ಪುನರ್ವಸು ಆಯುರ್ವೇದ ಕ್ಲಿನಿಕ್ ಕ್ಕೋಟ್ಟಕ್ಕಲ್ ಆರ್ಯ ವೈದ್ಯ ಶಾಲಾ ಔಷಧ ಮಳಿಗೆ ಶುಭಾರಂಭ

ಮಂಗಳೂರಿನ ಪದವಿನಂಗಡಿ ಸಮೀಪದಲ್ಲಿ ಪುನರ್ವಸು ಆಯುರ್ವೇದ ಕ್ಲಿನಿಕ್ ಮತ್ತು ಕೋಟ್ಟಕ್ಕಲ್ ಆರ್ಯ ವೈದ್ಯ ಶಾಲಾ ಔಷಧ ಮಳಿಗೆ ಶುಭಾರಂಭಗೊಂಡಿತು.ಆಯುರ್ವೇದವು ಬಹಳ ಹಿಂದಿನಿಂದಲೂ ಆರೋಗ್ಯ ಸಮಸ್ಯೆಗಳಿಗೆ ಉತ್ತಮ ಪರಿಹಾರವನ್ನು ನೀಡುತ್ತ ಬಂದಿದೆ. ನೈಸರ್ಗಿಕ ಪ್ರಕ್ರಿಯೆಯ ಮೂಲಕ ಮತ್ತು ಸಾಂಪ್ರದಾಯಿಕ ಔಷಧಿಗಳ ಮೂಲಕ ಪರಿಹಾರವನ್ನು ಆಯುರ್ವೇದ ನೀಡುತ್ತದೆ. ಮಂಗಳೂರಲ್ಲಿ ಹಲವಾರು ವರ್ಷಗಳಿಂದ ಸೇವೆಯನ್ನ ನೀಡುತ್ತಾ ಬಂದಿರುವ ಪುನರ್ವಸು ಆಯುರ್ವೇದ ಕ್ಲಿನಿಕ್ ಎಲ್ಲಾರ ಮೆಚ್ಚುಗೆಯನ್ನ ಪಡೆದುಕೊಂಡಿದೆ. ಇದೀಗ ಮಂಗಳೂರಿನ ಪದವಿನಂಗಡಿಯ ಪದ್ಮ ಕಸ್ತೂರಿ ಪಾನ್ಸನ್ಸ್ ಪ್ಲಾಜಾದಲ್ಲಿ ಪುನರ್ವಸು ಆಯುರ್ವೇದ ಕ್ಲಿನಿಕ್ ಹಾಗೂ ಕೋಟ್ಟಕ್ಕಲ್ ಆರ್ಯ ವೈದ್ಯ ಶಾಲಾ ಜೌಷಧ ಕೇಂದ್ರ ನೂತನ ಮಳಿಗೆ ಶುಭಾರಂಭಗೊಂಡಿತ್ತು. ಇನ್ನು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರು ಗಣ್ಯರ ಸಮ್ಮುಖದಲ್ಲಿ ದೀಪ ಬೆಳೆಗಿಸಿ, ಹಾಗೂ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ಅವರು ಮಾತನಾಡಿ,ಅಲೋಪತಿ ಬದಲಿಗೆ ಆಯುರ್ವೇದ ಬಹಳ ಉತ್ತಮ ಔಷಧಿ ಎಂದು ಜನರಲ್ಲಿ ಮನವರಿಕೆ ಆಗುತ್ತಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಈ ಮಳಿಗೆ ಯಶಸ್ಸು ಕಾಣಲಿ ಎಂದು ಶುಭಾ ಹಾರೈಸಿದರು.

ಉದ್ಘಾಟನಾ ಸಮಾರಂಭ ಪ್ರಯುಕ್ತ ವೇದ ಮೂರ್ತಿ ಕಲ್ಲುಕುಟ್ಟಿ ಮೂಲೆ ರವಿ ಭಟ್ ಇವರ ನೇತೃತ್ವದಲ್ಲಿ ಧನ್ವಂತರಿ ಪೂಜೆ ನೆರವೇರಿತು.
ಈ ವೇಳೆ ಕೋಟ್ಟಕ್ಕಲ್ ಆರ್ಯವೈದ್ಯಶಾಲೆಯ ಮುಖ್ಯಸ್ಥರಾದ ಡಾ. ಶಂಕರನ್ ನಂಬೂದರಿ, ವೈದ್ಯರಾದ ಡಾ. ಸೌಮ್ಯಶ್ರೀ ಕೆ.ಎಮ್, ಯೆನೆಪೆÇೀಯ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಶಂಕರನಾರಾಯಣ. ಪಿ, ಕೆ.ಮಹಾಬಲೇಶ್ವರ ಭಟ್, ಪಿ.ಶ್ರೀಕೃಷ್ಣ ಭಟ್, ಗಾಯತ್ರಿ, ಲೀಲಾವತಿ, ಕುಮಾರ್ ಎಸ್.ಪಿ, ಸರಸ್ವತಿ, ಕೃಷ್ಣ ಪ್ರಕಾಶ್, ವೇಣುಗೋಪಾಲ ಎನ್, ಕುಮಾರಿ ಅಧ್ಯಾ, ಕುಮಾರಿ ಹೃದ್ಯ, ಡಾ.ಹರಿಕೃಷ್ಣ , ಡಾ.ಜ್ಯೋತಿ ಭಾರದ್ವಾಜ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಕೋಟ್ಟಕ್ಕಲ್ ಆರ್ಯ ವೈದ್ಯ ಶಾಲೆಯ ಎಲ್ಲಾ ಆಯುರ್ವೇದ ಜೌಷಧಗಳು, ಉತ್ತಮ ಗುಣಮಟ್ಟದ , ರಾಸಾಯನಿಕ ರಹಿತ ಜೇನುತುಪ್ಪ, ದನದ ತುಪ್ಪ, ತಾಳೆ ಸಕ್ಕರೆ, ಕಾಳುಮೆಣಸು, ಏಲಕ್ಕಿ , ಲವಂಗ, ಒಣಶುಂಠಿ ಹುಡಿ, ದಾಲ್ಚೀನಿ, ಹಿಂಗು ಸೇರಿದಂತೆ ಆಯುರ್ವೇದ ಜೌಷಧಗಳು ಲಭ್ಯವಿದೆ. ನುರಿತ ವೈದ್ಯರು ಇಲ್ಲಿ ಚಿಕಿತ್ಸೆಯನ್ನು ನೀಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ: 8073864085