್ಯಾರು ಕ್ಷೇತ್ರದಲ್ಲಿ ಸೋಮವಾರ ಮಹಾ ಆರಾಧನೋತ್ಸವ

ಮಂಗಳೂರು: ಮಡುಗಟ್ಟಿದ ಹೃದಯದೊಳಗೆ ‘ತಾಯಿ’ಋ ಎಂಬ ಎರಡಕ್ಷರದಿ ನಿತ್ಯ ಸಂಚಲನ ಮೂಡಿಸಿ, ಭಾವ ಪರವಶತೆಯ ಉತ್ತುಂಗತೆಯತ್ತ ಕೊಂಡೊಯ್ದು,ಅನಂತತೆಯ ಹೂರಣವೇ ತಾನಾದರೂ ನಮ್ಮನೊಡನಾಡಿಗಳಾಗಿಸಿ, ಮಾಯಾತೀತನೇ ತಾನಾಗಿ ಮಾಯೆಯೊಳಗಿನ ಸೊಗಡ ಬಿತ್ತರಿಸಿ, ಸಂಘತ್ವದೊಳಗೆ ನಿತ್ಯ ನಿರಂತರ ಪ್ರೀತಿಯ ಹೊನಲನ್ನೇ ಹರಿಸಿದ ಸ್ವಾಮಿ,ಆರಾಧ್ಯ ದೈವತ ಪರಮಪೂಜ್ಯ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಮಹಾಸ್ವಾಮಿಯವರ ದಿವ್ಯ ಸಾನಿಧ್ಯ ನೆಲೆಗೊಂಡಿರುವ ಮಡ್ಯಾರು ಶ್ರೀ ಪರಾಶಕ್ತಿ ಕ್ಷೇತ್ರದಲ್ಲಿ ದಿನಾಂಕ 12.01.2026 ಸೋಮವಾರ ದಂದು ಮಹಾ ಆರಾಧನೋತ್ಸವವು ನಡೆಯಲಿರುವುದು.

ಈ ಮಹತ್ಕಾರ್ಯದಲ್ಲಿ ಪಾಲ್ಗೊಂಡು ಮಹಾಸ್ವಾಮಿಯವರ ಮಹಾ ಆರಾಧನೋತ್ಸವದಲ್ಲಿ ನಾವೆಲ್ಲರೂ ಭಾಗಿಗಳಾಗಿ ಪೂಜ್ಯರ ಅನುಗ್ರಹಕ್ಕೆ ಪಾತ್ರರಾಗೋಣ ಎಂದು ಸಂಸ್ಥಾಪಕರು ಶ್ರೀ ಗುರುಪರಾಶಕ್ತಿ ಮಠ ಮರಕಡ,ಶ್ರೀ ಪರಾಶಕ್ತಿ ಕ್ಷೇತ್ರ ಮಡ್ಯಾರು ಹಾಗೂ ಶ್ರೀ ದೇವರ ಅರಮನೆ ಕೋಟೆಕಾರು ಮತ್ತು ಭಕ್ತ ಸಮೂಹ ಶ್ರೀ ಗುರುಪರಾಶಕ್ತಿ ಮಠ, ಮರಕಡ ವಿನಂತಿಸಿ ಕೊಂಡಿದ್ದಾರೆ.

Related Posts

Leave a Reply

Your email address will not be published.