ಸುಳ್ಯ: ಎನ್ನೆಂಸಿಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳು ದಿನಾಂಕ 16 -11-2025 (ಆದಿತ್ಯವಾರ) ರಂದು ಅಸೈಗೊಳಿ (ಕೊಣಾಜೆ)ಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮೂಹ ಜನಪದ ಗೀತೆಯಲ್ಲಿ ಪ್ರಥಮ ,(ಅಭಿಷೇಕ್ ಎಂ ( ದ್ವಿತೀಯ ಬಿ. ಎಸ್ಸಿ ), ಚೈತ್ರ . ಕೆ. ಟಿ, ( ತೃತೀಯ ಬಿ. ಎಸ್ಸಿ ), ಜೀಷ್ಮ . ಬಿ. ಎಸ್( ತೃತೀಯ ಬಿ. ಎಸ್ಸಿ ), ಅಕ್ಷತಾ . ಸಿ, ( ತೃತೀಯ ಬಿ. ಎಸ್ಸಿ ), ಮನಸ್ವಿ .ಪಿ, ( ತೃತೀಯ ಬಿ. ಎಸ್ಸಿ ), ಪ್ರೀಕ್ಷಾ. ಎಂ ( ದ್ವಿತೀಯ ಬಿ. ಎಸ್ಸಿ ), ಕವನ ಕೊಯಿಂಗಾಜೆ ( ದ್ವಿತೀಯ ಬಿ. ಎಸ್ಸಿ ) ಯಶಿತ . ಹೆಚ್ ( ಬಿ. ಸಿ. ಎ ), ಯುಕ್ತಿ . ಕೆ. ಎಂ, ( ದ್ವಿತೀಯ ಬಿ. ಕಾಂ), ಅಕ್ಷತಾ .ಎಂ. ಜೆ ( ದ್ವಿತೀಯ ಬಿ. ಕಾಂ), ಹಾಗೆಯೇ ಪ್ರೀಕ್ಷಾ. ಎಂ, ( ದ್ವಿತೀಯ ಬಿ. ಎಸ್ಸಿ ) ಭಾಷಣ ( ಘೋಷಣೆ) ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ದೇಶಿತಾ ಕಥಾ ರಚನೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದಿನಾಂಕ 02 & 03 ಡಿಸೆಂಬರ್ 2025 ರಂದು ಉತ್ತರ ಕರ್ನಾಟಕದ ಯಾದಗಿರಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಇವರು ಭಾಗವಹಿಸಲಿದ್ದಾರೆ. ಇವರಿಗೆ ಕಾಲೇಜಿನ ಕನ್ನಡ ವಿಭಾಗದ ಡಾ. ಅನುರಾಧಾ ಕುರುಂಜಿ ಹಾಗೂ ಕ್ಯಾಂಪಸ್ ನ ಸಾಂಸ್ಕೃತಿಕ ಸಂಚಾಲಕ ಕಾರ್ತಿಕ್ ಕುಡೆಕಲ್ಲು ಮಾರ್ಗದರ್ಶನ ನೀಡಿದ್ದು ತಂಡದ ನೇತೃತ್ವ ವಹಿಸಿದ್ದರು.


















