Home Posts tagged #mangalore (Page 22)

ಮುಡಿಪು : ಕುರ್ನಾಡು ಗ್ರಾ.ಪಂ ಎದುರು ಪ್ರತಿಭಟನೆ

ಮುಡಿಪು : ಪೌರಕಾರ್ಮಿಕನಾಗಿ ಕಳೆದ 20 ವರ್ಷಗಳಿಂದ ದುಡಿಯುತ್ತಿದ್ದ ಬಾಬಣ್ಣ ಅವರನ್ನು ಏಕಾಏಕಿ ಕೆಲಸದಿಂದ ತೆಗೆದು, ಯಾವುದೇ ಸರಕಾರಿ ಸೌಲಭ್ಯವನ್ನು ನೀಡದ ಕುರ್ನಾಡು ಗ್ರಾಮದ ಅಭಿವೃದ್ಧಿ ಅಧಿಕಾರಿ ಹಾಗೂ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ ಮುಡಿಪು ಕುರ್ನಾಡುವಿನ ಗ್ರಾ.ಪಂ ಕಚೇರಿಯೆದುರು ಪ್ರತಿಭಟನೆ ನಡೆಯಿತು. ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ

ವಿಟ್ಲ: ಕರ್ಣಾಟಕ ಬ್ಯಾಂಕ್ ದರೋಡೆ ಪ್ರಕರಣ : ಮೂವರ ಬಂಧನ

ವಿಟ್ಲ: ಕರ್ಣಾಟಕ ಬ್ಯಾಂಕ್ ಕಿಟಕಿ ಮೂಲಕ ಒಳ ನುಸುಳಿ ಕೋಟ್ಯಾಂತರ ಮೌಲ್ಯದ ನಗದು ಹಾಗೂ ಚಿನ್ನಾಭರಣ ಕಳ್ಳತನ ಮಾಡಿದ ನಾಲ್ಕು ಮಂದಿ ಆರೋಪಿಗಳ ಪೈಕಿ ಮೂವರನ್ನು ಸೋಮವಾರ ಸ್ಥಳ ಮಹಜರಿಗೆ ಅಡ್ಯನಡ್ಕ ಪೊಲೀಸರು ಕರೆದುಕೊಂಡು ಬಂಧಿಸಿದ್ದಾರೆ. ಕಾಸರಗೋಡು ಮೂಲದ ಖಲಂದರ್, ರಫೀಕ್, ಬಾಯಾರು ಮೂಲದ ದಯಾನಂದ ಕಳ್ಳತನದ ಪ್ರಮುಖ ರುವಾರಿಗಳು ಎನ್ನಲಾಗಿದೆ. ಫೆ.೨೮ ರಂದು ಈ ಆರೋಪಿಗಳನ್ನು ಪೊಲಿಸರು ವಶಕ್ಕೆ ಪಡೆಯುವ ಕಾರ್ಯವನ್ನು ಮಾಡಿದ್ದು, ಮಾ.೧೦ರಂದು ಬಂಧನವನ್ನು

ಮೂಡುಬಿದಿರೆ: ಆಘಾತ ತರಂಗ ಮಾಪನ ವ್ಯವಸ್ಥೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ಪೇಟೆಂಟ್

ಮೂಡುಬಿದಿರೆ: ಸಂಶೋಧನಾ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಕಾರಿ ಹೆಜ್ಜೆ ಇರಿಸಿದ ಆಳ್ವಾಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು, ಸ್ಮಾರ್ಟ್ ಶಾಕ್‌ವೇವ್ ವೆಲಾಸಿಟಿ ಮೆಷರ್‌ಮೆಂಟ್ ಸಿಸ್ಟಮ್ (ಸ್ಮಾರ್ಟ್ ಆಘಾತ ತರಂಗಗಳ ವೇಗ ಮಾಪನ ವ್ಯವಸ್ಥೆ) ಪೇಟೆಂಟ್ ಪಡೆದುಕೊಂಡಿದೆ.ಈ ಆವಿಷ್ಕಾರವು ಕೇವಲ ಆಘಾತ ತರಂಗಗಳ ವೇಗ ಮಾಪನ ಮಾತ್ರವಲ್ಲ, ವಿವಿಧ ಅನುಷ್ಠಾನಗಳು ಹಾಗೂ ಅಗ್ನಿ ಸಂಬಂಧಿತ ಹಾಗೂ ಬೆಳಕಿನ ತಂತ್ರಜ್ಞಾನದಲ್ಲಿ ವಿಶೇಷವಾಗಿ ಕ್ರಾಂತಿಕಾರಿ ಕೊಡುಗೆ

ಪ್ರಥಮ ಪ್ರದರ್ಶನದಲ್ಲೇ ಪ್ರೇಕ್ಷಕರ ಮನಗೆದ್ದ “ಮಾಯೊದ ಮಹಾಶಕ್ತಿಲು”

ಎಂ.ಕೆ. ಬಾಲರಾಜ್‌ ಸಾರಥ್ಯದ “ಎಂಕಲ್ನ ಕಲಾವಿದೆರ್” ಮಟ್ಟು ಕಟಪಾಡಿ ಅಭಿನಯಿಸಿದ “ಮಾಯೊದ ಮಹಾಶಕ್ತಿಲು” ಎಂಬ ತುಳು ಭಕ್ತಿ ಪ್ರಧಾನ ಅದ್ಧೂರಿ ನಾಟಕ ಪ್ರಥಮ ಪ್ರಯೋಗದಲ್ಲೇ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಳೆದ ಏಳನೇ ತಾರೀಕಿನಂದ್ದು ಉಡುಪಿಯ ಅಜ್ಜರಗಾಡು ಭುಜಂಗ ಪಾರ್ಕಿನ ಬಯಲು ರಂಗಮಂದಿರಲ್ಲಿ ನಡೆದ ನಾಟಕ ವೀಕ್ಷಿಸಲು ಕಲಾಭಿಮಾನಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ನಾಟಕದ ಪ್ರತಿಯೊಂದು ಮಜಲುಗಳನ್ನು ಆಡಿಕೊಂಡಾಡಿ ನಾಟಕ

ರಾಜ್ಯಮಟ್ಟದ ಪಿನ್ ಕೋಡ್ ಮಾದರಿಯ ವಾಲಿಬಾಲ್ ಪಂದ್ಯಾಟ

ನಿರಂತರವಾದ ಕಠಿಣ ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ. ಸೋಲೇ ಗೆಲುವಿನ ಸೋಪಾನ ಕ್ರೀಡಾ ಕ್ಷೇತ್ರವು ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆ ಕ್ರೀಡೆಯಿಂದ ಶಿಸ್ತು ಸಂಯಮ ಮತ್ತು ಆರೋಗ್ಯ ವೃದ್ಧಿಸುತ್ತದೆ. ಜೀವನದಲ್ಲಿ ಉತ್ತಮ ಸಾಧನೆಗಳನ್ನು ಸಾಧಿಸಲು ಕ್ರೀಡೆಯಿಂದ ಸಾಧ್ಯ ಎಂದು ಮುಲ್ಲಡ್ಕ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ. ಮಿಲ್ಟನ್ ಡಿಸೋಜಾ ಹೇಳಿದರು. ಅವರು ಮುಂಡ್ಕೂರು ಭಾರ್ಗವ ವೇದಿಕೆಯ ಮುಂಭಾಗದಲ್ಲಿ ಶ್ರೀ

ಮೂಡುಬಿದಿರೆ: ಸಂವಿಧಾನ ವಿರೋಧಿ ಹೇಳಿಕೆ ನೀಡಿದ ಸಂಸದ ಅನಂತ್ ಕುಮಾರ್ ಹೆಗಡೆ: ಕಾಂಗ್ರೆಸ್‌ನಿಂದ ಪ್ರತಿಭಟನೆ ಆಕ್ರೋಶ

ಮೂಡುಬಿದಿರೆ: ಲೋಕಸಭೆಯಲ್ಲಿ 400 ಸದಸ್ಯ ಬಲ ಬಂದರೆ ಸಂವಿಧಾನ ತಿದ್ದುಪಡಿ ಮಾಡುತ್ತೇವೆಂಬ ಹೇಳಿಕೆ ನೀಡಿರುವ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗಡೆ ಅವರ ಭಾವಚಿತ್ರಕ್ಕೆ ಪೊರಕೆಯಲ್ಲಿ ಹೊಡೆಯುವ ಮೂಲಕ ಕಾಂಗ್ರೆಸಿಗರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ತಾಲೂಕು ಆಡಳಿತ ಸೌಧದ ಮುಂಭಾಗ ನಡೆದಿದೆ. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ನಮ್ಮ ದೇಶಕ್ಕೆ ಬೇಕಾದಂತಹ ಸಂವಿಧಾನವನ್ನು ಬರೆದವರು

ಮಂಗಳೂರು: ಅಪ್ಸರಾ ಐಸ್‌ ಕ್ರೀಂನ 2ನೇ ಶಾಖೆ ಶುಭಾರಂಭ

ಈಗಾಗಲೇ ಜನಪ್ರಸಿದ್ಧಿಯನ್ನು ಪಡೆದಿರುವ ಕಾಮಾಕ್ಷಿ ವೇಂಚರ್ಸ್‌ನ ಅಪ್ಸರಾ ಐಸ್‌ಕ್ರೀಂ ಮತ್ತೊಂದು ಶಾಖೆ ನಗರದ ಮಣ್ಣಗುಡ್ಡದ ಲೋಟಸ್ ಧಾಮ್ ನಲ್ಲಿ ಶುಭಾರಂಭಗೊಂಡಿತು. 1971 ರಿಂದ ಮುಂಬೈನ ರತ್ನವಾಗಿರುವ ಅಪ್ಸರಾ ಐಸ್ ಕ್ರೀಮ್ಸ್, ಮಂಗಳೂರಿನಲ್ಲಿ ಮಣ್ಣಗುಡ್ಡದಲ್ಲಿ ತನ್ನ ಎರಡನೇ ಮಳಿಗೆಯನ್ನು ತೆರೆದಿದೆ. ಈಗಾಗಲೇ ಮಂಗಳೂರಿನ ಕದ್ರಿಯಲ್ಲಿ ಅಪ್ಸರಾ ಐಸ್ ಕ್ರೀಮ್ಸ್ ತನ್ನ ಮೊದಲ ಮಳಿಗೆಯನ್ನು ತೆರೆದು ಯಶಸ್ಸನ್ನು ಕಂಡಿದೆ. ಮಣ್ಣಗುಡ್ಡದ ಗಾಂಧಿ ಪಾರ್ಕ್ ನ

ಮಂಗಳೂರು: ವಿಶ್ವ ಹಿಂದೂ ಪರಿಷತ್ ನ ಎಲ್.ಶ್ರೀಧರ್ ಭಟ್ ನಿಧನ

ಜಿಲ್ಲೆಯ ವಿಶ್ವ ಹಿಂದೂ ಪರಿಷತ್’ನ ಪ್ರೇರಕ ಶಕ್ತಿಯಾಗಿದ್ದಂತಹ ಎಲ್.ಶ್ರೀಧರ್ ಭಟ್ ಅವರ ನಿಧನಕ್ಕೆ ಶಾಸಕ ವೇದವ್ಯಾಸ್ ಕಾಮತ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದರು. “ಶ್ರೀಯುತರು ಸಂಘದ ಹಿರಿಯ ಸ್ವಯಂಸೇವಕರು, ಸಂಸ್ಕೃತ ಮತ್ತು ಹಿಂದಿ ಪ್ರಾಧ್ಯಾಪಕರು, ಮಂಗಳ ಸೇವಾಶ್ರಮ, ಗೋ ವನಿತಾಶ್ರಯ ಟ್ರಸ್ಟ್ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿದ್ದರು. ಸಾಮಾಜಿಕ ಮತ್ತು ಸೇವಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮಾಡಿಸಿದ್ದ

ಮಂಗಳೂರು: ಎಂಸಿಸಿ ಬ್ಯಾಂಕಿನಲ್ಲಿ ಮಹಿಳಾ ದಿನಾಚರಣೆ

ಎಂಸಿಸಿ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ಬ್ಯಾಂಕಿನ ಮಹಿಳಾ ಸಿಬಂದಿಯ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ವೈಟ್ ಡೌವ್ಸ್ ಸಂಸ್ಥೆಯ ಸಂಸ್ಥಾಪಕಿ ಶ್ರೀಮತಿ ಕೋರಿನ್ ರಸ್ಕಿನ್ಹಾ ಹಾಜರಿದ್ದರು. ಬ್ಯಾಂಕಿನ ನಿರ್ದೇಶಕಿಯರಾದ ಶ್ರೀಮತಿ ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಪ್ಲಾವಿಯ ಡಿಸೋಜ, ಶ್ರೀಮತಿ ಶರ್ಮಿಳಾ ಮಿನೇಜಸ್, ಬ್ಯಾಂಕಿನ ಶಾಖಾ ಪ್ರಬಂಧಕರಾದ ಶ್ರೀಮತಿ ಬ್ಲಾಂಚ್ ಫೆರ್ನಾಂಡಿಸ್, ಶ್ರೀಮತಿ

ಮಂಗಳೂರು : ಹಿರಿಯ ಪತ್ರಕರ್ತರಿಗೆ ಪ್ರೆಸ್‌ಕ್ಲಬ್ ಗೌರವ ಸನ್ಮಾನ ಪುರಸ್ಕಾರ

ಮಂಗಳೂರು ಪ್ರೆಸ್‌ಕ್ಲಬ್ ದಿನಾಚರಣೆಯ ಸಂಭ್ರಮದ ಕಾರ್ಯಕ್ರಮವು ಮರವೂರು ದಿ ಗ್ರ್ಯಾಂಡ್ ಬೇ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಿ4 ನ್ಯೂಸ್‌ನ ವರದಿಗಾರ ಶರತ್ ಸಾಲ್ಯಾನ್ ಸೇರಿದಂತೆ 9 ಮಂದಿ ಹಿರಿಯ ಪತ್ರಕರ್ತರಿಗೆ ಪ್ರೆಸ್‌ಕ್ಲಬ್ ಗೌರವ ಸನ್ಮಾನ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮವನ್ನು ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಮಾಜದಲ್ಲಿ ತರೆ ಮರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರ ಸಾಧನೆಯನ್ನು