ಪ್ರವೀಣ್ ನೆಟ್ಟಾರು ಹತ್ಯೆಯಾಗಿ ಒಂದು ವರ್ಷದ ಹಿನ್ನಲೆ ಸ್ಮೃತಿ ದಿನ ಹಾಗೂ ರಕ್ತದಾನ ಶಿಬಿರ
ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಹಾಗೂ ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ವತಿಯಿಂದ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದಿವಂಗತ ಪ್ರವೀಣ್ ನೆಟ್ಟಾರ್ ಅವರ ಸ್ಮೃತಿ ದಿನ ಹಾಗೂ ರಕ್ತದಾನ ಶಿಬಿರ ನಡೆಯಿತು.
ರಕ್ತದಾನ ಶಿಬಿರವನ್ನು ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ರಾಧಾಕೃಷ್ಣ ರೈ, ಬೂಡಿಯಾರು, ಸುಳ್ಯ ಮಂಡಲದ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಗುರುದತ್ ನಾಯಕ್, ಕೃಷ್ಣ, ರಾಕೇಶ್ ರೈ ಕೆಡೆಂಜಿ ದಿವಂಗತ ಪ್ರವೀಣ್ ನೆಟ್ಟರ್ ತಂದೆ ತಾಯಿಯವರಾದ ಶೇಖರ ಪೂಜಾರಿ ಮತ್ತು ರತ್ನಾವತಿ, ದಿವಂಗತ ಪ್ರವೀಣ್ ಧರ್ಮಪತ್ನಿ ನೂತನ ಹಾಗೂ ಬಿಜೆಪಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.