ಅಟ್ಟಣಿಗೆಯಿಂದ ಸಂಸತ್ತಿನ ಒಳಕ್ಕೆ ದಾಳಿ : ಒಟ್ಟು ಆರು ಮಂದಿಯ ಬಣ್ಣದ ಹೊಗೆಯ ಮುಸುಕು

ಸೆಪ್ಟೆಂಬರ್ ವಿಶೇಷ ಸಂಸತ್ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಸ್ವೀಕಾರದ ವೇಳೆ ಅಟ್ಟಣಿಗೆಯಿಂದ ಕೆಲವರು ಮೋದೀಜಿ ಜೈ ಎಂದು ಕೂಗಿದ್ದರು.

ಇದು ಭದ್ರತಾ ಲೋಪ, ನಾಳೆ ಅಟ್ಟಣಿಗೆಯಿಂದ ದಾಳಿ ಆಗಬಹುದು, ಬಾಂಬು ಎಸೆಯಬಹುದು ಎಂದು ಹಲವು ಸಂಸದರು ಆತಂಕ ವ್ಯಕ್ತಪಡಿಸಿದ್ದರು. ಈಗ ಇಬ್ಬರು ಗ್ಯಾಲರಿಯಿಂದ ಲೋಕಸಭೆಯೊಳಕ್ಕೆ ನುಗ್ಗಿ ಬಂದು ಹಾರಿ ಸಿಕ್ಕಿ ಬಿದ್ದಿದ್ದಾರೆ. ಇವರೂ ಬಲಪಂಥೀಯರೆ. ಅವರಲ್ಲಿ ಒಬ್ಬ ಮೈಸೂರಿನ ವಿದ್ಯಾರ್ಥಿ. ಪ್ರೇಕ್ಷಕರ ಗ್ಯಾಲರಿಗೆ ಪಾಸ್ ಮೈಸೂರು ಸಂಸದ ಪ್ರತಾಪಸಿಂಹ ಕಚೇರಿ ಕಡೆಯಿಂದ ದೊರಕಿದೆ. ಇನ್ನೊಬ್ಬ ಲಕ್ನೋ ಆಧಾರ್ ಕಾರ್ಡಿನ ಸಾಗರ್ ಶರ್ಮಾ.

2001ರ ಡಿಸೆಂಬರ್ 13ರಂದು ಸಂಸತ್ತಿನ ಮೇಲೆ ಉಗ್ರ ದಾಳಿ ನಡೆದಿತ್ತು. ಅದರ 20 ವರುಷದ ದಿನವೇ ಈ ಕಿತಾಪತಿ ನಡೆದಿದೆ.
ಸಂಸತ್ತಿಗೆ ಹಲವು ಸುತ್ತಿನ ಭದ್ರತಾ ವ್ಯವಸ್ಥೆ ಇದೆ. ಆದರೂ ಪ್ರಜಾಪ್ರಭುತ್ವದ ಮೇಲೆ ದಾಳಿ ಹೇಗಾಯಿತು?

ನುಗ್ಗಿದ ಇಬ್ಬರಲ್ಲದೆ ಇನ್ನೂ ನಾಲ್ವರು ಒಟ್ಟು ಆರು ಜನರು ಸಂಸತ್ ದಾಳಿಯಲ್ಲಿ ಇದ್ದಾರೆಂದು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಗುರು ಗ್ರಾಮದ ಒಂದು ಮನೆಯಲ್ಲಿ ಇವರು ಸೇರುತ್ತಿದ್ದರು ಎಂದೂ, ಜಾಲ ತಾಣಗಳ ಮೂಲಕ ನಿರಂತರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಪಾಸ್ ನೀಡಿದವರು ಬಿಜೆಪಿಯವರು ಅಲ್ಲದಿದ್ದರೆ ವರಸೆಯೇ ಬೇರೆ ಇರುತ್ತಿತ್ತು ಎನ್ನಲಾಗಿದೆ.

Related Posts

Leave a Reply

Your email address will not be published.