ಜುಲೈ 26ರಂದು ರಾಷ್ಟ್ರಭಕ್ತ ನಾಗರಿಕ ವೇದಿಕೆಯಿಂದ ಕಾರ್ಗಿಲ್ ವಿಜಯೋತ್ಸವ

ಸುರತ್ಕಲ್: “ರಾಷ್ಟ್ರಭಕ್ತ ನಾಗರಿಕ ವೇದಿಕೆಯಿಂದ 10ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಹಾಗೂ ಅರ್ಹ ಸೈನಿಕ ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ವಿತರಣೆ ಕಾರ್ಯಕ್ರಮ, ಇಡ್ಯಾ ದೇವಸ್ಥಾನದಿಂದ ಹಣತೆಯ ಮೆರವಣಿಗೆ, ಸೈನಿಕರ ಗೌರವ ಇತ್ಯಾದಿ ಕಾರ್ಯಕ್ರಮ ಜುಲೈ 26ರ ಸಂಜೆ ನಡೆಯಲಿದೆ” ಎಂದು ಸಂಘಟನೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾಹಿತಿ ನೀಡಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕ ಸೇವಾ ವೃಂದ ವೇದಿಕೆ, ಸುರತ್ಕಲ್ ಇಲ್ಲಿ ಕಾರ್ಯಕ್ರಮ ನಡೆಯಲಿದ್ದು ಅಧ್ಯಕ್ಷತೆಯನ್ನು ಭಾರತೀಯ ವಾಯು ಸೇನೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಸುಧೀರ್ ಅಮೀನ್ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಸುಜಿತ್ ಆಳ್ವ ಏತಮೊಗರುಗುತ್ತು ಅವರು ವಹಿಸಲಿದ್ದಾರೆ.

ಆ ದಿನ ಸಂಜೆ ಗಂಟೆ 6-30ಕ್ಕೆ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಿಂದ ಹಣತೆ ಮೆರವಣಿಗೆ ನಡೆಯಲಿದ್ದು ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಐ. ರಮಾನಂದ ಭಟ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಹತ್ತನೇ ವರ್ಷಾಚರಣೆಯ ಅಂಗವಾಗಿ ಅಮರ್ ಜವಾನ್ ಜ್ಯೋತಿ ಮೆರವಣಿಗೆ ದ್ವಿಚಕ್ರ ವಾಹನ ಜಾಥಾ ಜು.23ರ ಭಾನುವಾರ ಬೆಳಗ್ಗೆ 10 ಗಂಟೆಗೆ ಹೊರಟು 11:30ಕ್ಕೆ ಕದ್ರಿಯ ಯುದ್ಧ ಸ್ಮಾರಕದಲ್ಲಿ ಸಮಾಪನಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ದೇವಾಡಿಗ, ಟ್ರಸ್ಟಿಗಳಾದ ಮಹಾಬಲ ಪೂಜಾರಿ ಕಡಂಬೋಡಿ, ಭಾಸ್ಕರ್ ರೈ, ಮಹೇಶ್ ಮೂರ್ತಿ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.