Home Posts tagged dhyana sangeetha academy

ಮಂಗಳೂರು : “ದಾಸ ನಮನ”- ಸಂಗೀತ ಕಾರ್ಯಾಗಾರ

ಮಂಗಳೂರು: ಧ್ಯಾನಸಂಗೀತ ಅಕಾಡೆಮಿ ಕಲಾ ಟ್ರಸ್ಟಿನ ವತಿಯಿಂದ ಸಂಗೀತ ವಿದ್ಯಾರ್ಥಿಗಳಿಗಾಗಿ ಮತ್ತು ಸಂಗೀತಾಸಕ್ತರಿಗಾಗಿ  “ದಾಸ ನಮನ” ಸಂಗೀತ ಕಾರ್ಯಾಗಾರವು  ಮಂಗಳೂರು ವಿಟಿ ರಸ್ತೆಯ ಶ್ರೀ ಕೃಷ್ಣ ಮಂದಿರ ಸಭಾಂಗಣದಲ್ಲಿ  ನಡೆಯಿತು.  ಕಲಾವಿದರಾದ ಹುಬ್ಬಳ್ಳಿಯ ಪಂಡಿತ್ ಮಲ್ಲಿಕಾರ್ಜುನ ಸಂಶಿ  ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ಮಾಡಿದರು.

ಮಂಗಳೂರು: ಇಂದು ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್‌ನಿಂದ ಸ್ವರ ಶ್ರದ್ಧಾಂಜಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ

ನಗರದ ಉರ್ವಸ್ಟೋರ್ ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್ ವತಿಯಿಂದ ಕನ್ನಡ ಮತ್ತು ಸಂಸ್ಕೃತ ಇಲಾಖೆ ಕರ್ನಾಟಕ ಸರಕಾರ ಸಹಯೋಗದೊಂದಿಗೆ ಸ್ವರ ಶ್ರದ್ಧಾಂಜಲಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವು ಫೆ.೧೦ರಂದು ಸಂಜೆ ೫ ಗಂಟೆಗೆ ನಗರದ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ.ಇತ್ತೀಚೆಗೆ ನಿಧನಹೊಂದಿದ ಹಿಂದೂಸ್ತಾನಿ ಸಂಗೀತ ದಿಗ್ಗಜರಾದ ಪ್ರಭಾ ಅತ್ರೆ,ಪಮಡಿತ್ ರಶೀದ್ ಖಾನ್ ಪಂಡಿತ್ ಕೇದಾರ್ ಬೋಡಸ್ ಅವರ ಸ್ಮರಣಾರ್ಥವಾಗಿ

ಮಂಗಳೂರು : ಜ.20ರಂದು ರಾಮ ನಾಮಂ ಗೀತೆಯ ಧ್ವನಿ ಸುರುಳಿ, ಚಿತ್ರೀಕರಣದ ಬಿಡುಗಡೆ

ಮಂಗಳೂರು ಉರ್ವಸ್ಟೋರ್‌ನ ಧ್ಯಾನ ಸಂಗೀತ ಅಕಾಡೆಮಿ ಕಲಾ ಟ್ರಸ್ಟ್, ಅರ್ಪಿಸುವ ಅಯೋಧ್ಯೆ ಶ್ರೀ ರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ರಾಮ ನಾಮಂ ಗೀತೆಯ ಧ್ವನಿ ಸುರುಳಿ ಮತ್ತು ಚಿತ್ರೀಕರಣ ಬಿಡುಗಡೆ ಕಾರ್ಯಕ್ರಮವು ಜ.20ರಂದು ರಾತ್ರಿ 8.30ಕ್ಕೆ ಶ್ರೀ ರಾಮ ಭಜನಾ ಮಂದಿರ ಕೊಲ್ಯ ಮತ್ತು ವಿ4 ನ್ಯೂಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಳ್ಳಲಿದೆ. ಅಮಿತ್ ಕುಮಾರ್ ಬೆಂಗ್ರೆ ಅವರ ಮಾರ್ಗದರ್ಶನದಲ್ಲಿ ರಾಗ ಸಂಯೋಜನೆ ಮತ್ತು ಗಾಯನದಲ್ಲಿ ಪ್ರೀತಮ್ ಕುಮಾರ್ ಕೊಲ್ಯ,