ಮಂಗಳೂರು: ಬಲ್ಲಾಳ್ ಭಾಗ್‌ನಲ್ಲಿ ಹಿಂದೂಗಳ ಮೇಲೆ ಅನ್ಯಧರ್ಮದವರಿಂದ ನಡೆದಿರುವ ದೌರ್ಜನ್ಯವನ್ನ ಖಂಡಿಸಿ, ಕೋಮುವಾದಿಗಳಿಂದ ಬಲ್ಲಾಳ್‌ಭಾಗ್ ರಕ್ಷಿಸಿ, ಜನಜಾಗೃತಿ ಪ್ರತಿಭಟನಾ ಸಭೆಯನ್ನ ಹಮ್ಮಿಕೊಳ್ಳಲಾಗಿತ್ತು. ಇನ್ನು ದೌರ್ಜನ್ಯ ನಡೆಸಿದ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಬೇಕೆಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ. ಮಂಗಳೂರಿನ ಬಲ್ಲಾಳ್ ಭಾಗ್‌ನಲ್ಲಿ ಹಿಂದೂಗಳ
ಮನುಷ್ಯ ಮತ್ತು ಶ್ವಾನದ ನಡುವೆ ಹೆಣೆದ ಕಥೆಯೊಂದಿಗೆ ತಯಾರಾದ ವಿಶಿಷ್ಠ ಶೈಲಿಯ ಹಾಡೊಂದು ಬಿಡುಗಡೆಗೆ ಸಿದ್ಧವಾಗಿದೆ. ಮಂಗಳೂರಿನ ವಿವೇಕ್ ಗೌಡ ನಿರ್ದೇಶಿಸಿ, ನಿರ್ಮಿಸಿರುವ ಭೇಟಿ ಎಂಬ ಹೆಸರಿನ ಕನ್ನಡ ವಿಡಿಯೋ ಆಲ್ಬಾಂ ಸಾಂಗ್ ನವೆಂಬರ್ 12 ರಂದು ಯೂಟ್ಯೂಬ್‌ನಲ್ಲಿ ರಿಲೀಸ್ ಆಗಲಿದೆ. ಶ್ವಾನ ಮತ್ತು ಮನಷ್ಯನ ನಡುವೆ ಸುತ್ತ ಹೆಣೆದ ಕಥೆಯೊಂದು ಆಲ್ಬಾಂ ಸಾಂಗ್ ಮೂಲಕ ತಯಾರಾಗಿದ್ದು, ನವೆಂಬರ್ 12 ರಂದು ಯೂಟ್ಯೂಬ್‌ನಲ್ಲಿ ರಿಲೀಸ್ ಆಗಲಿದೆ. ಫೆಡರೇಷನ್ ಆಫ್ ಇಂಡಿಯನ್
ದಕ್ಷಿಣ ಕನ್ನಡ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ನವೆಂಬರ್ 20 ರಂದು ಆಯೋಜಿಸಲಾಗಿದೆ ಎಂದು ಗೌರವ ಕಾರ್ಯದರ್ಶಿ ತಾರನಾಥ ಶೆಟ್ಟಿ ಹೇಳಿದರು. ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕ್ರೀಡಾಕೂಟವು ಬೆಳಗ್ಗೆ 9 ಗಂಟೆಗೆ ಉದ್ಘಾಟನೆಗೊಂಡು, ಸಂಜೆ 4 ಗಂಟೆಗೆ ಕ್ರೀಡಾಕೂಟದ ಸಮಾರೋಪ ನಡೆಯಲಿದೆ. ಇದರದಲ್ಲಿ ಬಾಲಕ ಬಾಲಕಿಯರ 12 ರಿಂದ 16 ರ ವಯೋಮಿತಿಯ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ ಪೂರ್ವ ಪ್ರಾಥಮಿಕ ತರಗತಿಗಳು ಮತ್ತು ಅಂಗನವಾಡಿಗಳು ಆರಂಭವಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಲ್ಲಿ ಮಕ್ಕಳ ಕಲರವ ಮನೆಮಾಡಿದೆ. ಇಂದಿನಿಂದ ಅಂಗನವಾಡಿ, ಎಲ್‍ಕೆಜಿ ಮತ್ತು ಯುಕೆಜಿ ತರಗತಿ ಆರಂಭವಾಗಿದ್ದು ಮಕ್ಕಳ ಶಾಲೆಗಳ ಕಡೆ ಮುಖ ಮಾಡಿದ್ದಾರೆ. ಅಂಗನವಾಡಿ ಕೇಂದ್ರಗಳನ್ನು ಮೊದಲಿನ ಹಂತದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ತೆರೆಯಬಹುದಾಗಿದೆ. ಮುಂದಿನ ಸೂಚನೆವರೆಗೆ ಪೂರಕ ಪೌಷ್ಟಿಕ ಆಹಾರವನ್ನು
ಚಿನ್ನ ಮತ್ತು ವಜ್ರಾಭರಣಗಳಿಗೆ ಪ್ರಸಿದ್ಧಿಯನ್ನು ಪಡೆದಿರುವ ಎಸ್.ಎಲ್ ಶೇಟ್ ಡೈಮಂಡ್ ಹೌಸ್ ನ ಹೊಸ ಮಳಿಗೆ ನವಂಬರ್ 8ರಂದು ನಗರದ ಲೇಡಿಹಿಲ್‌ನಲ್ಲಿ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಳ್ಳಲಿದೆ. 1947ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾದ ಎಸ್.ಎಲ್ ಶೇಟ್ ಡೈಮಂಡ್ ಹೌಸ್ ಚಿನ್ನಾಭರಣ ಮಳಿಗೆ ಕೇವಲ ಕರಾವಳಿಯಲ್ಲಿ ಮಾತ್ರವಲ್ಲ ನೆರೆಹೊರೆಯ ಜಿಲ್ಲೆಯವರಿಗೂ ಚಿರಪರಿಚಿತವಾಗಿದೆ. ಆಭರಣಗಳ ಸುಂದರ ವಿನ್ಯಾಸ ಮತ್ತು ಕಸೂತಿ ಕೌಶಲದಿಂದ ಗ್ರಾಹಕರನ್ನು ಆಕರ್ಷಿಸುತ್ತಿದೆ. ಈ
ಉದಾರೀಕರಣ,ಖಾಸಗೀಕರಣ ದೇಶದ ದುಡಿಯುವ ಜನವಿಭಾಗ,ಸಣ್ಣ ವ್ಯಾಪಾರಸ್ಥರು ಸೇರಿದಂತೆ ಬಹುತೇಕರ ಬದುಕುವ ಹಕ್ಕನ್ನೇ ಕಸಿದುಕೊಳ್ಳುತ್ತಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರ ವ್ಯಾಪಾರಕ್ಕೆ ಪೂರ್ತಿಯಾಗಿ ತೆರೆದುಕೊಂಡಿದ್ದು ಸಾಮಾನ್ಯ ಜನರಿಗೆ ಕೈಗೆಟುಕದಷ್ಟು ದುಬಾರಿಯಾಗಿದೆ. ಚಪ್ಪಲಿ, ದಿನಸಿ, ತರಕಾರಿ, ಮೀನು ಮಾಂಸದಂತಹ ಚಿಲ್ಲರೆ ವ್ಯಾಪಾರದಲ್ಲೂ ಕಂಪೆನಿಗಳು ಏಕಸ್ವಾಮ್ಯ ಸಾಧಿಸುತ್ತಿದ್ದು ಸಣ್ಣ ಪುಟ್ಟ ಪೇಟೆ ಪಟ್ಟಣಗಳಲ್ಲೂ ತಮ್ಮ ಬೃಹತ್ ಅಂಗಡಿ ಮಳಿಗೆಗಳನ್ನು
ಮಂಗಳೂರು: ಹೂವಿನ ಮಕರಂದ ಹೀರಿ ಜೇನು ನೊಣ, ಸಿಹಿಯಾದ ಜೇನು ತುಪ್ಪ ತಯಾರಿಸುತ್ತದೆ ಅಂತ ಎಲ್ಲರಿಗೂ ಗೊತ್ತು. ಆದ್ರೀಗ, ಇದೇ ಜೇನು ನೊಣಗಳ ದೇಹದಿಂದ ಉತ್ಪತ್ತಿಯಾಗುವ ವಿಷ, ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತೆ ಅಂದ್ರೆ ನೀವು ನಂಬಲೇಬೇಕು. ಅತ್ಯಂತ ಬೆಲೆಬಾಳುವ ಈ ನೊಣಗಳ ವಿಷ ಸಂಗ್ರಹಿಸುವ ಸಾಹಸಕ್ಕೆ ಕೈ ಹಾಕಿ, ಮಂಗಳೂರಿನ ಯುವಕನೊಬ್ಬ ಯಶಸ್ವಿಯಾಗಿದ್ದಾರೆ. ಜೇನು ವಿಷ ಅಂದ್ರೆ ಬೀ ವೇನಮ್ ಪಡೆಯುವ ಯಂತ್ರವನ್ನು ತಯಾರಿಸಿ ವಿಷ ಸಂಗ್ರಹಿಸುವಲ್ಲಿ ಯಶಸ್ವಿಯಾಗಿರೋದು.
ಒಂದು ಕಡೆ ಜಾತಿ ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಕಾರ್ಯ ನಡೆದರೆ ಮತ್ತೊಂದು ಕಡೆ ಜಾಗತೀಕರಣ ಉದಾರೀಕರಣ ಖಾಸಗೀಕರಣ ನೀತಿಗಳ ಫಲವಾಗಿ ದೇಶದ ಆರ್ಥಿಕತೆಯನ್ನೇ ನಾಶ ಮಾಡಲಾಗುತ್ತಿದೆ.ಇದರಿಂದಾಗಿ ಹಿಂದುತ್ವ ಸರ್ವಾದಿಕಾರಶಾಹಿ ಹಾಗೂ ಕಾರ್ಪೊರೇಟ್ ನವ ಉದಾರವಾದದ ಒಂದು ವಿಷಕಾರಿ ಮಿಶ್ರಣದಿಂದ ದೇಶ ಗಂಬೀರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇಂತಹ ಸಂದರ್ಭಗಳಲ್ಲಿ ಎಡಪಂಥೀಯ ವಿಚಾರಧಾರೆಗಳಿಂದ ಮಾತ್ರವೇ ದೇಶವನ್ನು ಹಾಗೂ ಜನತೆಯ ಬದುಕನ್ನು ಉಳಿಸಲು ಸಾಧ್ಯ ಎಂದು CPIM
ಬೈಂದೂರಿನ ಶನೀಶ್ವರ ಮಂದಿರದ ಮುಖ್ಯ ರಸ್ತೆಯಲ್ಲಿ ನೂತವಾಗಿ ಇಂತಿಯಾಸ್ ಶಿರೂರು ಹಾಗೂ ಮುಸಾದಿಕ್ ಹಳ್ಗೇರಿ ಮಾಲಕತ್ವದ ಸಿಟಿ ಬಜಾರ್ ಅಲ್ ಇನ್ ಒನ್ ಶಾಪಿಂಗ್ ಬಜಾರ್ ಉದ್ಘಾಟನೆ ಗೊಂಡಿತು. ಉದ್ಘಾಟನೆಯನ್ನು ಬೈಂದೂರಿನ ಜನಪ್ರಿಯ ಶಾಸಕರಾದ ಬಿ.ಎಂ ಸುಕುಮಾರ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು. ಉದ್ಘಾಟನೆ ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಶರತ್ ಶೆಟ್ಟಿ ಉಪ್ಪುಂದ ,ರವೀಂದ್ರ ಶಾನಭಾಗ್ ಹಾಗೂ ಊರ ಪರವೂರ ಗ್ರಾಮಸ್ಥರು ಉಪಸ್ಥಿತರಿದ್ದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರವರ್ತಕರಾಗಿ ನಡೆಸುತ್ತಿರುವ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟದಿಂದ ಮೂರು ಆಸಕ್ತ ಗುಂಪಿನ ರೈತರಿಗೆ ಇಪ್ಪತ್ತಮೂರು ಟರ್ಪಾಲ್ ನ್ನು ಒಕ್ಕೂಟದ ಅಧ್ಯಕ್ಷ ರಾದ ಶ್ರೀ ಚಂದ್ರ ಪೂಜಾರಿಯವರು ವಿತರಿಸಿದರು ವಿತರಿಸಿ ಮಾತನಾಡಿದ ಅವರು ಆಕಸ್ಮಿಕ ಮಳೆ ಬರುತ್ತಿರುವ ಕಾರಣ ಭತ್ತ ಕಟಾವಿಗೆ ಸಹಾಯವಾಗಲೆಂದು ಒಕ್ಕೂಟದ ಸದಸ್ಯರಿಗೆ ಉತ್ತಮ ಗುಣಮಟ್ಟದ ಕ್ರಷಿ ಪರಿಕರಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗಿರುತ್ತದೆ


















