ಸುರತ್ಕಲ್: ಲೋಕಸಭಾ ಚುನಾವಣೆ ಹಿನ್ನೆಲೆ ಪಥಸಂಚಲನ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುರತ್ಕಲ್ ಪ್ಯಾರಡೈಸ್ ಮೈದಾನದಿಂದ ಕಾಟಿಪಳ್ಳವರೆಗೆ ಬೃಹತ್ ಪೊಲೀಸ್ ಪಥಸಂಚಲನ ನಡೆಯಿತು.



ಪಥಸಂಚಲನದಲ್ಲಿ ಮಂಗಳೂರು ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಭಾಗವಹಿಸಿದ್ದರು. ಪೊಲೀಸ್ ಪಥಸಂಚಲನದಲ್ಲಿ ಪೊಲೀಸ್, ಸಿಆರ್ ಪಿಎಫ್ ಸಹಿತ ವಿವಿಧ ಘಟಕಗಳ ಸಿಬ್ಬಂದಿ ಸುಮಾರು 500ಕ್ಕೂ ಹೆಚ್ಚಿನ ಸಿಬ್ಬಂದಿ ಭಾಗವಹಿಸಿದ್ದರು.
