4 ತಿಂಗಳ ಹಿಂದೆ ರಿಜಿಸ್ಟರ್ ಮದುವೆಯಾಗಿದ್ದ ಯುವತಿ ಆತ್ಮಹತ್ಯೆ
ಕಡಬ ಪೊಲೀಸ್ ಠಾಣೆ : ಪಿರ್ಯಾಧಿದಾರರಾದ ಶಿವಪ್ರಸಾದ್ (55), ಕುಟ್ರುಪ್ಪಾಡಿ ಗ್ರಾಮ, ಕಡಬ ತಾಲೂಕು. ಅವರ ಹಿರಿಯ ಮಗಳು ಶಿಲ್ಪಾ (28) 4 ತಿಂಗಳ ಹಿಂದೆ ಮನೋಜ್ ಎಂಬಾತನೊಂದಿಗೆ ರೆಜಿಸ್ಟರ್ ಮದುವೆಯಾಗಿದ್ದಳು. ಮದುವೆಯ ನಂತರ ದಂಪತಿ ರಾಮಕುಂಜ ಗ್ರಾಮದಲ್ಲಿ ವಾಸವಿದ್ದು, ಶಿಲ್ಪಾ ಕೆಲಸಕ್ಕೆ ಕಡಬಕ್ಕೆ ಬರುತ್ತಿದ್ದಳು. 08.01.2026 ರಂದು ಸಂಜೆ ಶಿಲ್ಪಾ ವಿಷ ಸೇವಿಸಿದ್ದಾಗಿ ಮಾಹಿತಿ ಬಂದಿದ್ದು, ಚಿಕಿತ್ಸೆಗೆ ಕಡಬ ಸರಕಾರಿ ಆಸ್ಪತ್ರೆ, ವೆನ್ಲಾಕ್ ಹಾಗೂ ಎನೆಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ 09.01.2026 ರಂದು ಮಧ್ಯಾಹ್ನ 01:46ಕ್ಕೆ ಮೃತಪಟ್ಟಿರುತ್ತಾಳೆ. ಈ ಬಗ್ಗೆ ಕಡಬ ಪೊಲೀಸ್ ಠಾಣಾ ಯು ಡಿ ಆರ್ ನಂಬ್ರ 01/2026 ಕಲಂ:194 (3) (iv) BNSS-2023..ಯಂತೆ ಪ್ರಕರಣ ದಾಖಲಾಗಿರುತ್ತದೆ.


















