ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುರತ್ಕಲ್ ಪ್ಯಾರಡೈಸ್ ಮೈದಾನದಿಂದ ಕಾಟಿಪಳ್ಳವರೆಗೆ ಬೃಹತ್ ಪೊಲೀಸ್ ಪಥಸಂಚಲನ ನಡೆಯಿತು. ಪಥಸಂಚಲನದಲ್ಲಿ ಮಂಗಳೂರು ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಭಾಗವಹಿಸಿದ್ದರು. ಪೊಲೀಸ್ ಪಥಸಂಚಲನದಲ್ಲಿ ಪೊಲೀಸ್, ಸಿಆರ್ ಪಿಎಫ್ ಸಹಿತ ವಿವಿಧ ಘಟಕಗಳ ಸಿಬ್ಬಂದಿ ಸುಮಾರು 500ಕ್ಕೂ ಹೆಚ್ಚಿನ ಸಿಬ್ಬಂದಿ ಭಾಗವಹಿಸಿದ್ದರು.
ಲೋಕಸಭೆ ಚುನಾವಣೆ ಇನ್ನೇನು ಹತ್ತಿರ ಬರಲಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಎಂ.ಪಿ.ಮುಲ್ಲೈ ಮುಹಿಲನ್ ಇವಿಎಂ ಭದ್ರತಾ ಕೇಂದ್ರದ ಪೂರ್ವಸಿದ್ಧತೆಗಳನ್ನು ಪರಿಶೀಲನೆ ಮಾಡಿದರು. ಸುರತ್ಕಲ್ ಎನ್.ಐ.ಟಿ.ಕೆ. ಇಂಜಿನಿಯರಿಂಗ್ ಕಾಲೇಜಿಗೆ ತೆರಳಿ ದಕ್ಷಿಣ ಕನ್ನಡ ಜಿಲ್ಲೆಯ ಇವಿಎಂ ಭದ್ರತಾ ಕೇಂದ್ರದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಮತ್ತಿತರರು
ಪೊಲೀಸ್ ಠಾಣೆಯಲ್ಲಿ ಕೆಲವು ಗಂಟೆಗಳ ಕಾಲ ಕಳೆಯುವ ಮಕ್ಕಳಿಗೆ ಲವಲವಿಕೆಯಿಂದ ಕೂಡಿದ ವಾತಾವರಣವನ್ನು ಕಲ್ಪಿಸುವುದು ಪೊಲೀಸ್ ಅಂದಾಗ ಮಕ್ಕಳ ಮನಸಿನಲ್ಲಿ ಮೂಡುವ ಭಾವನೆಗಳು ಬೇರೆ ಬೇರೆಯ ಪ್ರಶ್ನೆಗಳು ಮೂಡಿಬರುವುದು ಬಹಳಷ್ಟಿದೆ. ಇಲ್ಲಿ ಪೊಲೀಸ್ರು ಅಂದಾಗ ಭಯ ಪಡುವ ದೃಷ್ಟಿಕೋನ ದೂರ ಅಗಬೇಕಿದೆ. ಈ ನಿಟ್ಟಿನಲ್ಲಿ ಮಕ್ಕಳ ಜತೆ ಒಂದೊತ್ತು ಕಾಲ ಕಳೆದು ಮಕ್ಕಳ ಜತೆ ಮಕ್ಕಳಾಗಿ ಹೋದ್ರು