ಮಂಗಳೂರು: ನಗರ ಪ್ರದೇಶದಲ್ಲಿ ಔಷಧೀಯ ಸಸ್ಯಗಳನ್ನು ಬೆಳೆಸುವುದು ಇಂದಿನ ಅಗತ್ಯ ಎಂದು ಮಾಜಿ ಶಾಸಕ ಜೆ.ಆರ್.ಲೋಬೋ ಹೇಳಿದರು.ಬ್ರಹ್ಮಶ್ರೀ ನಾರಾಯಣ ಗುರುವರ್ಯರ 167ನೇ ಜನ್ಮದಿನ ಪ್ರಯುಕ್ತ ಕುದ್ರೋಳಿ ಗುರು ಬೆಳದಿಂಗಳು ಸೇವಾ ಸಂಸ್ಥೆಯಿಂದ ಔಷಧೀಯ ಸಸ್ಯಗಳ ನೆಡುವ ಸರಣಿ ಕಾರ್ಯಕ್ರಮದ ಅಂಗವಾಗಿ ಭಾನುವಾರ ಜೆಪ್ಪು ಸೇಂಟ್ ಜೋಸೆಫ್ ಆಯೋಜಿಸಲಾದ ಕಾರ್ಯಕ್ರಮದಲ್ಲಿ
ಮಂಗಳೂರಿನ ಬಜಾಲ್ ನಿವಾಸಿಯಾಗಿರುವ ವಾಲ್ಟರ್ ಮೊಂತೆರೋ(77) ಅವರು ಭಾನುವಾರದಂದು ನಿಧನರಾದರು. ಅವರು ಪುತ್ರಿಯರಾದ ವಾಣಿ ಐವನ್, ಸವಿತಾ ಲ್ಯಾನ್ಸಿ, ಸುನಿತಾ ನೋಬರ್ಟ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಸೆಪ್ಟಂಬರ್ 6ರಂದು ಬೆಳಗ್ಗೆ 9.30ಕ್ಕೆ ಬಜಾಲ್‌ನ ಇವಾನಿ ಹೌಸ್‌ನಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ 10 ಗಂಟೆಗೆ ಬಜಾಲ್‌ನ ಹೋಲಿ ಸ್ಪಿರಿಟ್ ಚರ್ಚ್‌ನಲ್ಲಿ ವಿಶೇಷ ಪೂಜೆ ನೆರವೇರಿದ ಬಳಿಕ ಅಂತ್ಯಸಂಸ್ಕಾರ ನೆರವೇರಲಿದೆ.
ಅಂತರ್ಜಾಲ ಮೂಲಕ ಶಿಕ್ಷಣ ಪಡೆಯುವ ಕಾಲ ಇಷ್ಟು ಬೇಗ ಬರುತ್ತದೆ ಎನ್ನುವ ಭಾವನೆ ಇರದಿದ್ದರೂ ಕೋವಿಡ್‌ನಿಂದಾಗಿ ಅಂತಹ ಪರಿಸ್ಥಿತಿ ಬಂದಿದೆ. ಕೆಲವು ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಎದುರಾಗಿದ್ದು, ಪರಿಹಾರ ನಿಟ್ಟಿನಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಅಭಿಪ್ರಾಯಪಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು ದಕ್ಷಿಣ ವಲಯ ಶಿಕ್ಷಕರ ದಿನಾಚರಣಾ ಸಮಿತಿ ಹಾಗೂ ಕ್ಷೇತ್ರ
ಮಂಗಳೂರು: ನಗರದ ನವ ಮಂಗಳೂರು ಬಂದರು ಟ್ರಸ್ಟ್ ಹೊಸ ಸಾಧನೆ ಮಾಡಿದ್ದು, ಇದೇ ಮೊದಲ ಬಾರಿಗೆ ಇಲ್ಲಿಂದ 22,825 ಟನ್ ಕಬ್ಬಿಣದ ಸರಕನ್ನು ರಫ್ತು ಮಾಡಲಾಗಿದೆ.ಎಂ.ವಿ. ಮಿನಿಯನ್ ಗ್ರೇಸ್ ಹಡಗು ನಗರದ ಎನ್‌ಎಂಪಿಟಿಗೆ ಬಂದಿತ್ತು. ಇದರಿಂದ ಜೆಎಸ್‌ಡಬ್ಲ್ಯು ಕಂಪನಿಗೆ ಸೇರಿದ 22,825 ಟನ್ ಕಬ್ಬಿಣದ ಸರಕನ್ನು ತುಂಬಲಾಗಿದೆ. ಸರಕು ಹೊತ್ತ ಹಡಗು ಈಜಿಪ್ಪನ ಡಾಮಿಯೆಟ್ಟ, ಇಟಲಿಯ ಮರ್ಗೇರಾ ಹಾಗೂ ಸ್ಪೇನ್‌ನ ಸಗುಂಟೋ ಬಂದರಿಗೆ ತೆರಳಲಿದೆ. ಎನ್‌ಎಂಪಿಟಿಯ 3 ನೇ ದಕ್ಕೆ ಮಿನಿಯನ್
ಮಂಗಳೂರು: ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತಿಸುವ ವಿನೂತನ ತಂತ್ರಜ್ಞಾನವನ್ನು ಮಂಗಳೂರಿನ ಬೋಟ್ ಗೆ ಅಳವಡಿಕೆ ಮಾಡಲಾಗಿದೆ. ಈ ಮೂಲಕ ವಾರಗಟ್ಟಲೆ ಸಮುದ್ರ ಮಧ್ಯೆ ಮೀನುಗಾರಿಕೆ ನಡೆಸಲು ಹೋಗುವ ಮೀನುಗಾರರು ಇನ್ನು ಮುಂದೆ ತಮ್ಮ ನಿತ್ಯ ಬಳಕೆಯ ಅವಶ್ಯಕತೆಗೆ ಬೇಕಾದ ನೀರನ್ನು ಕೊಂಡೊಯ್ಯುವ ಪ್ರಮೇಯವೇ ಇಲ್ಲ. ಆಳ ಸಮುದ್ರ ಮೀನುಗಾರಿಕೆ ನಡೆಸುವ ಮೀನುಗಾರರು ಸುಮಾರು ಹತ್ತಾರು ದಿನಗಳ ಕಾಲ ಸಮುದ್ರದ ನಡುವೆಯೇ ಮೀನುಗಾರಿಕೆ ನಡೆಸುತ್ತಿರುತ್ತಾರೆ. ಆದರೆ
ಜ್ಞಾನ ಜ್ಯೋತಿ ಕೋಚಿಂಗ್ ಕ್ಲಾಸ್ ಶ್ರೀ ಗೋಕರ್ಣನಾತೆಶ್ವರ ದೇವಸ್ಥಾನದ ಪ್ರವೇಶ ದ್ವಾರಾದ ಹತ್ತಿರ ಇರುವ ಶಿವಗಿರಿ ಅಪಾರ್ಟ್ಮೆಂಟ್ ಪ್ಲಾಟ್ ನಂಬರ್ 305ರಲ್ಲಿ ಮ್ಯಾಪ್ಸ್ ಕಾಲೇಜಿನ ಪ್ರಾಂಶುಪಾಲರು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ ಉಪ ಕುಲಸಚಿವರು ಆಗಿರುವ ಡಾ. ಪ್ರಭಾಕರ್ ನೀರ್ ಮಾರ್ಗ ಅವರ ಅಮೃತ ಹಸ್ತದಿಂದ ಉದ್ಘಾಟಿಸಲ್ಪಟ್ಟಿತು. ನಾರಾಯಣ ಗುರು ಪ್ರಥಮ ದರ್ಜೆ ಕಾಲೇಜು ಕುದ್ರೋಳಿ ಇದರ ಪ್ರಾಂಶುಪಾಲರು ಡಾ ವಸಂತ ಕುಮಾರ್, ಗೋಕರ್ಣೇಶ್ವರ ಕಾಲೇಜಿನ
ಖಾಸಗಿ ಬಸ್ ಪ್ರಯಾಣ ದರವನ್ನು ವಿಪರೀತವಾಗಿ ಏರಿಸುವ ಮೂಲಕ ದ.ಕ.ಜಿಲ್ಲಾಡಳಿತ ಸಂಪೂರ್ಣವಾಗಿ ಬಸ್ ಮಾಲಕರ ಲಾಬಿಗೆ ಶರಣಾಗಿದೆ. ಬೆರಳೆಣಿಕೆಯಷ್ಟು ಇರುವ ಬಸ್ ಮಾಲಕರ ಸಂಕಷ್ಟದ ಬಗ್ಗೆ ಭಾರೀ ಕಾಳಜಿ ವ್ಯಕ್ತಪಡಿಸುವ ಜಿಲ್ಲಾಧಿಕಾರಿಗಳು,ಜಿಲ್ಲೆಯ ಲಕ್ಷಾಂತರ ಜನತೆಯ ಸಂಕಷ್ಟವನ್ನು ಅರಿಯಲು ವಿಫಲರಾಗಿದ್ದಾರೆ ಎಂದು CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಆಕ್ರೋಶ ವ್ಯಕ್ತಪಡಿಸಿದರು. ಖಾಸಗೀ ಬಸ್ ಪ್ರಯಾಣ ದರಯೇರಿಕೆಯ ವಿರುದ್ಧ
ದ. ಕ , ಉಡುಪಿ ಜಿಲ್ಲೆಗಳಲ್ಲಿ ಸತತವಾಗಿ ವಾರಾಂತ್ಯ ಲಾಕ್ಡೌನ್ ಮುಂದುವರಿಸುತ್ತಿರುವುದರಿಂದ ಜನ ಸಾಮಾನ್ಯ ರಿಗೂ ಕೆಲ ವರ್ಗದ ವ್ಯಾಪಾರಿಗಳಿಗೂ ತೀವ್ರ ತೊಂದರೆ ಯಾಗಿದ್ದು ಅವೈಜ್ಞಾನಿಕ ಮತ್ತು ತಾರ ತಮ್ಯ ಗಳಿಂದ ಕೂಡಿದ ಈ ನಿರ್ಧಾರವನ್ನು ಪ್ರತಿಭಟಿಸಿ ಅಂಗಡಿ ತೆರೆದು ವ್ಯವಹಾರ ನಡೆಸಲು ಕರಾವಳಿ ಜಿಲ್ಲೆಗಳ ಜವಳಿ, ಪಾದರಕ್ಷೆ, ಫ್ಯಾನ್ಸಿ ಮುಂತಾದ ಅಂಗಡಿಗಳ ಮಾಲೀಕರು ನಿನ್ನೆ ನಡೆದ ಸಂಘದ ವಿಶೇಷ ಮಹಾ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಂಡರು. ಪ್ರತೀ ಅಂಗಡಿಯವರು
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಲೈಂಗಿಕ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಬಂಧಿಸಿದ್ದು ಉಳಿದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಅವರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು ಹಾಗೂ ಮಹಿಳೆಯರಿಗೆ ರಕ್ಷಣೆಯನ್ನು ನೀಡಬೇಕೆಂದು ಸರಕಾರವನ್ನು ಒತ್ತಾಯಿಸಿ ದುರ್ಗಾವಾಹಿನಿ ವತಿಯಿಂದ ಪ್ರತಿಭಟನೆ ನಡೆಸಿದರು. ಕದ್ರಿ ಮಲ್ಲಿಕಟ್ಟೆ ವೃತ್ತದ ಬಳಿ ಪ್ಲೆಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದರು. ಎಲ್ಲಾ
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶ್ರೀಕೃಷ್ಣ ಜಯಂತಿಯನ್ನು ಆಚರಿಸಲಾಯ್ತು.ಇನ್ನು ಕಾರ್ಯಕ್ರಮ ವನ್ನ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರು ಉದ್ಘಾಟಿಸಿದರು. ತದ ಬಳಿಕ ಮಾತನಾಡಿದ ಅವರು, ಈ ಬಾರಿ ಕೋವಿಡ್ ಸೋಂಕು ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿ, ದೇವರ ಅನುಗ್ರಹದಿಂದ


















