ದೇಶಾದ್ಯಂತ ಮನೆಮನೆಯಲ್ಲೂ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ದೆಹಲಿ ಕೆಂಪುಕೋಟೆಯ ಮೇಲೆ ಸತತ 9ನೇ ಬಾರಿ ರಾಷ್ಟ್ರ ಧ್ವಜಾರೋಹಣ ಮಾಡಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ತ್ಯಾಗ, ಬಲಿದಾನ, ನಿರಂತರ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ದಕ್ಕಿದೆ. ಸ್ವಾತಂತ್ರ್ಯ ಕೇವಲ ಒಬ್ಬರ ಸ್ವತ್ತಲ್ಲ.
ಉಡುಪಿಯಲ್ಲಿರುವ ಪ್ರಸಾದ್ ನೇತ್ರಾಲಯದ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿನ ನೂತನ ಚಿಕಿತ್ಸಾ ಸೌಲಭ್ಯ ವಿಭಾಗಗಳ ಉದ್ಘಾಟನಾ ಕಾರ್ಯಕ್ರಮವು ನ.21ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉದ್ಘಾಟಿಸಿ ಆಶೀರ್ವಚನ ನೀಡುವರು. ವಿದ್ವಾನ್ ಕಬಿಯಾಡಿ ಜಯರಾಮ್ ಅಚಾರ್ಯ ಶುಭಾಂಸನೆಗೈಯಲಿದ್ದಾರೆ. ಅರ್ಥಾಪ್ಟಿಕ್ ಕ್ಲಿನಿಕ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಣ್ಣ ಗುಜರಾತ್ ವಾಡ್‍ನಗರದ ಸರ್ವೋದಯ ಸೇವಾ
ಕೇಂದ್ರ ಸರಕಾರ ಮೂರು ಕೃಷಿ ಕಾಯಿದೆ ಹಿಂಪಡೆದ ಪರಿಣಾಮ ಬೆಳ್ತಂಗಡಿಯಲ್ಲಿ ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬೆಳ್ತಂಗಡಿ ಮಾಜಿ ಶಾಸಕರಾದ ವಸಂತ ಬಂಗೇರಾ ಮಾತನಾಡಿ ಕೇಂದ್ರ ಸರಕಾರ ಮೂರು ಕೃಷಿ ಮಸೂದೆಗಳನ್ನು ವಾಪಸ್ ಪಡೆದು ಕೊಂಡಿದೆ ಈ ದೇಶದ ರೈತರ ಒಗ್ಗಟ್ಟಿನ ಹೋರಾಟ ಇದಕ್ಕೆ ಕಾರಣ,ಒಂದು ವರ್ಷದಿಂದ ಹೋರಾಟ ಮಾಡುತಿದ್ದ ರೈತರು ಈ ಹಂತಕ್ಕೆ ತಲುಪುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದವರು ಮಸೂದೆ ವಾಪಸ್ ಪಡೆದಿದ್ದಾರೆ, ನಾವು ಈ ವಿಚಾರವಾಗಿ
ಕೇಂದ್ರ ಸರ್ಕಾರ ಕೊನೆಗೂ ಮೂರು ಕೃಷಿ ಮಸೂದೆಗಳನ್ನು ವಾಪಸ್ ಪಡೆದಿದೆ. ಇದರಿಂದ ಪ್ರಪಂಚದಲ್ಲಿ ಚಳುವಳಿಗಳಿಗೆ ಜಯ ಯಾವತ್ತೂ ಸಿಗುತ್ತದೆ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ಹೇಳಿದರು.ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿ ಮಸೂದೆಯನ್ನು ವಾಪಸ್ ಪಡೆಯುತ್ತೇವೆ ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಇಡೀ ಭಾರತದ ದೇಶದಲ್ಲಿ ಎಲ್ಲಾ ಜನರು ಒಗ್ಗಟ್ಟಾಗಿ ಹೋರಾಟಕ್ಕೆ
ಉಪಚುನಾವಣೆ ಸೋಲು ಮೋದಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ. ಹಾಗಾಗಿ ರೈತ ವಿರೋಧಿ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಲು ಸಾಧ್ಯವಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಅವರು ಹೇಳಿದರು. ಅವರು, ಕೃಷಿ ಮಸೂದೆ ವಿರೋಧಿಸಿ ಹೋರಾಟ ನಡೆಸಿದ ರೈತರ ಹೋರಾಟಕ್ಕೆ ಗೆಲುವು ಸಿಕ್ಕಿರುವುದಕ್ಕೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿ ಮಾತನಾಡಿದರು. ರೈತರ ನಿರಂತರ ಹೋರಾಟಕ್ಕೆ ಜಯ ಸಿಕ್ಕಿದೆ. ಸೋಲಿನಿಂದ ಮೋದಿ ಸರ್ಕಾರ
ನವದೆಹಲಿ: ಕೇಂದ್ರ ಸರ್ಕಾರ ಕೊನೆಗೂ ದೆಹಲಿ ಗಡಿಭಾಗದಲ್ಲಿ ಹೋರಾಟ ನಡೆಸುತ್ತಿದ್ದ, ದೇಶದ ಹಲವು ರಾಜ್ಯಗಳ ರೈತರು ವಿರೋಧಿಸುತ್ತಿದ್ದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಮಹತ್ವದ ನಿರ್ಧಾರವನ್ನು ಮಾಡಿದೆ. ಶ್ರೀ ಗುರುನಾನಕ್ ದೇವ್ಜಿ ಪ್ರಕಾಶ್ ಪುರಬ್ ಹಾಗೂ ದೇವ್ ದೀಪಾವಳಿ ಶುಭಕೋರುವ ಮೂಲಕ ಮಾತು ಆರಂಭಿಸಿದ ಪ್ರಧಾನಿ ಮೋದಿ, ಒಂದೂವರೆ ವರ್ಷಗಳ ನಂತರ ಕರ್ತಾರ್‌ಪಿರ್ ಕಾರಿಡಾರ್ ಮತ್ತೆ ತೆರೆದಿರುವುದು ಸಂತಸ ತಂದಿದೆ. ಗುರುನಾನಕ್ ಅವರು
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಮನೆಗೆ ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ ತುಳಸೀ ಗೌಡ ಅವರು ಹರೇಕಳದ ನ್ಯೂಪಡ್ಪು ಮನೆಯಲ್ಲಿ ಭೇಟಿ ನೀಡಿದರು. ಇಂದು ಬೆಳಗ್ಗೆ ಭೇಟಿ ನೀಡಿದ ತುಳಸಿ ಗೌಡ ಅವರು ಹಾಜಬ್ಬರ ಜೊತೆ ಉಪಹಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹರೇಕಳ ಗ್ರಾಮಸ್ಥರಿಂದ ತುಳಸಿ ಗೌಡ ಅವರನ್ನು ಅಭಿನಂದಿಸಲಾಯಿತು.
ಹರೇಕಳ ಹಾಜಬ್ಬ ಅವರು ಕಟ್ಟಿ ಬೆಳೆಸಿದ ನ್ಯೂಪಡ್ಪು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಶಾಲೆ ಯಜಮಾನನಿಗೆ ಪ್ರಶಸ್ತಿ ಪ್ರಧಾನ ನಡೆಯುವ ವೇಳೆ ಬ್ಯಾಂಡ್ ಹಾಗೂ ಚಪ್ಪಾಳೆ ಮೂಲಕ ಹಾಜಬ್ಬರನ್ನು ಹಾಡಿ ಹೊಗಳುವ ಮೂಲಕ ಗೌರವ ಸಮರ್ಪಿಸಿದರು. ಮನೆಯಲ್ಲಿ ಪತ್ನಿ , ಮೂವರು ಮಕ್ಕಳು ಹಾಗೂ ಸಂಬಂಧಿಕರು ಮೊಬೈಲ್ ಮೂಲಕ ಮನೆ ಯಜಮಾನ ಪದ್ಮಶ್ರೀ ಪುರಸ್ಕಾರ ಪಡೆಯುವುದನ್ನು ನೋಡಿ ಸಂಭ್ರಮಿಸಿದರು. ಶಾಲಾ ವಿದ್ಯಾರ್ಥಿ ಗಳಿಗೆ ಹರೇಕಳ ಹಾಜಬ್ಬನವರು ಪದ್ಮಶ್ರೀ ಪುರಸ್ಕಾರ
ಹೊಸದಿಲ್ಲಿಯಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ, ಇಂದು ಬೆಳಗ್ಗೆ ಮಂಗಳೂರಿಗೆ ಆಗಮಿಸಿದ ಹರೇಕಳ ಹಾಜಬ್ಬ ಅವರನ್ನು ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಅವರು ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಿದರು. ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ, ಅಧಿಕಾರಿಗಳು ಉಪಸ್ಥಿತರಿದ್ದರು.
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ಇಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದು ಅವರನ್ನು ಅವರ ಅಭಿಮಾನಿಗಳು ಸ್ವಾಗತಿಸಿದರು. ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ಭಾರತ ಸರಕಾರ ನೀಡುವ ನಾಲ್ಕನೇ ಅತೀ ದೊಡ್ಡ ನಾಗರಿಕ ಪ್ರಶಸ್ತಿ `ಪದ್ಮಶ್ರೀ’ ಸೋಮವಾರ ಪ್ರದಾನ ಮಾಡಲಾಯಿತು. ಪದ್ಮಶ್ರೀ ಸ್ವೀಕರಿಸಿ ಮಂಗಳೂರು ತಲುಪಿದ ಹರೇಕಳ ಹಾಜಬ್ಬ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ನೂಕುನುಗ್ಗಲು ಉಂಟಾಯಿತು. ಗ್ರಾಮೀಣ