Home Posts tagged #mudabidre

ಡಾ.ಡಿ.ಎ.ಶಂಕರ್ ಮೈಸೂರು ಅವರಿಗೆ ೨೦೨೫ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ

ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ಪ್ರಾಯೋಜಕತ್ವದ ೨೦೨೫ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಮೈಸೂರಿನ ಡಾ.ಡಿ.ಎ.ಶಂಕರ್ ಅವರ ‘ಇರುವೆಯಂತೆ ನನ್ನೊಡನೆ’ ಎಂಬ ಹಸ್ತಪ್ರತಿಯು ಗೆದ್ದುಕೊಂಡಿದೆೆ ಎಂದು ಸಂಘದ ಅಧ್ಯಕ್ಷರಾದ ಡಾ.ನಾ.ಮೊಗಸಾಲೆ ಅವರು ಘೋಷಿಸಿದ್ದಾರೆ. ಈ ಸಾಲಿನ ಸ್ಪರ್ಧೆಗೆ ಒಟ್ಟು ೨೮

ಪಡುಮಾರ್ನಾಡು: ಅಕಸ್ಮಿಕವಾಗಿ ಬಾವಿಗೆ ಬಿದ್ದು ಯುವಕ ಮೃತ್ಯು

ಮೂಡುಬಿದಿರೆ : ಪಡುಮಾನಾ೯ಡಿನಲ್ಲಿ ಯುವಕನೋವ೯ ಆವರಣಗೋಡೆ ಇಲ್ಲದ ಬಾವಿಗೆ ಅಕಸ್ಮಿಕವಾಗಿ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ.ಪಡುಮಾರ್ನಾಡು ಮುನ್ನೇರು ನಿವಾಸಿ ಬಾಲಕೃಷ್ಣ ಶೆಟ್ಟಿ ( 38) ಮೃತಪಟ್ಟ ಯುವಕ.ಪಡುಮಾರ್ನಾಡಿನ ಮೊಡಂದೇಲ್ ಎಂಬಲ್ಲಿ ಈ ಘಟನೆ ನಡೆದಿದೆ.ಎರಡು ದಿನದ ಹಿಂದೆ ಈ ಪರಿಸರದಲ್ಲಿ ಕಾರ್ಯಕ್ರಮವೊಂದು ನಡೆದಿದ್ದು ಆ ಕಾರ್ಯಕ್ರಮದಲ್ಲಿ ಈ ಯುವಕ ಭಾಗವಹಿಸಿದ್ದು ‌ಬಾವಿಗೆ ಆವರಣಗೋಡೆ ಇಲ್ಲದಿರುವುದು ಗಮನಕ್ಕೆ ಬಾರದೆ ಆಯತಪ್ಪಿ ಬಾವಿಗೆ

ಚಿಕಿತ್ಸೆಗೆ ಮಾನವೀಯ ನೆರವು ನೀಡಲು ಮನವಿ

ಮೂಡುಬಿದಿರೆ: ಕಾರ್ಕಳದ ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡು, ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಡುಮಾರ್ನಾಡು ಗ್ರಾಮದ ಅಚ್ಚರ ಕಟ್ಟೆ ನಿವಾಸಿಗಳಾದ ಶ್ಯಾಮ್ ಅಂಚನ್ ಮತ್ತು ಜಯಂತಿ ಕುಲಾಲ್ ಅವರ ಪುತ್ರ ಸಾತ್ವಿಕ್ ಕುಲಾಲ್ ಅವರ ಚಿಕಿತ್ಸೆಗೆ ದಾನಿಗಳು ಮತ್ತು ಸಾರ್ವಜನಿಕರು ಮಾನವೀಯ ನೆರವು ನೀಡಿ ಸಹಕರಿಸುವ ಅಗತ್ಯವಿದೆ. ಕುಟುಂಬವು ಆರ್ಥಿಕವಾಗಿ ಬಹಳ ದುರ್ಬಲವಾಗಿದ್ದು, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿಗಳ

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ಶ್ರೀರಾಮ್ ಗೆ ಬಿ. ಸಿ. ಎ. ವಿಭಾಗದಲ್ಲಿ 9ನೇ ರ್‍ಯಾಂಕ್

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಪದವಿ ಪರೀಕ್ಷೆಯ ಬಿ.ಸಿ.ಎ. ವಿಭಾಗದಲ್ಲಿ ಶ್ರೀ ಮಹಾವೀರ ಕಾಲೇಜು, ಮೂಡುಬಿದಿರೆಯ ಶ್ರೀರಾಮ್ ಇವರು 9ನೇ ರ್‍ಯಾಂಕ್ ಗಳಿಸಿರುತ್ತಾರೆ.ಇವರ ಸಾಧನೆಗೆ ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರಾದ ಕೆ. ಅಭಯಚಂದ್ರ ಜೈನ್ ಮತ್ತು ಸರ್ವ ಸದಸ್ಯರು, ಪ್ರಾಂಶುಪಾಲರು, ಅಧ್ಯಾಪಕರು, ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಪಡುಮಾರ್ನಾಡು ರಸ್ತೆ, ಗದ್ದೆಗಳಲ್ಲಿ ಜಲಾವೃತ

ಮೂಡುಬಿದಿರೆ: ಮಂಗಳೂರು-ಕಾರ್ಕಳ ಹೆದ್ದಾರಿಯ ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಬನ್ನಡ್ಕ ಎಸ್‌ಕೆಎಫ್ ಬಳಿ ಗುಡ್ಡ ಕುಸಿತದಿಂದ ರಸ್ತೆ ಸಂಚಾರಕ್ಕೆ ಸಮಸ್ಯೆಯುಂಟಾಗಿದೆ. ಪೋಯ್ಯದ ಪಲ್ಕೆ ಬಳಿ ಪ್ರವಾಹದಿಂದ ರಸ್ತೆ ಹಾಗೂ ಗದ್ದೆಗೆ ನೀರು ನುಗ್ಗಿ ಹಾನಿ, ಕೆಂಪುಲು ಬಳಿ ಮಳೆಯಿಂದ ರಸ್ತೆಗೆ ಹಾನಿ, ಕೆಸರ್ ಗದ್ದೆ ವಿಕ್ಟರ್ ಮನೆ ಬಳಿ ಮಳೆಯ ಪ್ರವಾಹ ದಿಂದ ಮೋರಿ ಬ್ಲಾಕ್ ಆಗಿ ಜಮೀನಿಗೆ ನೀರು ಬಂದು ಹಾನಿಯಾಗಿದೆ. ಅಂಬೂರಿ ಬಳಿಯ ಕಿರಣ್

ಮೂಲ್ಕಿ: ನಗರೋತ್ಥಾನ ಯೋಜನೆಯಡಿ ಕಚೇರಿ ಕಟ್ಟಡ ಶಂಕುಸ್ಥಾಪನೆ

ಮುಲ್ಕಿ ನಗರೋತ್ಧಾನ ಯೋಜನೆಯಡಿ ಸುಮಾರು 50 ಲಕ್ಷ ವೆಚ್ಚದ ವಿಶೇಷ ಅನುದಾನದಲ್ಲಿ ಮುಲ್ಕಿ ನಗರ ಪಂಚಾಯತ್ ನೂತನ  ಕಛೇರಿ ಕಟ್ಟಡದ ಶಂಕುಸ್ದಾಪನೆ ಕಾರ್ಯಕ್ರಮವನ್ನು ರಾಜ್ಯ ಆರೋಗ್ಯ. ಸಚಿವ ಹಾಗೂ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಿದರು. ಈ ಸಂದರ್ಭ ಮಾತನಾಡಿ, ಸರಕಾರವು ರಾಜ್ಯದಲ್ಲಿ ಶಿಸ್ತು ಬದ್ದ ಹಾಗೂ ಪಾರದರ್ಶಕ ಆಡಳಿತದೊಂದಿಗೆ ಅಭಿವೃದ್ಧಿ ಕಾರ್ಯಗಳಿಗೆ ಅನೇಕ ಯೋಜನೆಗಳನ್ನು ತಯಾರಿಸಿದ್ದು ಅಭಿವೃದ್ಧಿ ನಿರಂತರವಾಗಿ ನಡೆಯಲಿದೆ ಎಂದರು. ಈ ಸಂದರ್ಭ

ಮೂಡುಬಿದಿರೆ : ಗಾಯಗೊಂಡ ನಾಗರಹಾವಿಗೆ ಶಸ್ತ್ರ ಚಿಕಿತ್ಸೆಯಿಂದ ಮರುಜೀವ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು ರಸ್ತೆಯ ಬಳಿ ನಾಗರ ಹಾವೊಂದು ದ್ವಿಚಕ್ರ ವಾಹನದ ಚಕ್ರಕ್ಕೆ ಸಿಲುಕಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿತ್ತು. ಇದನ್ನು ಕಂಡ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡಿದ್ದರು. ತಕ್ಷಣ ಸ್ಪಂದಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾವನ್ನು ಚಿಕಿತ್ಸೆಗಾಗಿ ಉಡುಪಿಯ ವನ್ಯಜೀವಿ ಪಶುವೈದ್ಯ ಡಾ. ಯಶಸ್ವಿಯವರ ಖಾಸಗೀ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿರುತ್ತಾರೆ. ಶಸ್ತ್ರ

ಮೂಡುಬಿದಿರೆ : “ಹೃದಯ ತಜ್ಞ ಮನೆ ಬಾಗಿಲಿಗೆ” – ಉಚಿತ ತಪಾಸಣಾ ಶಿಬಿರ

ಮೂಡುಬಿದಿರೆ: ದ.ಕ ಜಿಲ್ಲಾ ಪಂಚಾಯತ್ ಮಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಗಳೂರು ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಕಾರ್ಡಿಯಾಲಜಿ ಡೋರ್‍ಸ್ಟೆಪ್ ಫೌಂಡೇಶನ್ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹೃದಯ ತಜ್ಞ ಡಾ| ಪದ್ಮನಾಭ ಕಾಮತ್ ಹಾಗೂ ತಂಡದಿಂದ ಹೃದಯ ವೈಶಾಲ್ಯ ಯೋಜನೆ “ಹೃದಯ ತಜ್ಞ ಮನೆ ಬಾಗಿಲಿಗೆ” ಹೃದಯ ಸಂಬಂಧಿತ ಕಾಯಿಲೆಗಳಿಗೆ ಉಚಿತ ತಪಾಸಣಾ ಶಿಬಿರ ಮೂಡುಬಿದಿರೆ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

ಪಣಪಿಲ ಜಯ -ವಿಜಯ ಜೋಡುಕರೆ ಕಂಬಳ ಸಂಪನ್ನ

ಮೂಡುಬಿದಿರೆ: “ಜಯ-ವಿಜಯ” ಜೋಡುಕರೆ ಕಂಬಳ ಸಮಿತಿ ಪಣಪಿಲ ಇದರ ವತಿಯಿಂದ ನಡೆಯದ ಹದಿಮೂರನೇ ವರುಷದ ಕಿರಿಯ ವಿಭಾಗದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳವು ಭಾನುವಾರ ಸಂಜೆ ಸಂಪನ್ನಗೊಂಡಿತು. ಫಲಿತಾಂಶ : ಹಗ್ಗ ಕಿರಿಯ ವಿಭಾಗದಲ್ಲಿ 20ಜತೆ ಕೋಣಗಳು ಭಾಗವಹಿಸಿದ್ದು ಕಲ್ಯಾ ಹಾಳೆಕಟ್ಟೆ ನಿತೀಶ್ ಭವಿಷ್ಯ ದೇವಾಡಿಗ ಅವರ ಕೋಣಗಳು ಪ್ರಥಮ ( ಓಡಿಸಿದವರು: ಕಾವೂರು ದೋಟ ಸುದರ್ಶನ್), ಕೆಲ್ಲಪುತ್ತಿಗೆ ಪ್ರವೀಣ್ ಕುಮಾರ್ ದ್ವಿತೀಯ ( ಕೋಣ ಓಡಿಸಿದವರು:

ಮೂಡುಬಿದರೆಯಲ್ಲಿ ತುಳು ಮಹಾಕೂಟ-2023ಕ್ಕೆ ಚಾಲನೆ

ಮೂಡುಬಿದಿರೆ: ಅಖಿಲ ಭಾರತ ತುಳು ಒಕ್ಕೂಟ(ರಿ.) ಮತ್ತು ತುಳುಕೂಟ ಬೆದ್ರ ಸಹಯೋಗದಲ್ಲಿ ಮೂಡುಬಿದಿರೆ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ತುಳು ಮಹಾಕೂಟ-2023ಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಶನಿವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಆಳ್ವರು, ಬೇರೆ ಬೇರೆ ಸಮುದಾಯದವರು ತುಳು ಭಾಷೆಯನ್ನು ಅಪ್ಪಿ ಒಪ್ಪಿಕೊಂಡಿದ್ದಾರೆ. ಇತರ ಸಮುದಾಯಗಳು ಇರುವಲ್ಲಿ ಅಲ್ಲಲ್ಲಿ ತುಳು ಸಂಘಟನೆಗಳನ್ನು ಮಾಡಬೇಕಾಗಿದೆ ಆ ಮೂಲಕ ಮುಂದಿನ