Home Posts tagged #bantwala (Page 8)

ಹಿಂದಿ ಶಿಕ್ಷಕ ರತ್ನ ರಾಜ್ಯ ಪ್ರಶಸ್ತಿಗೆ ದಡ್ಡಲಕಾಡು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಮಾನಂದ ಆಯ್ಕೆ

ಬಂಟ್ವಾಳ: ಹಿಂದಿ ಶಿಕ್ಷಕರಿಗೆ ಕೊಡುವ ರಾಜ್ಯ ಹಿಂದಿ ಶಿಕ್ಷಕ ರತ್ನ ಪ್ರಶಸ್ತಿಗೆ ಸರಕಾರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ದಡ್ಡಲ ಕಾಡು ಹಿಂದಿ ಭಾಷಾ ಶಿಕ್ಷಕ ರಮಾನಂದ ಇವರು ಆಯ್ಕೆಯಾಗಿರುತ್ತಾರೆ. ಹಿಂದಿ ವಿಷಯದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ತಾಲೂಕು ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳಾಗಿ, ಹಿಂದಿ ಸಂಪನ್ಮೂಲ ಕ್ರೋಡಿಕರಣ ಹಾಗೂ ಪುಸ್ತಕ ರಚನಾ ಕಾರ್ಯದಲ್ಲಿ

ಬಂಟ್ವಾಳ: ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘಕ್ಕೆ 1.5ಕೋಟಿ ರೂ ನಿವ್ವಳ ಲಾಭ

ಬಂಟ್ವಾಳ: 75 ವರ್ಷಗಳ ಹಿಂದೆ ಬಿ.ಕೃಷ್ಣ ರೈ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸಿದ್ಧಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದ್ದು ಎಂಟು ಗ್ರಾಮಗಳಲ್ಲಿ ತೃಪ್ತಿಕರ ಸೇವೆ ನೀಡುತ್ತಿದೆ. 2022-23ನೇ ಸಾಲಿನ ವರ್ಷಾಂತ್ಯಕ್ಕೆ 46.04 ಕೋಟಿ ರೂ ಠೇವಣಿ ಇದ್ದು, ಸಾಲ ಹೊರಬಾಕಿ 81.74 ಕೋಟಿ ರೂ, ದುಡಿಯುವ ಬಂಡವಾಳ 173.35 ಕೋಟಿ ರೂ, ಹೂಡಿಕೆ 14.12 ಕೋಟಿ ರೂ, ಸಂಘದ ಒಟ್ಟು ವ್ಯವಹಾರ 376.85 ಕೋಟಿ ರೂ ಆಗಿದ್ದು, 1.5 ಕೋಟಿ ರೂ ನಿವ್ವಳ ಲಾಭ

ಬಂಟ್ವಾಳ: ಆಸ್ಪತ್ರೆಯಲ್ಲಿ ಮೊಬೈಲ್ ಕಳ್ಳತನ-ಆರೋಪಿಯ ಸುಳಿವು ಸಿಕ್ಕಲ್ಲಿ ಪೋಲಿಸರಿಗೆ ಮಾಹಿತಿ ನೀಡಲು ಮನವಿ

ಬಂಟ್ವಾಳ: ಅನಾರೋಗ್ಯದ ನಿಮಿತ್ತ ಚಿಕಿತ್ಸೆಗೆಂದು ಬಂಟ್ವಾಳ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪೋಲಿಸ್ ಸಿಬ್ಬಂದಿಯೋರ್ವರ ಎರಡು ಮೊಬೈಲ್ ಫೋನ್ ಕಳವಾಗಿದ್ದು ಕಳ್ಳನ ಚಲನವಲನ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಆಸ್ಪತ್ರೆಯಲ್ಲಿ ಈತನ ಪೋಟೋ ಅಂಟಿಸಲಾಗಿದ್ದು, ಈತನ ಚಹರೆಯನ್ನು ಗಮನಿಸಿದವರು ಪೋಲಿಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಮೆಲ್ಕಾರ್ ಟ್ರಾಫಿಕ್ ಪೋಲಿಸ್ ಠಾಣೆಯ ಎಚ್.ಸಿ.ದೇವರಾಜ್ ಅವರು ಅನಾರೋಗ್ಯದ ಕಾರಣ ಬಂಟ್ವಾಳ

ಬಂಟ್ವಾಳ: ಇರ್ವತ್ತೂರು ಪದವಿನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ

ಬಂಟ್ವಾಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇರ್ವತ್ತೂರುಪದವು ಆಶ್ರಯದಲ್ಲಿ 17ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಇರ್ವತ್ತೂರು ಗಣೇಶನ ಕಟ್ಟೆಯ ಬಳಿ ನಡೆಯಿತು. ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ರಾಮಕೃಷ್ಣ ಎಸ್. ಧ್ವಜಾರೋಹಣ ನೆರವೇರಿಸಿದರು. ಆಟೋಟ ಸ್ಪರ್ಧೆ ಹಾಗೂ ಸಭಾ ಕಾರ್ಯಕ್ರಮಕ್ಕೆ ಇರ್ವತ್ತೂರು ಗ್ರಾ.ಪಂ. ಅಧ್ಯಕ್ಷರಾದ ಮಾಲತಿ ಚಾಲನೆ ನೀಡಿದರು. ಇರ್ವತ್ತೂರು ಗ್ರಾ.ಪಂ. ಉಪಾಧ್ಯಕ್ಷರಾದ

ಬಂಟ್ವಾಳ: ನೂತನವಾಗಿ ನಿರ್ಮಾಣಗೊಂಡ ರಿಕ್ಷಾ ಪಾರ್ಕ್ ಉದ್ಘಾಟನೆ

ಬಂಟ್ವಾಳದ ಬೈಪಾಸ್‍ನಲ್ಲಿ ನೂತನವಾಗಿ ನಿರ್ಮಾಣಗೊಂಡ ರಿಕ್ಷಾ ಪಾರ್ಕ್‍ನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.ವಿಧಾನ ಪರಿಷತ್ ಸದಸ್ಯ ಯು. ಬಿ. ವೆಂಕಟೇಶ್ ಅವರ ಪ್ರದೇಶಾಭಿವೃದ್ಧಿ ನಿಧಿಯಡಿ ರಿಕ್ಷಾ ಪಾರ್ಕ್‍ನ್ನು ನಿರ್ಮಾಣ ಮಾಡಲಾಗಿತ್ತು. ಈ ಸಂದರ್ಭ ಮಾತನಾಡಿದ ರಮಾನಾಥ ರೈ ಅವರು, ನನ್ನ ಹುಟ್ಟು ಹಬ್ಬದ ದಿನದಂದೇ ರಿಕ್ಷಾ ತಂಗುದಾಣ ನಿರ್ಮಾಣವಾಗಿರುವುದು ಕಾಕತಾಳಿಯ. ಈ ತಂಗುದಾಣದಿಂದ ರಿಕ್ಷಾ ಚಾಲಕರಿಗೆ ಅನುಕೂಲವಾಗಲಿ ಎಂದು

ಬಂಟ್ವಾಳ: ಸೆಪ್ಟಂಬರ್ 16ರಂದು ಬಿ.ಸಿ.ರೋಡಿನಲ್ಲಿ ಹಿರಿಯ ರಂಗಕರ್ಮಿ ಮಂಜು ವಿಟ್ಲ ನುಡಿನಮನ

ತುಳುಕೂಟ ಬಂಟ್ವಾಳವು ಮಂಜು ವಿಟ್ಲ ಅವರ ಬಂಧು ಬಳಗ, ಅಭಿಮಾನಿ ಬಳಗ ಹಾಗೂ ಸಮಾನ ಮನಸ್ಕರ ಪಾಲ್ಗೊಳ್ಳುವಿಕೆಯೊಂದಿಗೆ ಸೆಪ್ಟಂಬರ್ 16ರಂದು ಸಂಜೆ 4.30ಕ್ಕೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಹಿರಿಯ ರಂಗಕರ್ಮಿ, ತರಬೇತುದಾರ ಮಂಜು ವಿಟ್ಲ ಅವರಿಗೆ ನುಡಿನಮನ-ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಿದೆ. ಮಂಜು ವಿಟ್ಲ ಅವರು ಹಿರಿಯ ರಂಗಕರ್ಮಿಯಾಗಿ, ಬಹುಮುಖಿ ಕ್ಷೇತ್ರಗಳ ಸಾಧಕರಾಗಿ, ಹಿರಿಯ ತರಬೇತುದಾರರಾಗಿ, ವಿವಿಧ ಸಂಘಟನೆಗಳ ಮಾರ್ಗದರ್ಶಕರಾಗಿ, ಎಲ್ಲದಕ್ಕಿಂತಲೂ

ಉಳ್ಳಾಲ ನಿವಾಸಿ ಬಂಟ್ವಾಳ ಪತ್ನಿ ಮನೆಯಲ್ಲಿ ನೇಣುಬಿಗಿದು ಸಾವು

ಬಂಟ್ವಾಳದ ತನ್ನ ಪತ್ನಿ ಮನೆಯಲ್ಲಿ ಉಳ್ಳಾಲ ತಾಲೂಕು ಕೊಂಡಾಣ ಮಿತ್ರನಗರ ನಿವಾಸಿ ರವೀಂದ್ರ (35) ಆತ್ಮಹತ್ಯೆಗೈದ ಘಟನೆ ನಡೆದಿದೆ. ರವೀಂದ್ರ ಅವರು ನಿನ್ನೆ‌ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದ ಪತ್ನಿಯ ಮನೆಗೆ ತೆರಳಿದ್ದು ಮದ್ಯಾಹ್ನ 12 ಗಂಟೆಗೆ ತನ್ನ ಪತ್ನಿ ಮತ್ತು ಗಂಡು ಮಗುವನ್ನು ಸಂಬಂಧಿಕರ ಶುಭ ಕಾರ್ಯಕ್ಕೆ ಬಿಟ್ಟು ಮತ್ತೆ ಪತ್ನಿಯ ಮನೆ ವಾಪಸ್ಸಾಗಿದ್ದರು. ಸಂಜೆ ಪತ್ನಿ ಮೊಬೈಲ್ ಕರೆ ಮಾಡಿದಾಗ ರವೀಂದ್ರ ಅವರು ಕರೆ ಸ್ವೀಕರಿಸಿಲ್ಲ. ಗಾಬರಿಗೊಂಡ

ಜನಾರ್ದನ ಪೂಜಾರಿ ಅವರನ್ನು ಭೇಟಿಯಾದ ಸಚಿವ ಬೋಸರಾಜು

ಸಣ್ಣ ನೀರಾವರಿ ಸಚಿವ ಭೋಸರಾಜು ಅವರು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಮನೆಗೆ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿದರು. ಬಳಿಕ ಮಾತನಾಡಿದ ಅವರು, ಹಿರಿಯ ಮುಖಂಡ ಜನಾರ್ದನ ಪೂಜಾರಿಯವರ ಮಾರ್ಗದರ್ಶನದಲ್ಲಿ ಕೆಲಸ ನಿರ್ವಹಿಸುವುದಾಗಿ ಎನ್.ಎಸ್. ಬೋಸರಾಜು ತಿಳಿಸಿದರು.

ಬಂಟ್ವಾಳ: ಹೈಕೋರ್ಟ್ ನ್ಯಾಯಾಧೀಶರಾದ ಬಿ. ಎಂ. ಶ್ಯಾಮ್ ಪ್ರಸಾದ್ ಬಂಟ್ವಾಳ ನ್ಯಾಯಾಲಯಕ್ಕೆ ಭೇಟಿ

ಬಂಟ್ವಾಳದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣ ಮತ್ತು ವಕೀಲರ ಭವನದ ಸ್ಥಳ ಪರಿಶೀಲನೆಗಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಎಂ. ಶ್ಯಾಮ್ ಪ್ರಸಾದ್ ಅವರು ಬಂಟ್ವಾಳ ನ್ಯಾಯಾಲಯಕ್ಕೆ ಭೇಟಿ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ಅತೀ ಶೀಘ್ರದಲ್ಲಿ ವಕೀಲರ ಭವನದ ಜೊತೆಗೆ ಹೊಸ ನ್ಯಾಯಾಲಯ ಸಂಕೀರ್ಣ ಕಟ್ಟಡ ಕಾಮಗಾರಿ ಪ್ರಾರಂಭ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು. ವಕೀಲರ ಸಂಘ ಬಂಟ್ವಾಳದ ವತಿಯಿಂದ ಗೌರವಾನ್ವಿತ ನ್ಯಾಯಾಧೀಶರುಗಳನ್ನು

ಬಿ.ಸಿ.ರೋಡಿನ ತಲಪಾಡಿಯಲ್ಲಿ ರಸ್ತೆಗೆ ಉರುಳಿ ಬಿದ್ದ ಗೂಡ್ಸ್ ಟೆಂಪೋ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ಟೆಂಪೋವೊಂದು ರಸ್ತೆಗೆ ಉರುಳಿ ಬಿದ್ದ ಘಟನೆ ಬಿ.ಸಿ.ರೋಡಿನ ತಲಪಾಡಿ ಬಳಿ ನಡೆದಿದೆ. ಬೆಳಗ್ಗೆ ಸುರಿದ ಭಾರಿ ಮಳೆಯಿಂದಾಗಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ. ಚಾಲಕನಿಗೆ ತರಚಿದ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದಾಗಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಹೊತ್ತು ಟ್ರಾಫಿಕ್ ಜಾಂ ಸಮಸ್ಯೆ ಉಂಟಾಗಿತ್ತು.