ಶ್ರೀ ರಾಮಕೃಷ್ಣ ಶಾಲೆಯ ವಾರ್ಷಿಕ ಕ್ರೀಡೋತ್ಸವ

ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಶ್ರೀ ರಾಮಕೃಷ್ಣ ಶಾಲೆಯ ವಾರ್ಷಿಕ ಕ್ರೀಡೋತ್ಸವವು ಮಂಗಳಾ ಕ್ರೀಡಾಂಗಣದಲ್ಲಿ ಜರುಗಿತು. ಶಾಲೆಯ ಹಳೆ ವಿದ್ಯಾರ್ಥಿಗಳಾದ ಅಂತರರಾಷ್ಟಿçÃಯ ಈಜು ಪಟುಗಳಾದ ಸಾನ್ಯ ಡಿ. ಶೆಟ್ಟಿ ಮತ್ತು ರಚನ ರಾವ್ ಅತಿಥಿಗಳಾಗಿ ಆಗಮಿಸಿದ್ದರು.

ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲೆ ಪ್ರೆಸಿಲ್ಲ ಡಿಸೋಜಾ, ಉಪಪ್ರಾಂಶುಪಾಲೆ ರೂಪ ಮತ್ತು ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಗೌತಮ್ ಭಂಡಾರಿ, ಪೋಷಕರು ಮತ್ತು ರಕ್ಷಕ ಶಿಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಸುನಿತಾ ಅವರು ಸಂಯೋಜಿಸಿದ್ದರು. ಮಳೆಯ ನಡುವೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ತಮ್ಮ ಕ್ರೀಡಾ ಪ್ರಿಯತೆ ಮತ್ತು ಆಸಕ್ತಿಯನ್ನು ತೋರಿಸಿದರು. ಶಿಕ್ಷಕರು ಕ್ರೀಡೋತ್ಸವದ ಯಶಸ್ಸಿಗೆ ಸಹಕರಿಸಿದರು. ಶಾಲಾ ಶಿಕ್ಷಕಿ ದೀಪ್ತಿ ಧನ್ಯವಾದ ಸಮರ್ಪಿಸಿದರು.

ಶಾಲೆಯ ಶಾರೀರಿಕ ಶಿಕ್ಷಣ ನಿರ್ದೇಶಕಿ ಯಶೋಧಾ ನಾಯಕ್ ಮತ್ತು ಕಾಲೇಜಿನ ಶಾರೀರಿಕ ಶಿಕ್ಷಣ ನಿರ್ದೇಶಕ ವಿಷ್ಣುವರ್ಧನ್ ಟ್ರಾö್ಯಕ್ ಸ್ಪರ್ಧೆಗಳನ್ನು ನಡೆಸಿಕೊಟ್ಟರು.

Related Posts

Leave a Reply

Your email address will not be published.