Home Posts tagged moodabidre (Page 2)

ಮೂಡುಬಿದಿರೆ,:ನಿವೃತ್ತ ಮುಖ್ಯೋಪಾಧ್ಯಾಯ, ರಂಗನಟ ಎಚ್. ಶಾಂತಿರಾಜ ಶೆಟ್ಟಿ ನಿಧನ

ಮೂಡುಬಿದಿರೆ, : ಇಲ್ಲಿನ ಡಿ.ಜೆ. ಅನುದಾನಿತ ಹಿ.ಪ್ರಾ.ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ , ರಂಗ ಕಲಾವಿದ ಎಚ್. ಶಾಂತಿರಾಜ ಶೆಟ್ಟಿ (91)ಅವರು ಭಾನುವಾರ ನಿಧನ ಹೊಂದಿದರು. 1960ರ ಸುಮಾರಿಗೆ ಮೂಡುಬಿದಿರೆಯಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ, ವಾಸುದೇವ ರಾವ್, ಎಂ ಎಸ್.ಜೀವನ್, ವಾಸು ಸಾಲಿಯಾನ್ ಮೊದಲಾದವರ ಉತ್ಸಾಹದಲ್ಲಿ ರೂಪುಗೊಂಡಿದ್ದ ನೂತನ ಕಲಾವೃಂದದ ನಾಟಕಗಳಲ್ಲಿ

ಮೂಡುಬಿದಿರೆ: ಆಳ್ವಾಸ್‌ನ ಹಿರಿಯ ವಿದ್ಯಾರ್ಥಿನಿ ಕಿನ್ಯಾದ ನೈರೋಬಿಯಲ್ಲಿ ನಡೆಯುತ್ತಿರುವ ವಿಕಿಮೇನಿಯಾ 2025 ಸಮ್ಮೇಳನಕ್ಕೆ ಆಯ್ಕೆ

ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಹಾಗೂ ಕಾಲೇಜಿನ ವಿಕಿಪೀಡಿಯಾ ಕ್ಲಬ್‌ನ ಕ್ರಿಯಾಶೀಲ ಸದಸ್ಯೆಯಾಗಿದ್ದ ಯಕ್ಷಿತಾ ಕೀನ್ಯಾದ ನೈರೋಬಿಯಲ್ಲಿ ಆಗಸ್ಟ್ 6ರಿಂದ 9ರವರೆಗೆ ನಡೆಯಲಿರುವ “ವಿಕಿಮೇನಿಯಾ 2025” ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ. ಕರ್ನಾಟಕದಿಂದ ಆಯ್ಕೆಯಾದ ಮೂವರಲ್ಲಿ ಇವರು ಒಬ್ಬರಾಗಿದ್ದಾರೆ. ವಿಕಿಮೇಡಿಯಾ ಫೌಂಡೇಶನ್‌ನ ಆಹ್ವಾನಿತರಿಂದ ಯಕ್ಷಿತಾ ಭಾರತ ದೇಶದ ಪ್ರತಿನಿಧಿಯಾಗಿ ಸಮ್ಮೇಳನದಲ್ಲಿ

ಮೂಡುಬಿದಿರೆ:ಮೆಸ್ಕಾಂ ಜನ ಸಂಪಕ೯ ಸಭೆಗೆ ಸಾವ೯ಜನಿಕರಿಗೆ ಮಾಹಿತಿ ಇಲ್ಲ:ಪಾಲಡ್ಕ ಗ್ರಾಮಸಭೆಯಲ್ಲಿ ದೂರು

ಮೂಡುಬಿದಿರೆ : ಮೆಸ್ಕಾಂ ಇಲಾಖೆಗೆ ಸಂಬಂಧಿಸಿದಂತೆ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ಸಮಸ್ಯೆಗಳಿವೆ ಆದರೆ ತಾಲೂಕಿನಲ್ಲಿ ಮೆಸ್ಕಾಂ ನಡೆಸುವ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳ ಗಮನ ಸೆಳೆಯೋಣವೆಂದರೆ ಸಭೆ ಯಾವಾಗ ನಡೆಯುತ್ತದೆ ಎಂಬುದರ ಬಗ್ಗೆ ಸಾವ೯ಜನಿಕರಿಗೆ ಮಾಹಿತಿಯೇ ನೀಡುವುದಿಲ್ಲ ಎಂದು ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಗಳನ್ನು ಪಾಲಡ್ಕ ಗ್ರಾಮಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ಪಂಚಾಯತ್ ಅಧ್ಯಕ್ಷೆ ಅಮಿತಾ ಅಧ್ಯಕ್ಷತೆಯಲ್ಲಿ ನಡೆದ ಮಂಗಳವಾರ

ಮೂಡುಬಿದಿರೆ:ಗಾಳಿ ಮಳೆಗೆ ಮನೆಯ ಗೋಡೆ ಕುಸಿತ : ಅಪಾರ ನಷ್ಟ

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯಲ್ಲಿ ಶನಿವಾರ ಮಧ್ಯರಾತ್ರಿ ಬೀಸಿದ ಗಾಳಿ ಮಳೆಗೆ ಕಲ್ಲಬೆಟ್ಟು ಗ್ರಾಮದ ಮಡ್ಲಂಡದ ಹರೀಶ್ ಕುಲಾಲ್ ಅವರ ಮನೆಯ ಗೋಡೆಯು ಕುಸಿದು ಬಿದ್ದು ಅಪಾರ ನಷ್ಟ ಉಂಟಾಗಿದೆ. ಹರೀಶ್ ಅವರು ರಾತ್ರಿ ಮಲಗಿದ್ದ ಸಂದಭ೯ದಲ್ಲಿ ಈ ಘಟನೆ ಸಂಭವಿಸಿದ್ದು ಎರಡು ಕೋಣೆಯ ಗೋಡೆ ಕುಸಿದಿದೆ.ಪುರಸಭಾ ಸದಸ್ಯೆ ಸುಜಾತ ಶಶಿಕಿರಣ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಮೂಡುಬಿದಿರೆ : ಉಪನ್ಯಾಸಕರಿಬ್ಬರಿಂದ ವಿದ್ಯಾಥಿ೯ನಿಯ ಅತ್ಯಾಚಾರ

ಮೂಡುಬಿದಿರೆ : ಇಲ್ಲಿನ ಕಾಲೇಜೊಂದರ ಕಾಮುಕ ಉಪನ್ಯಾಸಕರಿಬ್ಬರು ಮತ್ತು ಅವರ ಸ್ನೇಹಿತನೋವ೯ ಸೇರಿಕೊಂಡು ವಿದ್ಯಾರ್ಥಿನಿಯೋರ್ವಳ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಬೆಂಗಳೂರಿನ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೂವರು ಆರೋಪಿಗಳನ್ನೂ ಅಲ್ಲಿನ ಪೊಲೀಸರು ಬಂಧಿಸಿದ್ದಾರೆಂದು ತಿಳಿದು ಬಂದಿದೆ.ಫಿಸಿಕ್ಸ್ ಉಪನ್ಯಾಸಕ ನರೇಂದ್ರ, ಬಯಾಲಜಿ ಉಪನ್ಯಾಸಕ ಸಂದೀಪ್ ಹಾಗೂ ಅವರ ಸ್ನೇಹಿತ ಅನೂಪ್ ಎಂಬವರೇ ಬಂಧಿತ ಆರೋಪಿಗಳು.ಉಪನ್ಯಾಸಕ ನರೇಂದ್ರ ನೋಟ್ಸ್

ಪ್ರೊ.ಎನ್.ಟಿ ಭಟ್, ಪ್ರೊ.ಬರಗೂರು, ನಾಗತಿಹಳ್ಳಿಗೆ ಶಿವರಾಮ ಕಾರಂತ ಪ್ರಶಸ್ತಿ

ಮೂಡುಬಿದಿರೆ: ಇಲ್ಲಿನ ಶಿವರಾಮ ಕಾರಂತ ಪ್ರತಿಷ್ಠಾನ ನೀಡುವ ಪ್ರಸಕ್ತ ವರ್ಷದ ಶಿವರಾಮ ಕಾರಂತ ಪ್ರಶಸ್ತಿಗೆ ಸಾಹಿತಿಗಳಾದ ಪ್ರೊ.ಎನ್.ಟಿ ಭಟ್, ಪ್ರೊ.ಬರಗೂರು ರಾಮಚಂದ್ರಪ್ಪ ಹಾಗೂ ಸಿನಿಮಾ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷೆ ಜಯಶ್ರೀ ಅಮರನಾಥ್ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಡಾ.ಜಯಪ್ರಕಾಶ ಮಾವಿನಕುಳಿ ತಿಳಿಸಿದ್ದಾರೆ.

ಕರಾವಳಿ ಸಹಿತ 3 ಜಿಲ್ಲೆಗಳಲ್ಲಿ ಭಾರೀ ಮಳೆ:ರೆಡ್‌ ಅಲರ್ಟ್‌ ಘೋಷಣೆ

ರಾಜ್ಯದಲ್ಲಿ ಮುಂಗಾರು ಮಳೆ ಹಲವೆಡೆ ವ್ಯಾಪಿಸಿ ಉತ್ತಮ ಮಳೆಯಾಗುತ್ತಿದ್ದು, ಕೆಲವು ಉತ್ತಮ ಮಳೆಯಾಗಿ ಜನಜೀವನ ವ್ಯಸ್ತಗೊಂಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾನುವಾರವೂ ಉತ್ತಮ ಮಳೆಯಾಗುತ್ತಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸಹಿತ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾನುವಾರ (ಜೂ.15) ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಹವಾಮಾನ ಇಲಾಖೆ  ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಕರಾವಳಿ ಭಾಗದಲ್ಲಿ ಜೂ.15ರಂದು

ವಾಲ್ಪಾಡಿ : ಶುಕ್ರವಾರ ಕಾಲು ಜಾರಿ ನೀರಿಗೆ ಬಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

ಮೂಡುಬಿದಿರೆ : ಕಳೆದ ಎರಡು ದಿನಗಳ ಹಿಂದೆ ವಾಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜೋಗೊಟ್ಟು ಎಂಬಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದ ಆನೆಗುಡ್ಡೆಯ ಗುರುಪ್ರಸಾದ್ ಅವರ ಮೃತದೇಹವನ್ನು ಈಜು ತಜ್ಞ ಈಶ್ವರ್ ಮಲ್ಪೆ ಅವರು ಮೇಲಕ್ಕೆತ್ತಿದ್ದಾರೆ. ಜೋಗೊಟ್ಟು ಬಳಿಯ ಪಡ್ಡಾಯಿಮಜಲು ಎಂಬಲ್ಲಿರುವ ಅಣೆಕಟ್ಟಿನಲ್ಲಿ ನೀರು ತುಂಬಿಕೊಂಡಿತ್ತು ಅದರ ಹಲಗೆಯನ್ನು ತೆಗೆಯಲೆಂದು ಗುರುಪ್ರಸಾದ್ ಅವರು ಕೆಳಗಿಳಿಯುತ್ತಿದ್ದ ಸಂದಭ೯ದಲ್ಲಿ ಕಾಲು ಜಾರಿ ನೀರಿಗೆ

ಮಂಗಳೂರು ವಿ. ವಿ. ರಾಣಿ ಅಬ್ಬಕ್ಕ ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯರಾಗಿ ಯೋಗೀಶ್ ಕೈರೋಡಿ ಆರಂಬೋಡಿ ಆಯ್ಕೆ

ಪ್ರಸ್ತುತ ಮೂಡುಬಿದಿರೆ ಆಳ್ವಾಸ್ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಕೈರೋಡಿ ನಿವಾಸಿ ಲೇಖಕ ಡಾ. ಯೋಗೀಶ್ ಕೈರೋಡಿ ಇವರನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ರಾಣಿ ಅಬ್ಬಕ್ಕ ಅಧ್ಯಯನ‌ ಪೀಠದ ಸಲಹಾ ಸಮಿತಿಗೆ ಸರಕಾರದ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಎಸ್ ಎಸ್ ಎಲ್ಸಿ ಪರೀಕ್ಷೆ : ಕಲ್ಲಬೆಟ್ಟು ಮೊರಾಜಿ೯ ದೇಸಾಯಿಗೆ ಶೇ 100 ಫಲಿತಾಂಶ

ಮೂಡುಬಿದಿರೆ : ದ. ಕ. ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿಶಾಲೆಯ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಒಟ್ಟು 43 ವಿದ್ಯಾರ್ಥಿಗಳು ಹಾಜರಾಗಿದ್ದು, ಹಾಜರಾದ ಎಲ್ಲಾ ವಿಧ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸತತವಾಗಿ ಶಾಲೆಗೆ ಶೇ. 100 ಫಲಿತಾಂಶವನ್ನು ನೀಡಿರುತ್ತಾರೆ. 43 ವಿದ್ಯಾರ್ಥಿಗಳಲ್ಲಿ 25ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ (ಡಿಸ್ಟಿಂಕ್ಷನ್), 17 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 01