ಶ್ರೀ ಶಾರದ ಸದ್ವಿದ್ಯಾ ಶಿಬಿರ ಸಮಾರೋಪ ಸಮಾರಂಭ ಕಾರ್ಯಕ್ರಮ
ಬೈಂದೂರು ತಾಲೂಕಿನ ನಾವುಂದ ಬಡಾಕೆರೆ ಧಾರ್ಮಿಕ ಮಂದಿರದಲ್ಲಿ ಕಳೆದ 21 ದಿನಗಳ ಕಾಲ ನಡೆದ ಶ್ರೀ ಶಾರದ ಸದ್ವಿದ್ಯಾ ಶಿಬಿರದ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು.ವಿದ್ಯಾರ್ಥಿಗಳು ಶಿಬಿರದ ಅನುಭವನ್ನು ಹಂಚಿಕೊಂಡರು.
ವೇದಾಂತ ಪ್ರಾಧ್ಯಾಪಕರು ಕೇಂದ್ರಿಯ ಸಂಸ್ಕøತ ವಿಶ್ವವಿದ್ಯಾನಿಲಯ ರಾಜೀವ್ ಗಾಂಧಿ ಪರಿಸರ ಶೃಂಗೇರಿ ಡಾ.ಗಣೇಶ್ ಈಶ್ವರ ಭಟ್ ಅವರು ಮಾತನಾಡಿ,ಆರ್ಯುವೇದ ಮತ್ತು ವೇದ ಶಾಸ್ತ್ರ ಸೇರಿದಂತೆ ಸನಾತನ ಪರಂಪರೆನ್ನು ಹೊಂದಿರುವ ಭಾರತೀಯ ವಿದ್ಯೆಗೆ ಆಧುನಿಕ ಯುಗದಲ್ಲಿಯೂ ಅವಕಾಶಗಳು ತೆರೆದುಕೊಳ್ಳುತ್ತಿದೆ.ಭಾರತ ಜಗದ್ಗುರು ಸಾಲಿನಲ್ಲಿ ನಿಲ್ಲಬೇಕಾದರೆ ಭಾರತೀಯ ವಿದ್ಯೆಗೆ ಮಾನ್ಯತೆ ನೀಡಬೇಕಾಗಿದೆ.ಧರ್ಮ ಮಾರ್ಗದಲ್ಲಿ ಜೀವನ ನಡೆಸಬೇಕಾದರೆ ವಿದ್ಯಾರ್ಥಿಗಳಿಗೆ ಇಂತಹ ಶಿಬಿರಗಳು ಆದರ್ಶವಾಗಿರುತ್ತದೆ ಎಂದು ಹೇಳಿದರು.
ಗುರು ಶಿಷ್ಯ ಪರಂಪರೆಯಿಂದ ವೇದವೂ ಬೆಳೆದು ಬಂದಿದೆ.ವೇದವು ಪ್ರಾಚಿನವಾದ ಗ್ರಂಥವಾಗಿದ್ದು ವೇದಕ್ಕಿಂತ ಮಿಗಿಲಾದ ಗ್ರಂಥ ಜಗತ್ತಿನಲ್ಲಿ ಬೇರೆ ಯಾವುದು ಇಲ್ಲಾ.ಮನುಷ್ಯ ಜೀವನ ಸಾರ್ಥಕತೆಗೊಳ್ಳಲು ಧರ್ಮ ಮುಖ್ಯವಾಗಿದೆ.ಸನಾತನ ಧರ್ಮದ ಅಡಿಯಲ್ಲಿ ನಮ್ಮ ದೇಶದ ಸ್ತ್ರೀಯರಿಗೂ ಶಿಕ್ಷಣ ದೊರಕುತ್ತಿದ್ದು.ಸಂಸ್ಕಾರಯುತವಾದ ಶಿಕ್ಷಣವನ್ನು ಪಡೆಯುವುದರಿಂದ ಆದರ್ಶ ಜೀವನವನ್ನು ಕಂಡುಕೊಳ್ಳುವುದರ ಜತೆಗೆ ಧರ್ಮದ ರಕ್ಷಣೆಯನ್ನು ಮಾಡಬಹುದಾಗಿದೆ ಎಂದು ಹೇಳಿದರು.
ಪ್ರಾಂತೀಯ ಧರ್ಮಾಧಿಕಾರಿಗಳು ಶ್ರೀಶಾರದ ಪೀಠಂ ಶೃಂಗೇರಿ ವೇದ.ಮೂರ್ತಿ ಲೋಕೇಶ ಅಡಿಗ ಅವರು ಮಾತನಾಡಿ,ಆಧುನಿಕ ಶಿಕ್ಷಣದ ಜತೆಗೆ ಇಂದಿನ ಮಕ್ಕಳಿಗೆ ಭಾರತೀಯ ಪರಂಪರೆ ಶಿಕ್ಷಣ ನೀಡುವುದು ಮುಖ್ಯವಾಗಿದೆ.ವಿದ್ಯಾರ್ಥಿಗಳ ಜ್ಞಾನ ವೃದ್ಧಿಯಾಗಲು ಹಾಗೂ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಇಂತಹ ಶಿಬಿರಗಳು ಬಹಳಷ್ಟು ಪ್ರಯೋಜನಕಾರಿಯಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಸಲಕ್ಷಣ ಘನಪಾಠಿಗಳು ಪ್ರಾಚಾರ್ಯರು ಸ್ವರ್ಣವಲ್ಲಿ ವೇದ.ಮೂರ್ತಿ ಉದಯ ವೈದ್ಯ ಅವರು ಮಾತನಾಡಿ,ವೈಧಿಕ ವಿಚಾರದ ಕುರಿತು ಹಾಗೂ ಕರ್ಮಾಂಗಳ ಕುರಿತು ಇಂದಿನ ಪೀಳಿಗೆಗೆ ಮಕ್ಕಳಿಗೆ ಶಿಬಿರದ ಮೂಲಕ ಕಿರು ಪರಿಚಯ ಮಾಡಿಕೊಟ್ಟಿರುವುದು ಬಹಳಷ್ಟು ಅನುಕೂಲಕರವಾಗಿದೆ.ಸಮಗ್ರ ವೇದವೂ ಬ್ರಹ್ಮನಿಂದ ಸೃಷ್ಟಿಸಲ್ಪಟ್ಟಿದೆ ಸಹಸ್ರಾರು ವರ್ಷಗಳ ಕಾಲದ ಇತಿಹಾಸವನ್ನು ಹೊಂದಿರುವ ವೇದದ ಅಧ್ಯಾಯವನ್ನು ಮಾಡುವಲ್ಲಿ ವಿದ್ಯಾರ್ಥಿಗಳು ಆಸಕ್ತಿಯನ್ನು ಹೊಂದಬೇಕಾಗಿದೆ ಎಂದು ಹೇಳಿದರು.
ಮಾಧವ ಅಡಿಗ ಅಧ್ಯಕ್ಷತೆ ವಹಿಸಿದ್ದರು.,ಡಾ.ಸುಬ್ರಹ್ಮಣ್ಯ ಉಡುಪ ಆಲೂರು,ಜೌತಿಷ್ಯ ವಿದ್ವಾನ್ ವೆಂಕಟೇಶಮೂರ್ತಿ ಎನ್.ಸಿ,ಕೃಷ್ಣಾನಂದ ಚಾತ್ರ,ವಿಶ್ರಾಂತ ಉಪನ್ಯಾಸಕ ಜನಾರ್ದನ ಮರವಂತೆ ಉಪಸ್ಥಿತರಿದ್ದರು.