ಬಾಲಕ-ಬಾಲಕಿಯರ ರಾಜ್ಯಮಟ್ಟದ ಯೋಗಾಸನ ಸ್ಪಧೆ೯: ಆಳ್ವಾಸ್ ಗೆ ತಂಡ ಪ್ರಶಸ್ತಿ

ಮೂಡುಬಿದಿರೆ: 12 ಸ್ಪಧಿ೯ಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ ನಾಗಮಂಗಲದಲ್ಲಿ ನಡೆದ ರಾಜ್ಯ ಮಟ್ಟದ 14 ಮತ್ತು 17 ವಯೋಮಾನದ ಬಾಲಕ ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ ಆಳ್ವಾಸ್ ಶಾಲೆಯ ವಿದ್ಯಾರ್ಥಿಗಳು 14 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಹಾಗೂ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ತಂಡ ಪ್ರಶಸ್ತಿ ಪಡೆದುಕೊಳ್ಳುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ. ಆಳ್ವಾಸ್ ಶಾಲೆಯ 12 ಯೋಗ ಕೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.

ಫಲಿತಾಂಶ : ಅಂಡರ್ 14 ಆರ್ಟಿಸ್ಟಿಕ್ ಯೋಗ ಪೇರ್ ಬಾಲಕರ ವಿಭಾಗದಲ್ಲಿ : ಶ್ಯಾಮ ಮತ್ತು ಶಶಿಕುಮಾರ್ – ಪ್ರಥಮ, ಅಂಡರ್ 14 ರಿದಮಿಕ್ ಯೋಗ ಪೇರ್ ಬಾಲಕರ ವಿಭಾಗದಲ್ಲಿ : ಆದರ್ಶ್ ಮತ್ತು ಶಶಾಂಕ್ – ಪ್ರಥಮ, ಅಂಡರ್ 14 ಆರ್ಟಿಸ್ಟಿಕ್ ಯೋಗ ಸಿಂಗಲ್‌ನಲ್ಲಿ ಬಾಲಕರ ವಿಭಾಗದಲ್ಲಿ : ಆದರ್ಶ ಕೆ.ಎಸ್ – ಪ್ರಥಮ, ಅಂಡರ್ 14 ಟ್ರೆಡಿಶನಲ್ ಯೋಗ ಬಾಲಕರ ವಿಭಾಗದಲ್ಲಿ : ಶಶಿಕುಮಾರ್ ವಿ.ಜಿ – ಪ್ರಥಮ, ಅಂಡರ್ 17 ಆರ್ಟಿಸ್ಟಿಕ್ ಯೋಗ ಪೇರ್ ಬಾಲಕರ ವಿಭಾಗದಲ್ಲಿ : ಕಾರ್ತಿಕ್ ಮತ್ತು ಪ್ರಜ್ವಲ್ – ಪ್ರಥಮ, ಅಂಡರ್ 17 ಆರ್ಟಿಸ್ಟಿಕ್ ಯೋಗ ಪೇರ್ ಬಾಲಕಿಯರ ವಿಭಾಗದಲ್ಲಿ : ಹಿಮಜ ಮತ್ತು ಶ್ರಾವಣಿ – ಪ್ರಥಮ, ಅಂಡರ್ 17 ರಿದಮಿಕ್ ಯೋಗ ಪೇರ್ ಬಾಲಕರ ವಿಭಾಗದಲ್ಲಿ : ಶ್ರೀವತ್ಸರಾಜ್ ಮತ್ತು ಶ್ರೇಯಸ್ – ಪ್ರಥಮ, ಅಂಡರ್ 17 ರಿದಮಿಕ್ ಯೋಗ ಪೇರ್ ಬಾಲಕಿಯರ ವಿಭಾಗದಲ್ಲಿ : ಸಾನಿಕ ಮತ್ತು ಜಯಲಕ್ಷ್ಮಿ-ಪ್ರಥಮ, ಯೋಗಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.

Related Posts

Leave a Reply

Your email address will not be published.