ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್( ರಿ )24 ನೇ ವಾರ್ಷಿಕೋತ್ಸವ

ಪಚ್ಚನಾಡಿ ದೇವಿ ನಗರದ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಸಾರ್ವಜನಿಕರಿಗಾಗಿ ಸತ್ಯನಾರಾಯಣ ಪೂಜೆ, ಶನಿಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲದೆ ಕ್ರೀಡಾ ಅಭಿಮಾನಿಗಳಿಗೆ ವಿವಿಧ ಕ್ರೀಡಾಕೂಟಗಳ ಆಯೋಜನೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ, ಶೈಕ್ಷಣಿಕವಾಗಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿ ಗೌರವ ಕಲ್ಪಿಸುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ, ವಿವಿಧ ಕ್ಷೇತ್ರಗಳಲ್ಲಿರುವ ಸಾಧಕರಿಗೆ ಗೌರವಾರ್ಪಣೆ, ಪ್ರತಿ ವರ್ಷದ ವಾರ್ಷಿಕ ಉತ್ಸವದ ಸಮಾರಂಭ ವೇದಿಕೆಯಲ್ಲಿ ತೀರಾ ಬಡ ಕುಟುಂಬಗಳಿಗೆ ಅಕ್ಕಿ ವಿತರಣೆಯಂತಹ ಕಾರ್ಯಕ್ರಮಗಳಲ್ಲದೆ, ಕೊರೊನಾ ಸಮಯದಲ್ಲಿ 750 ಬಡ ಕುಟುಂಬಗಳಿಗೆ ತಲಾ 10 ಕೆಜಿ ಅಕ್ಕಿಯಂತೆ ನೀಡುವ ಮೂಲಕ ಬಡ ಕುಟುಂಬಗಳಿಗೆ ಆಸರೆಯಾಗಿದೆ.

ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ನ ಹೆಮ್ಮೆಯ ಯೋಜನೆಗಳಲ್ಲಿ ಒಂದಾದ ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಹ ಪಲಾನುಭವಿಗಳಾದ 2 ಹೆಣ್ಣು ಮಕ್ಕಳಿಗೆ ತಲಾ 50000/- ದಂತೆ ಠೇವಣಿ ಬಾಂಡ್ ವಿತರಿಸಲಾಗಿದೆ. ವೈದ್ಯನಾಥ ನಗರ ಅಂಗನವಾಡಿಗೆ 25 ಆಸನ(ಚೇರ್ )ದ ವ್ಯವಸ್ಥೆ ಒದಗಿಸಲಾಗಿದೆ. ಕಳೆದ ಬಾರಿ ಪ್ರಕೃತಿ ವಿಕೋಪಕ್ಕೆ ಸಿಲುಕಿದ ಸೋಮವ್ವ ಕುಟುಂಬದ ಮನೆಯನ್ನು ಕೊಡುಗೈ ದಾನಿಗಳ ಸಹಕಾರದಿಂದ ಪುನರ್ ನಿರ್ಮಾಣ ಮಾಡಿ ಸಂಭ್ರಮದಿಂದ ತುಂಬುಮನದಿ ಮನೆ ಹಸ್ತಾಂತರಿಸುವ ಕಾರ್ಯಕ್ರಮವು ನೆರವೇರಿದೆ. ಕೊರೊನಾ ಲಸಿಕೆ, ಆಧಾರ್ ಕಾರ್ಡ್ ಮುಂತಾದ ಅನೇಕ ಸರಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ಯಶಸ್ವಿಯಾಗಿದೆ. ರಕ್ತದಾನ ಶಿಬಿರ, ವೈದ್ಯಕೀಯ ಶಿಬಿರ, ಕಾನೂನು ಮಾಹಿತಿ ಶಿಬಿರಗಳನ್ನು ಆಯೋಜಿಸಿದೆ.

ಧರ್ಮ ಬೇದವಿಲ್ಲದೆ ಎಲ್ಲಾ ಧರ್ಮದ ಧಾರ್ಮಿಕ ಕಾರ್ಯಕ್ರಮಗಳಿಗೆ ಹೊರೆಕಾಣಿಕೆ ಸಮರ್ಪಿಸಿದೆ.ರಾಷ್ಟ್ರೀಯ ಉತ್ಸವಗಳಾದ ಸ್ವಾತಂತ್ರ್ಯ ದಿನಾಚರಣೆ, ಮಕ್ಕಳ ದಿನಾಚರಣೆ, ಪರಿಸರ ಸ್ವಚ್ಛತೆಗಾಗಿ ಶ್ರಮದಾನ ಮೂಲಕ ಗಾಂಧಿ ಜಯಂತಿ ಆಚರಣೆ, ವನ ಮಹೋತ್ಸವ ಆಚರಣೆ ಹಾಗೂ ಆಟಿ ತಿಂಗಳ ವಿವಿಧ ಕೂಟಗಳು ಸಂಭ್ರಮದಿಂದ ಆಚರಿಸುತ್ತಿದೆ.ಮೋಹನ್ ಪಚ್ಚನಾಡಿ, ರಾಜೇಶ್ ಕುಲಾಲ್ ದೇವಿ ನಗರ , ಕಿರಣ್ ಸಂತೋಷನಗರ, ದಯಾನಂದ ಸಂತೋಷನಗರ, ಬಾಲಕೃಷ್ಣ ತೋಯಿಪಕಲ್, ನಟರಾಜ್ ಪಚ್ಚನಾಡಿ, ನವೀನ್ ಕುಲಾಲ್ ದೇವಿ ನಗರ , ಗೌರೀಶ್ ದೇವಿನಗರ, ಮನೋಜ್ ದೇವಿನಗರ, ದನ್ ಪಾಲ್ ಬಂದಲೆ, ಶೈಲೇಶ್ ದೇವಿನಗರ, ಗಣೇಶ್ ದೇವಿನಗರ, ತುಕಾರಾಂ ಪಚ್ಚನಾಡಿ, ಶಿವಾನಂದ ದೇವಿನಗರ, ಪ್ರವೀಣ್ ಶೆಟ್ಟಿ ಪಚ್ಚನಾಡಿ, ಪ್ರಕಾಶ್ ದೇವಿನಗರ, ಕಿಶೋರ್ ಅಂಚನ್ ದೇವಿ ನಗರ,ಸುಧಾಕರ್ ಪಚ್ಚನಾಡಿ, ದನ್ ರಾಜ್ ಶೆಟ್ಟಿ ದೇವಿನಗರ ಪಚ್ಚನಾಡಿ ಮುಂತಾದ ಸಮಾಜಮುಖಿ ಕಾರ್ಯಕರ್ತರನ್ನು ಒಳಗೊಂಡ ಕಾರ್ಯಕಾರಿಣಿ ಸಮಿತಿ ಅಲ್ಲದೆ ಒಟ್ಟು 40 ಸದಸ್ಯರ ತಂಡ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್… ಅಲ್ಲದೆ 25 ಜನ ಮಹಿಳಾ ಸದಸ್ಯರನ್ನೊಳಗೊಂಡ ಶ್ರೀ ದೇವಿ ಮಾತೃ ಮಂಡಳಿಯೂ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ನ ಶಕ್ತಿಯಾಗಿದೆ.
ಪರಿಸರದಲ್ಲಿ ಈಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ನಮ್ಮ ಹೆಮ್ಮೆಯ ಶ್ರೀ ದೇವಿ ಫ್ರೆಂಡ್ಸ್ ಸರ್ಕಲ್ ನ ವಾರ್ಷಿಕೋತ್ಸವಕ್ಕೆ ನಿಮಗೆಲ್ಲರಿಗೂ ಪ್ರೀತಿಪೂರ್ವಕ ಸ್ವಾಗತ… ನಮ್ಮ ಸಮಾಜಮುಖಿ ಹತ್ತು ಹಲವಾರು ಕಾರ್ಯಕ್ರಮಗಳಿಗೆ ನಮ್ಮ ಊರಿನ ಎಲ್ಲಾ ಸಂಘಸಂಸ್ಥೆಗಳ ಕೊಡುಗೆ ಹಾಗೂ ಊರ ಪರವೂರ ಕೊಡುಗೈ ದಾನಿಗಳ ಸಹಕಾರವನ್ನು ಸ್ಮರಿಸುತ್ತೇವೆ ಮತ್ತು ಮುಂದೆಯೂ ಎಲ್ಲರ ತನುಮನಧನದ ಸಹಕಾರವನ್ನು ಬಯಸುತ್ತಿದೆ.

Related Posts

Leave a Reply

Your email address will not be published.