ಮಾಲ್ ಗೆ ತೆರಳಿದ ಎರಡು ಮಕ್ಕಳ ತಾಯಿ ನಾಪತ್ತೆ
ಉಳ್ಳಾಲ : ನಗರದ ಸಿಟಿ ಸೆಂಟರ್ ಮಾಲ್ ಗೆಂದು ತೆರಳಿದ್ದ ಚೆಂಬುಗುಡ್ಡೆ ನಿವಾಸಿ ಇಬ್ಬರು ಮಕ್ಕಳ ತಾಯಿ ನಾಪತ್ತೆಯಾಗಿರುವ ಕುರಿತು ಮಂಗಳೂರು ಉತ್ತರ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ.
ಚೆಂಬುಗುಡ್ಡೆ ಕೆರೆಬೈಲ್ ಗುಡ್ಡೆ ನಿವಾಸಿ ಸಫಾನ (27) ನಾಪತ್ತೆ ಯಾದವರು.ಎ.28 ರಂದು ತಾಯಿ ಜೊತೆಗೆ ಸಿಟಿಸೆಂಟರ್ ಗೆಂದು ತೆರಳಿರುವ ಸಫಾನ, ಬಳಿಕ ಮನೆಯತ್ತ ಬಾರದೇ ನಾಪತ್ತೆಯಾಗಿದ್ದಾಳೆ. ವಿವಾಹಿತೆಯಾಗಿರುವ ಸಫಾನ ಇಬ್ಬರು ಮಕ್ಕಳ ತಾಯಿಯಾಗಿದ್ದಾಳೆ. ಈಕೆಯನ್ನು ಕಂಡುಬಂದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.