Home Posts tagged #bantwala (Page 9)

ಬಂಟ್ವಾಳ: ನೂತನವಾಗಿ ನಿರ್ಮಾಣಗೊಂಡ ರಿಕ್ಷಾ ಪಾರ್ಕ್ ಉದ್ಘಾಟನೆ

ಬಂಟ್ವಾಳದ ಬೈಪಾಸ್‍ನಲ್ಲಿ ನೂತನವಾಗಿ ನಿರ್ಮಾಣಗೊಂಡ ರಿಕ್ಷಾ ಪಾರ್ಕ್‍ನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.ವಿಧಾನ ಪರಿಷತ್ ಸದಸ್ಯ ಯು. ಬಿ. ವೆಂಕಟೇಶ್ ಅವರ ಪ್ರದೇಶಾಭಿವೃದ್ಧಿ ನಿಧಿಯಡಿ ರಿಕ್ಷಾ ಪಾರ್ಕ್‍ನ್ನು ನಿರ್ಮಾಣ ಮಾಡಲಾಗಿತ್ತು. ಈ ಸಂದರ್ಭ ಮಾತನಾಡಿದ ರಮಾನಾಥ ರೈ ಅವರು, ನನ್ನ ಹುಟ್ಟು ಹಬ್ಬದ ದಿನದಂದೇ ರಿಕ್ಷಾ

ಬಂಟ್ವಾಳ: ಸೆಪ್ಟಂಬರ್ 16ರಂದು ಬಿ.ಸಿ.ರೋಡಿನಲ್ಲಿ ಹಿರಿಯ ರಂಗಕರ್ಮಿ ಮಂಜು ವಿಟ್ಲ ನುಡಿನಮನ

ತುಳುಕೂಟ ಬಂಟ್ವಾಳವು ಮಂಜು ವಿಟ್ಲ ಅವರ ಬಂಧು ಬಳಗ, ಅಭಿಮಾನಿ ಬಳಗ ಹಾಗೂ ಸಮಾನ ಮನಸ್ಕರ ಪಾಲ್ಗೊಳ್ಳುವಿಕೆಯೊಂದಿಗೆ ಸೆಪ್ಟಂಬರ್ 16ರಂದು ಸಂಜೆ 4.30ಕ್ಕೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಹಿರಿಯ ರಂಗಕರ್ಮಿ, ತರಬೇತುದಾರ ಮಂಜು ವಿಟ್ಲ ಅವರಿಗೆ ನುಡಿನಮನ-ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಿದೆ. ಮಂಜು ವಿಟ್ಲ ಅವರು ಹಿರಿಯ ರಂಗಕರ್ಮಿಯಾಗಿ, ಬಹುಮುಖಿ ಕ್ಷೇತ್ರಗಳ ಸಾಧಕರಾಗಿ, ಹಿರಿಯ ತರಬೇತುದಾರರಾಗಿ, ವಿವಿಧ ಸಂಘಟನೆಗಳ ಮಾರ್ಗದರ್ಶಕರಾಗಿ, ಎಲ್ಲದಕ್ಕಿಂತಲೂ

ಉಳ್ಳಾಲ ನಿವಾಸಿ ಬಂಟ್ವಾಳ ಪತ್ನಿ ಮನೆಯಲ್ಲಿ ನೇಣುಬಿಗಿದು ಸಾವು

ಬಂಟ್ವಾಳದ ತನ್ನ ಪತ್ನಿ ಮನೆಯಲ್ಲಿ ಉಳ್ಳಾಲ ತಾಲೂಕು ಕೊಂಡಾಣ ಮಿತ್ರನಗರ ನಿವಾಸಿ ರವೀಂದ್ರ (35) ಆತ್ಮಹತ್ಯೆಗೈದ ಘಟನೆ ನಡೆದಿದೆ. ರವೀಂದ್ರ ಅವರು ನಿನ್ನೆ‌ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದ ಪತ್ನಿಯ ಮನೆಗೆ ತೆರಳಿದ್ದು ಮದ್ಯಾಹ್ನ 12 ಗಂಟೆಗೆ ತನ್ನ ಪತ್ನಿ ಮತ್ತು ಗಂಡು ಮಗುವನ್ನು ಸಂಬಂಧಿಕರ ಶುಭ ಕಾರ್ಯಕ್ಕೆ ಬಿಟ್ಟು ಮತ್ತೆ ಪತ್ನಿಯ ಮನೆ ವಾಪಸ್ಸಾಗಿದ್ದರು. ಸಂಜೆ ಪತ್ನಿ ಮೊಬೈಲ್ ಕರೆ ಮಾಡಿದಾಗ ರವೀಂದ್ರ ಅವರು ಕರೆ ಸ್ವೀಕರಿಸಿಲ್ಲ. ಗಾಬರಿಗೊಂಡ

ಜನಾರ್ದನ ಪೂಜಾರಿ ಅವರನ್ನು ಭೇಟಿಯಾದ ಸಚಿವ ಬೋಸರಾಜು

ಸಣ್ಣ ನೀರಾವರಿ ಸಚಿವ ಭೋಸರಾಜು ಅವರು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಮನೆಗೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿದರು. ಬಳಿಕ ಮಾತನಾಡಿದ ಅವರು, ಹಿರಿಯ ಮುಖಂಡ ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸುವುದಾಗಿ ಎನ್.ಎಸ್. ಬೋಸರಾಜು ತಿಳಿಸಿದರು.

ಬಂಟ್ವಾಳ: ಹೈಕೋರ್ಟ್ ನ್ಯಾಯಾಧೀಶರಾದ ಬಿ. ಎಂ. ಶ್ಯಾಮ್ ಪ್ರಸಾದ್ ಬಂಟ್ವಾಳ ನ್ಯಾಯಾಲಯಕ್ಕೆ ಭೇಟಿ

ಬಂಟ್ವಾಳದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ ಮತ್ತು ವಕೀಲರ ಭವನದ ಸ್ಥಳ ಪರಿಶೀಲನೆಗಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಎಂ. ಶ್ಯಾಮ್ ಪ್ರಸಾದ್ ಅವರು ಬಂಟ್ವಾಳ ನ್ಯಾಯಾಲಯಕ್ಕೆ ಭೇಟಿ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಅತೀ ಶೀಘ್ರದಲ್ಲಿ ವಕೀಲರ ಭವನದ ಜೊತೆಗೆ ಹೊಸ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿ ಪ್ರಾರಂಭ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು. ವಕೀಲರ ಸಂಘ ಬಂಟ್ವಾಳದ ವತಿಯಿಂದ ಗೌರವಾನ್ವಿತ ನ್ಯಾಯಾಧೀಶರುಗಳನ್ನು

ಬಿ.ಸಿ.ರೋಡಿನ ತಲಪಾಡಿಯಲ್ಲಿ ರಸ್ತೆಗೆ ಉರುಳಿ ಬಿದ್ದ ಗೂಡ್ಸ್ ಟೆಂಪೋ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಟೆಂಪೋವೊಂದು ರಸ್ತೆಗೆ ಉರುಳಿ ಬಿದ್ದ ಘಟನೆ ಬಿ.ಸಿ.ರೋಡಿನ ತಲಪಾಡಿ ಬಳಿ ನಡೆದಿದೆ. ಬೆಳಗ್ಗೆ ಸುರಿದ ಭಾರಿ ಮಳೆಯಿಂದಾಗಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಚಾಲಕನಿಗೆ ತರಚಿದ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದಾಗಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಹೊತ್ತು ಟ್ರಾಫಿಕ್ ಜಾಂ ಸಮಸ್ಯೆ ಉಂಟಾಗಿತ್ತು.

ಅವಧಿ ಪೂರ್ವದಲ್ಲೇ ತುಂಬೆ ವೆಂಟೆಡ್ ಡ್ಯಾಂನಲ್ಲಿ ಗೇಟ್‍ಗಳನ್ನು ಮುಚ್ಚಿ ನೀರು ಸಂಗ್ರಹಣೆ

ಇನ್ನೂ ಮಳೆಗಾಲ ಮುಗಿದಿಲ್ಲ. ಅದಾಗಲೇ ತುಂಬೆ ವೆಂಟೆಡ್ ಡ್ಯಾಂನಲ್ಲಿ ಗೇಟ್‍ಗಳನ್ನು ಮುಚ್ಚಿ ನೀರು ಸಂಗ್ರಹಣೆ ಆರಂಭಿಸಲಾಗಿದೆ. ಪ್ರತೀ ವರ್ಷ ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ಡ್ಯಾಂಲ್ಲಿ ನೀರು ಸಂಗ್ರಹಣ ಆರಂಭವಾಗುತ್ತಿದ್ದರೆ ಈ ಬಾರಿ ಅವಧಿಗಿಂತ ಮೊದಲೇ ನೀರು ಸಂಗ್ರಹಣೆ ಆರಂಭಗೊಂಡಿದೆ. ಈ ಬಾರಿ ಮಳೆಯಿಲ್ಲದೆ ಮಳೆಗಾಲದಲ್ಲಿಯೇ ನದಿ ಬರಡಾಗಿ ಮುಂದಿನ ದಿನಗಳಲ್ಲಿ ಕಾಡಬಹುದಾದ ಬರದ ಛಾಯೆ ಈಗಲೇ ಗೋಚರಿಸಿದೆ. ಜಿಲ್ಲೆಯ ಜೀವನದಿ ನೇತ್ರಾವತಿ ನದಿಯಲ್ಲೂ

ಬಿಸಿ ರೋಡ್: ಆಟೋ ರಿಕ್ಷಾಕ್ಕೆ ಕಾರು ಢಿಕ್ಕಿ: ರಿಕ್ಷಾ ಚಾಲಕನಿಗೆ ಗಂಭೀರ ಗಾಯ

ಕಾರೊಂದು ಆಟೋ ರಿಕ್ಷಾಕ್ಕೆ ಢಿಕ್ಕಿಯಾದ ಘಟನೆ ಬಿ.ಸಿ ರೋಡ್‍ನ ರೈಲು ನಿಲ್ದಾಣದ ಬಳಿ ನಡೆದಿದೆ. ಅಪಘಾತದ ಪರಿಣಾಮ ರಿಕ್ಷಾ ನಜ್ಜುಗುಜ್ಜಾಗಿದ್ದು, ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದಾರೆ. ಅವನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಂಟ್ವಾಳ: ಕುಲಾಲ ಸುಧಾರಕ ಸಂಘದಿಂದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ

ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿ 22ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ಬಂಟ್ವಾಳ : ತಾಲೂಕು ಕುಲಾಲ ಸುಧಾರಕ ಸಂಘ ಬಂಟ್ವಾಳ ಇದರ ಆಶ್ರಯದಲ್ಲಿ ಸಂಘದ ಮಹಿಳಾ ಘಟಕ ಹಾಗೂ ಸೇವಾದಳದ ಸಹಕಾರದೊಂದಿಗೆ 22ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ನಡೆಯಿತು. ಈ ಸಂದರ್ಭ ಶ್ರೀ ರಕ್ತೇಶ್ವರೀ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಿಶ್ವನಾಥ

ಮಂಗಳೂರು: ರಾಯಿ ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಭಿನ್ನಮತ ಸ್ಪೋಟ – ಬಿಜೆಪಿ ಬೆಂಬಲಿತ ಗ್ರಾ.ಪಂ.ಸದಸ್ಯೆ ಪುಷ್ಪಾವತಿ ಪೂಜಾರಿ ರಾಜೀನಾಮೆ

ಮಂಗಳೂರು: ರಾಯಿ ಗ್ರಾಮ ಪಂಚಾಯತ್‍ನಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದು ಒಂದು ವಾರದಲ್ಲೇ ಬಿಜೆಪಿ ಭಿನ್ನಮತ ಸ್ಪೋಟಗೊಂಡಿದೆ. ಈ ಗ್ರಾ.ಪಂ.ವ್ಯಾಪ್ತಿಯ ಕೊಯಿಲ ಒಂದನೇ ವಾರ್ಡ್ ಬಿಜೆಪಿ ಬೆಂಬಲಿತ ಸದಸ್ಯೆ ಪುಷ್ಪಾವತಿ ಪೂಜಾರಿ ಗುರುವಾರ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಾನು ಕೊಯಿಲ ಒಂದನೇ ವಾರ್ಡಿನ ಬೂತ್ ಸಂಖ್ಯೆ 27ರಲ್ಲಿ ಬಿಜೆಪಿ ಬೆಂಬಲಿತ ಚುನಾಯಿತ ಸದಸ್ಯೆಯಾಗಿದ್ದು, ನನ್ನ ವಾರ್ಡಿನಲ್ಲಿ ಗ್ರಾ.ಪಂ.ಅಧ್ಯಕ್ಷರು ಮತ್ತು