Home Posts tagged #parliament

ತಿದ್ದುಪಡಿ ಮಸೂದೆ ಪಾಸು ಮಾಡಿಕೊಳ್ಳಲು ಕಸರತ್ತು :ಅಮಾನತು ಮೂಲಕ ಮೂಕವಾದ ಸಂಸತ್ತು

ಸಂಸತ್ತಿನಿಂದ 146 ಸಂಸದರನ್ನು ಅಮಾನತು ಮಾಡುವ ಮೂಲಕ ಹಿಂದೆ ಯಾವ ಸರಕಾರವೂ ಮಾಡದ ಸಾಧನೆಯನ್ನು ಒಕ್ಕೂಟ ಸರಕಾರ ಮಾಡಿದೆ. ದೊಡ್ಡ ಮೂರ್ತಿ, ದೊಡ್ಡ ರಸ್ತೆ, ದೊಡ್ಡ ಸುರಂಗ, ಹೆಚ್ಚು ಮಸೂದೆ, ಹೊರಗೆ ದೊಡ್ಡ ಮತ್ತು ಹೆಚ್ಚು ಮಾತು. ಸಂಸತ್ತಿನೊಳಗೆ ಬಾಯಿಗೆ ಬೀಗ. ಒಕ್ಕೂಟ ಸರಕಾರದ ಗಿನ್ನೆಸ್ ದಾಖಲೆ ತಿದ್ದುಪಡಿ ಮಸೂದೆಗಳ ಸಂಖ್ಯೆಗೆ ಮಾತ್ರ ಸಂಬಂಧಿಸಿಲ್ಲ.

ಸಂಸದರ ಅಮಾನತು 141ಕ್ಕೆ ಏರಿಕೆ

ಸಂಸತ್ ಭದ್ರತಾ ಲೋಪದ ಬಗೆಗೆ ಗೃಹ ಮಂತ್ರಿ ಅಮಿತ್ ಶಾರಿಂದ ವಿವರಣೆ ಬಯಸುತ್ತಿರುವ ಪ್ರತಿಪಕ್ಷಗಳ ಬೇಡಿಕೆಗೆ ಸ್ಪಂದಿಸದ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ 49 ಲೋಕ ಸಭಾ ಸದಸ್ಯರನ್ನು ಅಮಾನತು ಮಾಡಿದರು. ಇದರಿಂದ ಅಮಾನತುಗೊಂಡಿರುವ ಒಟ್ಟು ಸಂಸದರ ಸಂಖ್ಯೆಯು 141ಕ್ಕೆ ಏರಿದೆ. ಉಕ್ಕಿನ ಮನುಷ್ಯನೋ ಸೊಕ್ಕಿನ ಮನುಷ್ಯನೋ ಎಂದು ಅಮಾನತುಗೊಂಡವರು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರುಗಳನ್ನು ಟೀಕಿಸಿದ್ದಾಗಿಯೂ ಹೇಳಲಾಗಿದೆ. ಸಂಸತ್ತಿನ ಹೊರಗೆ ಅಮಾನತುಗೊಂಡ ಸರ್ವ

ಸಂಸತ್ತಿನ ಒಳಗೆ ಭದ್ರತಾ ವೈಫಲ್ಯದ ಬಗೆಗೇಕೆ ಮೂಕರು? : 78 ಸಂಸದರ ಅಮಾನತು ಮೂಲಕ ಬಿಜೆಪಿ ಉತ್ತರ

ಸಂಸತ್ ಭದ್ರತಾ ವೈಫಲ್ಯದ ಬಗೆಗೆ ಗೃಹ ಮಂತ್ರಿ ಸಂಸತ್ತಿನಲ್ಲಿ ಉತ್ತರ ನೀಡಲೇಬೇಕು ಎಂದು ಪ್ರತಿಪಕ್ಷಗಳವರು ಒತ್ತಾಯಿಸಿದ್ದರಿಂದ ಬಿಜೆಪಿಯ ಉತ್ತರವಾಗಿ ಒಟ್ಟು 78 ಸಂಸದರನ್ನು ಅಮಾನತು ಮಾಡಲಾಗಿದೆ. ಎಲ್ಲ ಸೇರಿ 91 ಸಂಸದರನ್ನು ಅಮಾನತು ಮಾಡಲಾಗಿದೆ ಎಂದು ಇನ್ನೂ ಕೆಲವು ಹೇಳಿಕೆಗಳು ಹೊರಬಿದ್ದಿವೆ.ಲೋಕ ಸಭೆಯಿಂದ 33, ರಾಜ್ಯ ಸಭೆಯಿಂದ 45 ಎಂದು ಒಟ್ಟು 78 ಸಂಸದರನ್ನು ಅಮಾನತು ಮಾಡಲಾಗಿದೆ. ಲೋಕಸಭೆಯಿಂದ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೋಯ್, ಟಿ. ಆರ್. ಬಾಲು, ಎ.

ಅಟ್ಟಣಿಗೆಯಿಂದ ಸಂಸತ್ತಿನ ಒಳಕ್ಕೆ ದಾಳಿ : ಒಟ್ಟು ಆರು ಮಂದಿಯ ಬಣ್ಣದ ಹೊಗೆಯ ಮುಸುಕು

ಸೆಪ್ಟೆಂಬರ್ ವಿಶೇಷ ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಸ್ವೀಕಾರದ ವೇಳೆ ಅಟ್ಟಣಿಗೆಯಿಂದ ಕೆಲವರು ಮೋದೀಜಿ ಜೈ ಎಂದು ಕೂಗಿದ್ದರು. ಇದು ಭದ್ರತಾ ಲೋಪ, ನಾಳೆ ಅಟ್ಟಣಿಗೆಯಿಂದ ದಾಳಿ ಆಗಬಹುದು, ಬಾಂಬು ಎಸೆಯಬಹುದು ಎಂದು ಹಲವು ಸಂಸದರು ಆತಂಕ ವ್ಯಕ್ತಪಡಿಸಿದ್ದರು. ಈಗ ಇಬ್ಬರು ಗ್ಯಾಲರಿಯಿಂದ ಲೋಕಸಭೆಯೊಳಕ್ಕೆ ನುಗ್ಗಿ ಬಂದು ಹಾರಿ ಸಿಕ್ಕಿ ಬಿದ್ದಿದ್ದಾರೆ. ಇವರೂ ಬಲಪಂಥೀಯರೆ. ಅವರಲ್ಲಿ ಒಬ್ಬ ಮೈಸೂರಿನ ವಿದ್ಯಾರ್ಥಿ. ಪ್ರೇಕ್ಷಕರ ಗ್ಯಾಲರಿಗೆ ಪಾಸ್ ಮೈಸೂರು